Video: ಈಗೀಗ ಗಂಡಂದಿರು ಹೆಂಡ್ತಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ತಿದ್ದಾರೆ, ಯಾಕೆ ಗೊತ್ತಾ? ಈ ವಿಡಿಯೋ ನೋಡಿ

ಗಂಡನಿಗೆ ಪಾಯಿಸನ್‌ ನೀಡಿ ಸಾಯಿಸಿದ, ಹನಿಮೂನ್‌ಗೆ ಕರೆದುಕೊಂಡು ಹೋಗಿ ಹೆಂಡತಿ ಗಂಡನನ್ನು ಸಾಯಿಸಿದ, ಒಂದಾ… ಎರಡಾ… ಪ್ರಿಯಕರನಿಗಾಗಿ ಹೆಂಡ್ತಿ ಗಂಡನನ್ನೇ ಸಾಯಿಸಿದ ಅದೆಷ್ಟೋ ಘಟನೆಗಳು ನಡೆದಿವೆ. ಇದರಿಂದ ಈಗೀಗ ಗಂಡಸರು ಭಯದ ವಾತಾವರಣದಲ್ಲಿ ಜೀವಿಸುತ್ತಿದ್ದಾರೆ, ಹೆಂಡತಿ ನನ್ನನ್ನು ಎಲ್ಲಿ ಸಾಯಿಸಿ ಬಿಡುತ್ತಾಳೋ ಎಂದು ಹೆದರಿಕೊಳ್ಳುತ್ತಿದ್ದಾರೆ ಎಂದು ತೋರಿಸುವ ಫನ್ನಿ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

Video: ಈಗೀಗ ಗಂಡಂದಿರು ಹೆಂಡ್ತಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ತಿದ್ದಾರೆ, ಯಾಕೆ ಗೊತ್ತಾ? ಈ ವಿಡಿಯೋ ನೋಡಿ
ಹೆಂಡ್ತಿಗೆ ಭಯಪಡುತ್ತಿರುವ ಗಂಡ
Image Credit source: Social Media

Updated on: Jun 26, 2025 | 12:58 PM

ಹಿಂದೆಲ್ಲಾ ಹೆಂಡತಿಯರು ಗಂಡಂದಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ಳುತ್ತಿದ್ದರು. ಆದ್ರೆ ಇತ್ತೀಚಿನ ದಿನಗಳಲ್ಲಿ ಹುಡುಗ್ರು ಮದುವೆಯಾಗಲು ಭಯಪಟ್ರೆ, ಮದುವೆಯಾದ ಪುರುಷರು ಹೆಂಡತಿಯರಿಗೆ ಭಯಪಟ್ಟುಕೊಳ್ಳುತ್ತಿದ್ದಾರೆ. ಹೌದು ಈಗೀಗ ಪ್ರಿಯಕರನ ಸಲುವಾಗಿ ಹೆಂಡತಿಯರು ಗಂಡಂದಿರನ್ನು ಕೊಲ್ಲುತ್ತಿರುವಂತಹ ಪ್ರಕರಣಗಳೇ ಹೆಚ್ಚಾಗಿ ಕೇಳಿ ಬರುತ್ತಿದ್ದು, ಇದರಿಂದ ಪುರುಷರು ಹೆಂಡತಿಯರಿಗೆ ಹೆದರಿಕೊಂಡು (Husbands are so afraid of their wives) ಜೀವನ ನಡೆಸುವಂತಹ ಕಾಲ ಬಂದಂತಾಗಿದೆ, ಗಂಡಂದಿರ ಈ ಭಯದ ಜೀವನವನ್ನು ತೋರಿಸುವಂತಹ ಫನ್ನಿ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದ್ದು, ಈ ದೃಶ್ಯವನ್ನು ಕಂಡು ನೆಟ್ಟಿಗರು, ನಿಜವಾಗ್ಲೂ ಈಗೀಗ ಗಂಡಸರ ಪರಿಸ್ಥಿತಿ ಭಯದಲ್ಲೇ ಬದುಕುವಂತಾಗಿದೆ ಎಂದು  ಹೇಳಿದ್ದಾರೆ.

ಗಂಡನಿಗೆ ಹೆಂಡ್ತಿಯೆಂದರೆ ಎಷ್ಟೊಂದು ಭಯ ನೋಡಿ:

ಈಗೀಗ ಪತ್ನಿ ತನ್ನ ಪತಿರಾಯನನ್ನು ಕೊಲೆ ಮಾಡುವಂತಹ ಪ್ರಕರಣಗಳೇ ಹೆಚ್ಚಾಗಿ ಕೇಳಿ ಬರುತ್ತಿದ್ದು, ಪುರುಷರು ಅದರಲ್ಲೂ ಭಾರತೀಯ ಪುರುಷರು ಹೆಂಡ್ತಿಯರು ತಮಗೇನು ಮಾಡಿಬಿಡುತ್ತಾರೋ ಅನ್ನೋ ಭಯದಿಂದಲೇ ಜೀವನ ನಡೆಸುವಂತಾಗಿದೆ ಎಂದು ಹಲವರು ಮಾತನಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ  ಈಗೀಗ ಗಂಡಂದಿರ ಪರಿಸ್ಥಿತಿ ಹೇಗಾಗಿದೆ ಎಂದು ತೋರಿಸುವಂತಹ ಫನ್ನಿ ದೃಶ್ಯವೊಂದು ಸಹ ವೈರಲ್‌ ಆಗುತ್ತಿದೆ.

ಇದನ್ನೂ ಓದಿ
ಅಯ್ಯಯ್ಯೋ… ಹೆಂಡ್ತಿರು ಐ ಲವ್‌ ಯು ಹೇಳಿದ್ರೆ ಗಂಡಂದಿರು ಹೀಗ್‌ ಹೇಳೋದಾ
ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ
ಗಂಡ, ಮಗಳ ಮುಂದೆಯೇ ಸೋದರಳಿಯನನ್ನು ಮದುವೆಯಾದ ಮಹಿಳೆ!
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ

ವೈರಲ್‌  ವಿಡಿಯೋ ಇಲ್ಲಿದೆ ನೋಡಿ:

Rosy ಹೆಸರಿನ ಎಕ್ಸ್‌ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್‌ ಮಾಡಲಾಗಿದ್ದು, “ಇದು ಭಾರತೀಯ ಗಂಡಂದಿರ ಜೀವನ” ಎಂಬ ಶೀರ್ಷಿಕೆ ಬರೆಯಲಾಗಿದೆ.  ವೈರಲ್‌ ಆಗುತ್ತಿರುವ  ವಿಡಿಯೋದಲ್ಲಿ ಹೆಂಡ್ತಿ ನೀರು ಕೊಟ್ರೆ ಅದರಲ್ಲಿ ಪಾಯಿಸನ್‌ ಹಾಕಿದ್ದಾಳೋ ಎಂಬ ಭಯ, ಮಲಗಿದ್ರೆ, ಉಸಿರುಗಟ್ಟಿಸಿ ಸಾಯಿಸುತ್ತಾಳೋ ಅನ್ನೋ ಭಯ, ಚಾಕುವಿನಿಂದ ಚುಚ್ಚಿ ಬಿಡುತ್ತಾಳೋ ಎಂಬ ಭಯ, ಬಾಲ್ಕನಿಯಲ್ಲಿ ನಿಂತ್ರೆ ಅಲ್ಲಿಂದ ಕೆಳಗೆ ತಳ್ಳುತ್ತಾಳೋ ಎಂಬ ಭಯ ಹೀಗೆ ಗಂಡ ಪ್ರತಿ ಕ್ಷಣವೂ ಹೆಂಡತಿಯ ಭಯದಿಂದಲೇ ಜೀವನ ನಡೆಸುತ್ತಿರುವಂತ  ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ

ಜೂನ್‌ 25 ರಂದು ಶೇರ್‌ ಮಾಡಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಿಜ ಈ ಟಾಕ್ಸಿಕ್‌ ಮಹಿಳೆಯರಿಂದ ಆದಷ್ಟು ದೂರವಿರಬೇಕುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈ ದೃಶ್ಯ ನೋಡಲು ತಮಾಷೆಯಾಗಿ ಕಂಡರೂ ಈಗೀಗ ಪುರುಷರು ಇದೇ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼನಿಜ ಎಲ್ಲರೂ ಇದೇ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ