Viral Video: ಮದುವೆ ಮಂಟಪದಲ್ಲಿಯೂ ಲ್ಯಾಪ್​ಟಾಪ್​ ಹಿಡಿದು ಕುಳಿತ ವರ; ವಧುವಿನ ರಿಯಾಕ್ಷನ್ ಮಿಸ್ ಮಾಡ್ಕೊಳ್ಳೊ ಹಾಗೇ ಇಲ್ಲಾ!

ಮದುವೆ ಮನೆಯಲ್ಲಿ ವರ, ವಧು ಸೇರಿದಂತೆ ಅತಿಥಿಗಳೆಲ್ಲಾ ಅಲಂಕಾರಗೊಂಡು ಸಿದ್ಧರಾಗಿದ್ದಾರೆ. ವರ ಮದುವೆ ಮಂಟಪದಲ್ಲಿ ಕುಳಿತಿದ್ದಾನೆ. ಲ್ಯಾಪ್​ಟಾಪ್​ ಹಿಡಿದು ಕೆಲಸ ಮಾಡುತ್ತಿದ್ದಾನೆ. ವಿಡಿಯೋ ನೋಡಿ...

Viral Video: ಮದುವೆ ಮಂಟಪದಲ್ಲಿಯೂ ಲ್ಯಾಪ್​ಟಾಪ್​ ಹಿಡಿದು ಕುಳಿತ ವರ; ವಧುವಿನ ರಿಯಾಕ್ಷನ್ ಮಿಸ್ ಮಾಡ್ಕೊಳ್ಳೊ ಹಾಗೇ ಇಲ್ಲಾ!
ಮದುವೆ ಮಂಟಪದಲ್ಲಿಯೂ ಲ್ಯಾಪ್​ಟಾಪ್​ ಹಿಡಿದು ಕುಳಿತ ವರ
Edited By:

Updated on: Jul 26, 2021 | 10:52 AM

ಕೊವಿಡ್ 19 ಸಾಂಕ್ರಾಮಿಕದಿಂದಾಗಿ ಅದೆಷ್ಟೋ ಜನರ ಜೀವನ ಶೈಲಿಯೇ ಬದಲಾಗಿ ಬಿಟ್ಟಿತು. ಉದ್ಯೋಗಸ್ಥರೆಲ್ಲಾ ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಎದುರಾಯಿತು. ಸಾಂಕ್ರಾಮಿಕ ರೋಗ ಹರಡದಂತೆ ತಡೆಗಟ್ಟಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅನಿವಾರ್ಯವಾಯಿತು. ಹೀಗಿರುವಾಗ ಕೆಲಸಗಾರರು ಮನೆಯಲ್ಲಿ ಬಿಡುವಿಲ್ಲದೇ ಕೆಲಸ ಮಾಡಬೇಕಾಯಿತು. ಯಾವ ಪರಿಸ್ಥಿತಿ ಎಂದರೆ ವರ ಮಂಟಪದಲ್ಲಿ ಕುಳಿತಾಗಲೂ ಲ್ಯಾಪ್​ಟಾಪ್​ ಹಿಡಿದು ಕೆಲಸ ಮಾಡುತ್ತಿದ್ದಾನೆ. ವಿಡಿಯೋ ಇದೀಗ ವೈರಲ್ ಆಗಿದೆ.

ಮದುವೆ ಮನೆಯಲ್ಲಿ ವರ, ವಧು ಸೇರಿದಂತೆ ಅತಿಥಿಗಳೆಲ್ಲಾ ಅಲಂಕಾರಗೊಂಡು ಸಿದ್ಧರಾಗಿದ್ದಾರೆ. ವರ ಮದುವೆ ಮಂಟಪದಲ್ಲಿ ಕುಳಿತಿದ್ದಾನೆ. ಲ್ಯಾಪ್​ಟಾಪ್​ ಹಿಡಿದು ಕೆಲಸ ಮಾಡುತ್ತಿದ್ದಾನೆ. ವಧು ಮದುವೆಗೆ ಅಲಂಕಾರಗೊಂಡು ಕುಳಿತಿದ್ದಾಳೆ. ವರ ಲ್ಯಾಪ್​ಟಾಪ್​ ಹಿಡಿದು ಕೆಲಸ ಮಾಡುತ್ತಿರುವುದನ್ನು ಕಂಡ ವಧು ಬಾಯಿ ಮೇಲೆ ಕೈ ಇಟ್ಟು ನಗುತ್ತಿದ್ದಾಳೆ. ವಧುವಿನ ರಿಯಾಕ್ಷನ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದೆ.

ವಿಡಿಯೋವನ್ನು ಇನ್ಸ್ಟಾಗ್ರಾಮ್​ನಲ್ಲಿ ಮೊದಲಿಗೆ ಹಂಚಿಕೊಳ್ಳಲಾಗಿದ್ದು ನೆಟ್ಟಿಗರಿಂದ ನಾನಾ ಪ್ರತಿಕ್ರಿಯೆಗಳು ಬಂದಿವೆ. ಆತನ ಮದುವೆ ಕಾರ್ಯಕ್ರಮದಲ್ಲಿಯೇ ವರನಿಗೆ ಸಮಯವಿಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು ನಗುವಿನ ಡಮೋಜಿ ಕಳುಹಿಸುವ ಮೂಲಕ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಇದನ್ನೂ ಓದಿ:

Viral Video: ವಧು-ವರರಂತೆ ಸೀರೆ, ಪಂಚೆ ತೊಟ್ಟು ಸಿಂಗಾರಗೊಂಡ ಶ್ವಾನಗಳು! ವಿಡಿಯೋ ವೈರಲ್

Viral Video: ಮದುವೆ ವೇಳೆ ಪ್ರಜ್ಞೆ ತಪ್ಪಿ ಬಿದ್ದ ವಧು; ಕಂಗಾಲಾಗಿ ಮಂಟಪದಿಂದ ಓಡಿಹೋದ ವರ!