Viral Video: ಗುಲಾಬ್ ಜಾಮೂನ್ ದೋಸೆ ಆಯ್ತು ಈಗ ಐಸ್ ಕ್ರೀಮ್ ದೋಸೆ 

| Updated By: ಅಕ್ಷಯ್​ ಪಲ್ಲಮಜಲು​​

Updated on: Feb 06, 2024 | 10:53 AM

ಈ  ಆಹಾರಗಳಲ್ಲಿ ವಿಚಿತ್ರ ಪ್ರಯೋಗಗಳು ನಡೆಯುತ್ತಲೇ ಇರುತ್ತವೆ.  ಗುಲಾಬ್ ಜಾಮೂನ್ ದೋಸೆ, ಇಡ್ಲಿ ಸಾಂಬರ್ ಐಸ್ಕ್ರೀಮ್ ರೋಲ್ ಹೀಗೆ  ಹಲವಾರು ವಿಯರ್ಡ್ ಕಾಂಬಿನೇಷನ್ ಫುಡ್​​ಗಳ ಕುರಿತ  ಫೋಟೋ, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇಂತಹ ಹೊಸ ಹೊಸ ಪ್ರಯೋಗಗಳು ನೆಟ್ಟಿಗರ ಕೋಪಕ್ಕೆ ಗುರಿಯಾಗುವುದು ಉಂಟು. ಸದ್ಯ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು ವಿಶಿಷ್ಟ ಬಗೆಯ ಐಸ್ ಕ್ರೀಮ್ ದೋಸೆಯನ್ನು ತಯಾರಿಸಿದ್ದಾರೆ. ಇದನ್ನು ನೋಡಿದ ಹಲವರು ದಯವಿಟ್ಟು ದೋಸೆಯ ಕೊಲೆ ಮಾಡ್ಬೇಡಿ ಅಂತ ಹೇಳಿದ್ದಾರೆ.

Viral Video: ಗುಲಾಬ್ ಜಾಮೂನ್ ದೋಸೆ ಆಯ್ತು ಈಗ ಐಸ್ ಕ್ರೀಮ್ ದೋಸೆ 
ವೈರಲ್ ವಿಡಿಯೋ
Follow us on

ದೋಸೆ ದಕ್ಷಿಣ ಭಾರತದ ಫೇಮಸ್ ಉಪಹಾರಗಳಲ್ಲಿ ಒಂದಾಗಿದೆ. ಮಸಾಲೆ ದೋಸೆ, ಸೆಟ್ ದೋಸೆ, ನೀರು ದೋಸೆ, ಈರುಳ್ಳಿ ದೋಸೆ, ರಾಗಿ ದೋಸೆ ಹೀಗೆ ಹೇಳುತ್ತಾ ಹೋದರೆ ವೆರೈಟಿ ವೆರೈಟಿ ದೋಸೆಗಳ ಪಟ್ಟಿಯೇ ಇದೆ. ಈ ದೋಸೆಗಳನ್ನು ತೆಂಗಿನ ಕಾಯಿ ಚಟ್ನಿ ಮತ್ತು ತರಕಾರಿ ಸಾಂಬಾರ್ ಜೊತೆಗೆ ಸವಿಯಲು  ತುಂಬಾನೇ ರುಚಿಕರವಾಗಿರುತ್ತದೆ. ನೀವು ಕೂಡಾ ಈ ಎಲ್ಲಾ ಬಗೆಯ ದೋಸೆಗಳನ್ನು ಸವಿದಿರುತ್ತೀರಿ ಅಲ್ವಾ. ಆದ್ರೇ  ಎಂದಾದರೂ ಐಸ್ ಕ್ರೀಮ್ ದೋಸೆಯನ್ನು ಸವಿದಿದ್ದೀರಾ? ಅರೇ ಏನಿದು ಐಸ್ ಕ್ರೀಮ್ ನಿಂದ  ದೋಸೆ ಹೇಗೆ ತಯಾರಿಸಲು ಸಾಧ್ಯ ಅಂತ ಯೋಚ್ನೆ ಮಾಡ್ತಿದ್ದೀರಾ? ಇತ್ತೀಚಿನ ದಿನಗಳಲ್ಲಿ ಆಹಾರಗಳಲ್ಲಿ ಈ ರೀತಿಯ ತರಹೇವಾರಿ ಪ್ರಯೋಗಗಳು ನಡೆಯುತ್ತಲೇ ಇವೆ. ಇಂತಹ ವಿಯರ್ಡ್ ಕಾಂಬಿನೇಷನ್  ಫುಡ್​​ಗಳ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಈಗ ಈ ಗುಂಪಿಗೆ  ಐಸ್ ಕ್ರೀಮ್ ದೋಸೆಯೂ ಸೇರ್ಪಡೆಯಾಗಿದೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು ಕಲರ್ ಫುಲ್ ಐಸ್ಕ್ರೀಮ್ ದೋಸೆಯನ್ನು ತಯಾರಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು @food_unk ಎಂಬ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ:


ವೈರಲ್ ವಿಡಿಯೋದಲ್ಲಿ ಸ್ಟ್ರೀಟ್ ಫುಡ್ ವ್ಯಾಪಾರಿಯೊಬ್ಬರು ಕಾದ ಹೆಂಚಿನಲ್ಲಿ ದೋಸೆ ಹಿಟ್ಟನ್ನು ಸುರಿದು,  ನಂತರ ಅದರ ಮೇಲೆ  ಬೆಣ್ಣೆಯನ್ನು ಸವರಿ ಬಳಿಕ ಅದಕ್ಕೆ  ಟುಟ್ಟಿ ಫ್ರೂಟಿ,  ಡ್ರೈ ಫ್ರೂಟ್ಸ್ ಹಾಕಿ, ದೋಸೆಯನ್ನು ಚೆನ್ನಾಗಿ ಬೇಯಿಸಿಕೊಳ್ಳುತ್ತಾರೆ. ದೋಸೆ ಬೆಂದ ಬಳಿಕ ಅದನ್ನು ಪ್ಲೇಟ್ ಗೆ  ವರ್ಗಾಯಿಸಿ, ಆ ದೋಸೆಯ ಮೇಲೆ ಒಂದು ಕಪ್ ಐಸ್ಕ್ರೀಮ್ ಮತ್ತು ಸ್ವಲ್ಪ ಚಾಕೋಲೆಟ್ ಸಿರಪ್ ಸುರಿದು, ಅದನ್ನು ಗ್ರಾಹಕರಿಗೆ ನೀಡುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ರಸ್ತೆ ಬದಿಯಲ್ಲಿ ಪಾನಿಪುರಿ ಸವಿದ ಗಜರಾಜ; ವಿಡಿಯೋ ಇಲ್ಲಿದೆ ನೋಡಿ

ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ ಎರಡುವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಒಂದುವರೆ ಸಾವಿರಕ್ಕೂ ಹೆಚ್ಚು ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಯಾರಾದರೂ ಈ ದೋಸೆ ಮತ್ತು ಐಸ್ ಕ್ರೀಮ್ ಗೆ ನ್ಯಾಯ ಒದಗಿಸಿಕೊಡಿʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇದನ್ಯಾರಪ್ಪಾ ತಿಂತಾರೆʼ ಎಂಬ ಪ್ರಶ್ನೆಯನ್ನು ಕೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼದಯವಿಟ್ಟು ದೋಸೆಯ ಕೊಲೆ ಮಾಡಬೇಡಿʼ ಎಂದು ತಮಾಷೆ ಮಾಡಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ