Hair Extension : ಲಂಡನ್ನ ಶೌನಾ ಹಿಗ್ಗಿನ್ಸ್ ಎಂಬ 24 ವರ್ಷದ ಮಹಿಳೆ ಕೂದಲು ಉದುರುವ ಸಮಸ್ಯೆಗೆ ಪರ್ಯಾಯ ಮಾರ್ಗ ಕಂಡುಕೊಳ್ಳಲು ಹೋದಾಗ ಹೊಸದೊಂದು ಸಮಸ್ಯೆಯೇ ಉದ್ಭವಿಸಿದೆ. ಹೇರ್ ಎಕ್ಸ್ಟೆನ್ಷನ್ ಪ್ರಕ್ರಿಯೆಯಿಂದಾಗಿ ಆಕೆಯ ನೆತ್ತಿಯೇ ಬೋಳಾಗಿದೆ. ಹಣವನ್ನು ಮರುಪಾವತಿಸುವ ಬದಲು ಹೇರ್ಸ್ಟೈಲಿಸ್ಟ್ ಮತ್ತು ಸಲೂನಿನ ಮಾಲಿಕಳೂ ಆದ ಮ್ಯಾಂಡಿ ಕಾಲಿನ್ಸ್, ಆದ ಸಮಸ್ಯೆಯನ್ನು ಸರಿಪಡಿಸಲು ಹೆಚ್ಚುವರಿ ಹಣವನ್ನು ಶೌನಾಗೆ ಕೇಳಿದ್ದಾಳೆ. ಮನನೊಂದ ಶೌನಾ ಈ ವಿಷಯವನ್ನು ಫೇಸ್ಬುಕ್ನಲ್ಲಿ ಫೋಟೋಸಮೇತ ಹಂಚಿಕೊಂಡಿದ್ದಾಳೆ.
ನ್ಯೂಯಾರ್ಕ್ ಪೋಸ್ಟ್ ಈ ವರದಿಯನ್ನು ಮಾಡಿದೆ. ಹೇರ್ ಎಕ್ಸ್ಟೆನ್ಷನ್ಗಾಗಿ ಶೌನಾ ಮ್ಯಾಂಡಿಗೆ ಸುಮಾರು ರೂ. 1.39 ಲಕ್ಷ ಹಣವನ್ನು ಪಾವತಿಸಿರುವುದಾಗಿ ಹೇಳಿದ್ದಾಳೆ. ಆದರೆ ಅಂದುಕೊಂಡಿದ್ದೆ ಒಂದು ಆಗಿದ್ದೇ ಇನ್ನೊಂದು. ಹಣವೂ ಹೋಯ್ತು ಇದ್ದ ಕೂದಲೂ ಹೋದವು ಎಂಬಂಥ ಪರಿಸ್ಥಿತಿ ಶೌನಾಳದ್ದಾಗಿದೆ.
ಇದನ್ನೂ ಓದಿ : Viral: ಪಾಕಿಸ್ತಾನದಲ್ಲಿ ಶಾರುಖ್, ಸೆಲೆನಾ, ವಿರಾಟ್, ದೀಪಿಕಾ, ಮೆಸ್ಸಿ, ಕಿಮ್?!
‘ಹೇರ್ ಎಕ್ಸ್ಟೆನ್ಷನ್ ತುಂಡುತುಂಡಾಗಿ ಉದುರಲಾರಂಭಿಸಿತು. ಜೊತೆಗೆ ನನ್ನ ನೆತ್ತಿಯ ಕೂದಲೂಗಳೂ. ನಂತರ ನೆತ್ತಿಯಲ್ಲಿ ಗುಳ್ಳೆಗಳು ಕಾಣಿಸಿಕೊಂಡು ರಕ್ತಸ್ರಾವವಾಗಲಾರಂಭಿಸಿತು. ದೊಡ್ಡ ದೊಡ್ಡ ಗಾಯಗಳುಂಟಾಗಿ ಆ ಭಾಗದ ಕೂದಲೆಲ್ಲಾ ಸಂಪೂರ್ಣ ಉದುರಿದವು. ಈ ಹೊತ್ತಿಗೆ ಒಂದು ತಿಂಗಳು ಕಳೆದು ಹೋಗಿತ್ತು. ನಂತರ ಚರ್ಮರೋಗ ವೈದ್ಯರನ್ನು ಸಂಪರ್ಕಿಸಿದಾಗ ಹೇರ್ ಎಕ್ಸ್ಟೆನ್ಷನ್ ಪ್ರಕ್ರಿಯೆಯಲ್ಲಿ ವ್ಯತ್ಯಾಸವಾಗಿದ್ದಕ್ಕೆ ನೆತ್ತಿ ಗಾಯಗೊಂಡಿದೆ ಎಂದರು’ ಎಂದು ಶೌನಾ ಹೇಳಿದ್ದಾಳೆ.
ಇದನ್ನೂ ಓದಿ : Viral Video: ಪಿರಿಯಡ್ ಪೇನ್ ಸಿಮ್ಯುಲೇಟರ್; ಪೊಲೀಸ್ಗೆ ಅಳವಡಿಸಿದಾಗ…
ಅನುಭವಿಸಿದ ನೋವು ಮತ್ತು ಅವಮಾನಕ್ಕಾಗಿ ಹಣವನ್ನು ಮರುಪಾವತಿ ಮಾಡಬೇಕಾಗಿ ಮ್ಯಾಂಡಿಯಲ್ಲಿ ಕೇಳಿದಾಗ ಆಕೆ, ಮತ್ತೆ ಬೇರೆ ಎಕ್ಸ್ಟೆನ್ಷನ್ ಅಳವಾಡಿಸಲಾಗುವುದು ಎಂದಿದ್ದಾಳೆ. ತನಗೆ ನೆತ್ತಿಯ ಮೇಲೆ ಕೂದಲುಗಳೇ ಇಲ್ಲದಿರುವಾಗ ಮತ್ತೆ ಹೇರ್ ಎಕ್ಸ್ಟೆನ್ಷನ್ ಅಳವಡಿಸಲು ಹೇಗೆ ಸಾಧ್ಯ? ಎಂದು ಕೇಳಿದ್ದಾಳೆ ಶೌನಾ. ಕೊನೆಗೆ ಶೌನಾ ತನ್ನ ಇಡೀ ತಲೆಯನ್ನೇ ಬೋಳಿಸಿಕೊಂಡಿದ್ದಾಳೆ. ಈ ಸಲೂನಿಗೆ ಯಾರೂ ಹೋಗಬೇಡಿ ಎಂದು ಇತರರನ್ನು ಎಚ್ಚರಿಸಿದ್ದಾಳೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:39 pm, Thu, 13 July 23