
ವಯಸ್ಸಿಗೆ ಬಂದ ಮೇಲೆ ಯುವಕ ಯುವತಿಯರು ಪ್ರೀತಿ ಪ್ರೇಮ ಎಂದು ಡೇಟಿಂಗ್ (dating) ಮಾಡುವುದನ್ನು ನೀವು ನೋಡಿರಬಹುದು. ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಪ್ರೀತಿ ಪ್ರೇಮದ ಹಿಂದೆ ಬೀಳುವ ಯುವಕ ಯುವತಿಯರು ಡಿನ್ನರ್, ಫಿಲ್ಮ್, ಶಾಪಿಂಗ್ ಅಂತೆಲ್ಲಾ ಡೇಟಿಂಗ್ ಹೋಗಲು ಬಯಸುತ್ತಾರೆ. ಈ ವೇಳೆಯಲ್ಲಿ ತಮ್ಮ ಇಷ್ಟ ಕಷ್ಟಗಳು ಹೊಂದಿಕೆಯಾದರೆ ಮುಂದುವರೆಯುತ್ತಾರೆ. ಇಲ್ಲವಾದರೆ ತಮ್ಮ ತಾವು ದಾರಿ ತಾವು ಕಂಡುಕೊಳ್ಳುವ ಮೂಲಕ ಗುಡ್ ಬೈ ಹೇಳುತ್ತಾರೆ. ಆದರೆ ಇದೀಗ ಯುವಕನೊಬ್ಬನು ವಿದೇಶಿ ಯುವತಿಯ ಡೇಟಿಂಗ್ ಆಫರ್ ತಿರಸ್ಕರಿಸುವ ಮೂಲಕ ಶಾಕ್ ನೀಡಿದ್ದಾನೆ. ವಿದೇಶಿ ಯುವತಿಯೂ ದುಡ್ದು ಬೇಕಾ ಅಥವಾ ಡೇಟಿಂಗ್ ಮಾಡ್ಬೇಕಾ ಎಂದು ಎರಡು ಆಯ್ಕೆ ನೀಡಿದ್ದು ಹರಿಯಾಣ ಯುವಕ (haryana boy) ನು ಈ ಎರಡು ಆಯ್ಕೆಯನ್ನು ತಿರಸ್ಕರಿಸಿದ್ದಾನೆ. ಯುವಕನ ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾ (social media) ದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
rubyhexxtv ಹೆಸರಿನ ಖಾತೆಯಲ್ಲಿ ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿರುವ ರೂಬಿ ಹೆಕ್ಸ್ ಈ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರೂಬಿ ಹೆಕ್ಸ್ ಮೈ ಹಿಡಿದುಕೊಂಡು ಸೈಕಲ್ ನಲ್ಲಿ ಕುಳಿತಿದ್ದ ಅಪರಿಚಿತ ಯುವಕನ ಬಳಿ ಹೋಗಿದ್ದಾಳೆ. ಆತನ ಬಳಿ ನಿಮಗೆ 100 ಡಾಲರ್ (8,582.65 ರೂ) ದುಡ್ಡು ಬೇಕಾ? ಇಲ್ಲ ನನ್ನ ಜೊತೆಗೆ ಡೇಟಿಂಗ್ ಮಾಡಲು ಬಯಸುತ್ತೀರಾ ಎಂದು ಪ್ರಶ್ನೆ ಕೇಳಿದ್ದಾಳೆ. ಈ ವಿದೇಶಿ ಯುವತಿಯ ಆಯ್ಕೆ ಕೇಳಿ ಯುವಕನು ಜೋರಾಗಿ ನಕ್ಕಿದ್ದು ತನ್ನ ಸಹೋದರನ ಬಳಿ ಕೇಳುತ್ತೇನೆ ಎಂದು ಹೇಳಿದ್ದಾನೆ. ತದನಂತರದಲ್ಲಿ ಫೋನ್‌ನಲ್ಲಿ ತನ್ನ ಸಹೋದರನೊಂದಿಗೆ ಈ ಬಗ್ಗೆ ಸಂಭಾಷಣೆ ನಡೆಸಿರುವುದನ್ನು ನೋಡಬಹುದು. ಕೊನೆಗೆ ಈ ಯುವತಿಯ ಎರಡು ಆಯ್ಕೆಯನ್ನು ತಿರಸ್ಕರಿಸುವ ಮೂಲಕ ಶಾಕಿಂಗ್ ಉತ್ತರವನ್ನು ನೀಡಿದ್ದಾನೆ.
ಇದನ್ನೂ ಓದಿ : Video : ಬೀಚ್‌ಗೆ ಬಂದ್ರು ಮೈ ತುಂಬಾ ಬಟ್ಟೆ, ಭಾರತೀಯರು ಯಾಕೆ ಹೀಗೆ ಎಂದ ವಿದೇಶಿಗ
ಈ ವಿಡಿಯೋವೊಂದು ಅರವತ್ತೆರಡು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರು ಈ ಯುವಕನ ಉತ್ತರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಬಳಕೆದಾರರೊಬ್ಬರು ಹರಿಯಾಣದ ಹುಲಿ ಎಂದಿದ್ದಾರೆ. ಮತ್ತೊಬ್ಬರು, ಸೋಶಿಯಲ್ ಮೀಡಿಯಾದಲ್ಲಿ ತಿರಸ್ಕರಿಲ್ಪಟ್ಟ ಯುವತಿ ಈಕೆಯೇ ಇರಬೇಕು ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಇವನು ಭಾರತೀಯ ಯುವಕ, ನನಗೆ ಈ ಯುವಕನ ಉತ್ತರ ಕೇಳಿ ನಿಜಕ್ಕೂ ಹೆಮ್ಮೆ ಎನಿಸಿತು ಎಂದು ಕಾಮೆಂಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:53 pm, Thu, 5 June 25