AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: 50 ಲಕ್ಷ ರೂ ಸಂಬಳದ ಉದ್ಯೋಗ ತೊರೆದು ಮೊಮೊ ಶಾಪ್ ತೆರೆದು ಕೋಟಿ ಸಂಪಾದಿಸಿದ ವ್ಯಕ್ತಿ

ಲಕ್ಷ ಲಕ್ಷ ರೂ ಸಂಬಳ ಸಿಗುವ ಕೆಲಸ ತೊರೆದು, ಉದ್ಯಮ ಆರಂಭಿ ಯಶಸ್ಸು ಕಂಡವರು ನಮ್ಮ ಸುತ್ತ ಮುತ್ತಲಿನಲ್ಲಿದ್ದಾರೆ. ಗುರ್ಗಾಂವ್ ಮೂಲದ ಉದ್ಯಮಿಯೊಬ್ಬರು ತಮ್ಮ ಸಣ್ಣ ಮೊಮೊ ಶಾಪ್‌ ತೆರೆದು ಆದಾಯ ಗಳಿಸುವ ವ್ಯವಹಾರವನ್ನಾಗಿಸಿಕೊಂಡಿದ್ದಾರೆ. ಈ ಯಶಸ್ವಿ ಉದ್ಯಮಿಯ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

Video: 50 ಲಕ್ಷ ರೂ ಸಂಬಳದ ಉದ್ಯೋಗ ತೊರೆದು ಮೊಮೊ ಶಾಪ್ ತೆರೆದು ಕೋಟಿ ಸಂಪಾದಿಸಿದ ವ್ಯಕ್ತಿ
ಸಾಕೇತ್ ಸೌರಭ್Image Credit source: Instagram
ಸಾಯಿನಂದಾ
|

Updated on: Feb 10, 2026 | 4:33 PM

Share

ಕೈ ತುಂಬಾ ಸಂಬಳ ಸಿಗೋ ದುಡಿಮೆ (job) ಹೊಂದಿದ್ದರೂ ಕೆಲವರಿಗೆ ತೃಪ್ತಿ ಅನ್ನೋದೆ ಇರಲ್ಲ. ಜೀವನ ಪರ್ಯಂತ ಕೊರತೆಯೊಂದು ಕಾಡುತ್ತಿರುತ್ತದೆ. ಯಾರ ಕೈ ಕೆಳಗೂ ಕೆಲಸ ಮಾಡದೇ ಸ್ವಂತವಾಗಿ ಏನಾದ್ರು ಮಾಡಿಕೊಳ್ಳಬೇಕು ಎನ್ನುವುದಿರುತ್ತದೆ. ಆದರೆ, ಗುರ್ಗಾವ್ (Gurgaon) ಮೂಲದ ಉದ್ಯಮಿಯೊಬ್ಬರು ತಮ್ಮ ಸಣ್ಣದಾದ ಮೊಮೊ ಶಾಪ್  ತೆರೆದು, ಅದನ್ನು ಹೇಗೆ ಲಾಭದಾಯಕ ವ್ಯವಹಾರವಾಗಿ ಬದಲಾಯಿಸಿ ಕೊಂಡರು ಎನ್ನುವುದಕ್ಕೆ ಇದುವೇ ನೈಜ ಉದಾಹರಣೆ. ಈ ಉದ್ಯಮಿಯ ಹೆಸರು ಸಾಕೇತ್ ಸೌರಭ್ (Saketh Sowrabh). ಲಕ್ಷಾನುಗಟ್ಟಲೇ ಸಂಬಳದ ಉದ್ಯೋಗ ತೊರೆದು ಸ್ವಂತ ಉದ್ಯಮ ಬದುಕು ಕಟ್ಟಿಕೊಂಡಿದ್ದಾರೆ. ಯಶಸ್ವಿ ಉದ್ಯಮಿಯ ವಿಡಿಯೋ ವೈರಲ್ ಆಗಿದೆ.

ದಿ ಮೊಮೊಸ್ ಮಾಫಿಯಾ (The Momos Mafia) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ 50 ಲಕ್ಷ ರೂ ಸಂಬಳದ ಕೆಲಸಕ್ಕೆ ರಾಜೀನಾಮೆ ನೀಡಿ ಮೊಮೋ ಬ್ಯುಸಿನೆಸ್ ಪ್ರಾರಂಭಿಸಿದೆ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಹೌದು, ಸಾಕೇತ್ ಸೌರಭ್ ಅವರು 2023 ರಲ್ಲಿ ತಮ್ಮ ಉತ್ತಮ ಸಂಬಳದ ಉದ್ಯೋಗವನ್ನುತೊರೆದರು. ಆ ಬಳಿಕ ದಿ ಮೊಮೊಸ್ ಮಾಫಿಯಾ ಉದ್ಯಮ ಆರಂಭಿಸಿ,ಇದೀಗ ಅದರ ಸಹ-ಸಂಸ್ಥಾಪಕ ಹಾಗೂ ಸಿಇಒ ಆಗಿದ್ದಾರೆ. ಇದೀಗ ಈ ಮೊಮೊಸ್ ಮಾಫಿಯಾ ಫ್ರಾಂಚೈಸ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಏಳು ರಾಜ್ಯಗಳಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಎರಡೂವರೆ ವರ್ಷಗಳಲ್ಲಿ, ತಮ್ಮ ಕಂಪನಿಯು  5 ಕೋಟಿಗೂ ಹೆಚ್ಚು ಆದಾಯವನ್ನು ಗಳಿಸುತ್ತಿದ್ದು ಯಶಸ್ಸು ಸಾಧಿಸಿದ್ದಾರೆ.

ವೈರಲ್‌ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ವಿಶ್ರಾಂತಿ ಪಡೆಯದೇ ದಿನದ 14 ಗಂಟೆ ಕೆಲಸ ಮಾಡಿದ ಬೆಂಗಳೂರಿನ ಮಹಿಳೆ, ಮುಂದೇನಾಯ್ತು ಗೊತ್ತಾ?

ಈ ವಿಡಿಯೋ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಆತ್ಮವಿಶ್ವಾಸವಿದ್ದರೆ ಎಲ್ಲವೂ ಸಾಧ್ಯ ಎಂದಿದ್ದಾರೆ. ಇನ್ನೊಬ್ಬರು, ಇಂತಹ ಯುವಕರು ಎಲ್ಲರಿಗೂ ಸ್ಫೂರ್ತಿ, ಇನ್ನಷ್ಟು ಯಶಸ್ಸು ಸಿಗಲಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಇದು ನಿಮ್ಮ ಜೀವನದ ಉತ್ತಮ ನಿರ್ಧಾರ, ಯಾವುದೇ ಸಂದೇಹವಿಲ್ಲ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್