Viral: ಪರ ಪುರುಷನೊಂದಿಗೆ ಹೊಟೇಲ್‌ ರೂಮ್‌ಗೆ ಹೋಗಿ ಗಂಡನ ಕೈಲಿ ತಗ್ಲಾಕೊಂಡ ಹೆಂಡ್ತಿ; ವಿಡಿಯೋ ವೈರಲ್‌

ಮೊನ್ನೆಯಷ್ಟೇ ವಿವಾಹಿತ ಮಹಿಳೆಯೊಬ್ಬಳು ತನ್ನ ಬಾಯ್‌ಫ್ರೆಂಡ್‌ ಜೊತೆ ಓಡಿ ಹೋಗುವ ಸಂದರ್ಭದಲ್ಲಿ ಗಂಡನ ಕೈಗೆ ಸಿಕ್ಕಿಬಿದ್ದ ಸುದ್ದಿ ಸಖತ್‌ ವೈರಲ್‌ ಆಗಿತ್ತು. ಇದೀಗ ವಿವಾಹೇತರ ಸಂಬಂಧಕ್ಕೆ ಸಂಬಂಧಿಸಿದ ಮತ್ತೊಂದು ವಿಡಿಯೋ ವೈರಲ್‌ ಆಗಿದ್ದು, ಪರ ಪುರುಷನೊಂದಿಗೆ ಹೊಟೇಲ್‌ ರೂಮ್‌ಗೆ ಹೋಗಿ ಮಹಿಳೆಯೊಬ್ಬಳು ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ದೃಶ್ಯ ಕಂಡು ಇಂತಹ ನಾಚಿಕೆಗೇಡಿನ ಕೃತ್ಯಗಳಿಂದಲೇ ಇಂದು ಅದೆಷ್ಟೋ ಜನ ಮದುವೆಯಾಗಲು ಹಿಂಜರಿಯುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ವಿವಾಹೇತರ ಸಂಬಂಧದ ಪ್ರಕರಣಗಳು ತೀರಾ ಹೆಚ್ಚಾಗಿ ಕೇಳಿಬರುತ್ತಿವೆ. ಮನೆಯಲ್ಲಿ ಹೆಂಡತಿಯಿದ್ದರೂ ಬೇರೊಬ್ಬ ಮಹಿಳೆಯ ಜೊತೆ ಸಂಬಂಧ ಇಟ್ಟುಕೊಂಡಂತಹ, ಪರ ಪುರುಷನೊಂದಿಗೆ ವಿವಾಹಿತ ಮಹಿಳೆ ತಿರುಗಾಡಿ ಗಂಡನ ಕೈಲಿ ಸಿಕ್ಕಿ ಬಿದ್ದು, ರಂಪಾಟಗಳು ನಡೆದ ಘಟನೆಗಳಿಗೆ ಸಂಬಂಧಿಸಿದ ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್‌ ಆಗಿದ್ದು, ಪರ ಪುರುಷನೊಂದಿಗೆ ಹೊಟೇಲ್‌ ರೂಮ್‌ಗೆ ಹೋಗಿ ಮಹಿಳೆಯೊಬ್ಬಳು ಗಂಡನ ಕೈಗೆ ಸಿಕ್ಕಿಬಿದ್ದಿದ್ದಾಳೆ. ಈ ದೃಶ್ಯ ಕಂಡು ಇಂತಹ ನಾಚಿಕೆಗೇಡಿನ ಕೃತ್ಯಗಳಿಂದಲೇ ಇಂದು ಅದೆಷ್ಟೋ ಜನ ಮದುವೆಯಾಗಲು ಹಿಂಜರಿಯುತ್ತಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪತ್ನಿ ಪರಪುರುಷನೊಂದಿಗೆ ಓಯೋ ರೂಮ್‌ನಲ್ಲಿ ಇರುವ ವಿಚಾರ ತಿಳಿದು ಅಲ್ಲಿಗೆ ಬಂದಂತಹ ಪತಿರಾಯ ವಿಡಿಯೋ ಮಾಡುತ್ತಾ ಇಲ್ಲಿಗೆ ನೀನ್ಯಾಕೆ ಬಂದಿದ್ದೀಯಾ? ಯಾರ ಜೊತೆ ಬಂದಿದ್ದೀಯಾ? ಕೋಪದಲ್ಲಿ ಪ್ರಶ್ನೆಗಳನ್ನು ಕೇಳುತ್ತಾ ಆಕೆಯ ಬಾಯ್‌ಫ್ರೆಂಡ್‌ಗಾಗಿ ಹುಡುಕಾಟ ನಡೆಸಿದ್ದಾನೆ. ಈ ಕುರಿತ ವಿಡಿಯೋವನ್ನು venom1s ಹೆಸರಿನ ಎಕ್ಸ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಇತ್ತೀಚಿನ ದಿನಗಳಲ್ಲಿ ಮದುವೆಯಾಗುವುದು ತುಂಬಾ ಭಯಾನಕ ಸಂಗತಿಯಾಗಿದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.

ವೈರಲ್‌ ವಿಡಿಯೋದಲ್ಲಿ ಪತ್ನಿ ತನ್ನ ಗಂಡನ ಕೈಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದ ದೃಶ್ಯವನ್ನು ಕಾಣಬಹುದು. ಪತ್ನಿಯಿರುವ ಹೊಟೇಲ್‌ ರೂಮ್‌ಗೆ ವಿಡಿಯೋ ರೆಕಾರ್ಡ್‌ ಮಾಡುತ್ತಾ ಬಂದ ಗಂಡ, ಇಲ್ಲಿ ನೀನೇನು ಮಾಡ್ತಿದ್ದೀಯಾ? ಯಾರ್‌ ಜೊತೆ ಬಂದಿದ್ದೀಯಾ? ಮಾತಾಡು ಮಾತಾಡು ಎಂದು ಕೋಪದಲ್ಲಿ ಪ್ರಶ್ನೆಯನ್ನು ಕೇಳಿದ್ದಾನೆ. ಅಷ್ಟೇ ಅಲ್ಲದೆ ಅಲ್ಲಿ ಗಂಡಸಿನ ಶೂ ಇರುವುದನ್ನು ಕಂಡು ಶಾಕ್‌ ಆದ ಗಂಡ, ಈಕೆ ಪರಪುರುಷನೊಂದಿಗೆಯೇ ಬಂದಿದ್ದಾಳೆ ಎಂದು ಗೊತ್ತಾಗಿ ಆತನಿಗಾಗಿ ಇಡೀ ರೂಮ್‌ ಹುಡುಕಾಟ ನಡೆಸಿದ್ದಾನೆ.

ಇದನ್ನೂ ಓದಿ: 7 ದಿನದ ಹಸುಗೂಸನ್ನು ಸೇತುವೆಯಿಂದ ಎಸೆದ ಪೋಷಕರು; 50ಕ್ಕೂ ಅಧಿಕ ಗಾಯಗೊಂಡಿದ್ದ ಮಗು ಬದುಕಿದ್ದೇ ರೋಚಕ

ನವೆಂಬರ್‌ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 61 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಇದೇ ಕಾರಣಕ್ಕೆ ಈಗೀಗ ಹೆಚ್ಚಿನ ಜನರು ಮದುವೆಯಾಗಲು ಹೆದರುತ್ತಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ಸ್ಕ್ರಿಪ್ಟೆಡ್‌ ವಿಡಿಯೋ ಇದ್ದಂತಿದೆʼ ಎಂದು ತಮ್ಮ ಅಭಿಪ್ರಾಯವನ್ನು ತಿಳಿಸಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇಂತಹ ನಾಚಿಕೆಗೇಡಿನ ಕೃತ್ಯಗಳಿಂದಲೇ ಇಂದು ಯುವಕರು ಮದುವೆಯಾಗಲು ಹೆದರುತ್ತಿದ್ದಾರೆʼ ಎಂದು ಹೇಳಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 4:16 pm, Sun, 3 November 24

ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More
Loading...
Unable to load recommendations.
Follow Us