AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

8 ಸುತ್ತಿನ ಸಂದರ್ಶನ, ಕೊನೆಗೆ ನಿಮಗೆ ಕೆಲಸ ಇಲ್ಲ ಎಂದ ಕಂಪನಿಗೆ ಸರಿಯಾಗಿ ಜಾಡಿಸಿದ ಯುವಕ

ಒಂದು ಕೆಲಸ ಪಡೆಯಬೇಕಾದರೆ ಎಷ್ಟು ಕಷ್ಟ ಇದೆ. ಅಲ್ಲಿ ಬರುವ ಸವಾಲುಗಳು ಎಷ್ಟು ಎಂಬ ಬಗ್ಗೆ ವ್ಯಕ್ತಿಯೊಬ್ಬರು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಕೊನೆ ಕ್ಷಣದಲ್ಲಿ ಕೆಲಸ ಕಳೆದುಕೊಳ್ಳುವ ಕಷ್ಟ ಹೇಗಿರುತ್ತದೆ ಎಂಬ ಬಗ್ಗೆ ಇಲ್ಲಿ ತಿಳಿಸಿದ್ದಾರೆ. 8 ಸುತ್ತಿನ ಸಂದರ್ಶನದ ನಂತರ ಕೊನೆಯಲ್ಲಿ ನಿಮಗೆ ಕೆಲಸ ಇಲ್ಲ. ನಿಮ್ಮ ಹುದ್ದೆ ಬೇರೊಬ್ಬರು ಆಯ್ಕೆ ಆಗಿದ್ದರೆ ಎಂದಾಗ ಹೇಗಿರಬೇಡ. ಈ ಕುರಿತ ಪೋಸ್ಟ್‌ ಒಂದು ಇದೀಗ ವೈರಲ್‌ ಆಗುತ್ತಿದೆ.

8 ಸುತ್ತಿನ ಸಂದರ್ಶನ, ಕೊನೆಗೆ ನಿಮಗೆ ಕೆಲಸ ಇಲ್ಲ ಎಂದ ಕಂಪನಿಗೆ ಸರಿಯಾಗಿ ಜಾಡಿಸಿದ ಯುವಕ
ಸಾಂದರ್ಭಿಕ ಚಿತ್ರ
ಸಾಯಿನಂದಾ
| Updated By: ಮಾಲಾಶ್ರೀ ಅಂಚನ್​|

Updated on: Jun 26, 2025 | 6:20 PM

Share

ಒಳ್ಳೆಯ ಪ್ರತಿಭೆ, ಪರಿಶ್ರಮ, ಕೆಲಸದ ಆಸಕ್ತಿ (job applicant) ಎಲ್ಲವೂ ಇದ್ರು, ಸಂದರ್ಶನದಲ್ಲಿ ಕೊನೆಗೆ ಫೇಲ್​ ಆಗುವ ಹಿಂಸೆ ಇದೆಲ್ಲಾ ಯಾರಿಗೂ ಬೇಡ. ಇದಕ್ಕೆಲ್ಲ ಕಾರಣ  ಈ ಇನ್ಫೋಲೆನ್ಸ್ ಎಂಬ ಭೂತ. ಕೊನೆಯ ಹಂತವರೆಗೆ ಹೋಗಿ, ಕೊನೆಯಲ್ಲಿ ನಿಮಗೆ ಕೆಲಸ ಇಲ್ಲ. ಅದು ಬೇರೊಬ್ಬರಿಗೆ ಆಗಿದೆ ಎಂದರೆ ಹೇಗೆ ಆಗಬೇಡ, ಈ ಕಾರಣಕ್ಕೆ ಹೆಚ್ಚು ಆತ್ಮಹತ್ಯೆ ಪ್ರಕರಣಗಳೂ ದಾಖಲಾಗಿವೆ. ಇಲ್ಲೊಬ್ಬ ಯುವಕ ತಾನು 8 ಸುತ್ತಿನ ಸಂದರ್ಶನದಲ್ಲೂ ಪಾಸ್​​​ ಆಗಿ ಕೊನೆಯಲ್ಲಿ ಕಂಪನಿ ಕೈ ಕೊಟ್ಟಿರುವ ಬಗ್ಗೆ ಹಂಚಿಕೊಂಡಿದ್ದಾನೆ. ಎಂಟು ಸುತ್ತಿನ ಸಂದರ್ಶನ ನಂತರ ಕಂಪನಿಯೊಂದು ಆತನನ್ನು ತಿರಸ್ಕರಿಸಿದೆ. ಈ ಬಗ್ಗೆ ರೆಡ್ಡಿಟ್​​​ನಲ್ಲಿ ಭಾರೀ ಅಕ್ರೋಶ ವ್ಯಕ್ತಪಡಿಸಿದ್ದಾನೆ. ಬಹು ಸುತ್ತುಗಳಲ್ಲಿ ಉತ್ತೀರ್ಣನಾದ ನಂತರ, ಆತನಿಗೆ ಆ ಹುದ್ದೆಯನ್ನು ಈಗಾಗಲೇ ಆಂತರಿಕವಾಗಿ ಭರ್ತಿ ಮಾಡಲಾಗಿದೆ ಎಂದು ಇದ್ದಕ್ಕಿದ್ದಂತೆ ತಿಳಿಸಲಾಯಿತು. ಇದೀಗ ಈ ಪೋಸ್ಟ್​​​ ಭಾರೀ ವೈರಲ್​ ಆಗಿದೆ.

ರೆಡ್ಡಿಟ್​​​ನಲ್ಲಿ ಅನಾಮಧೇಯ ವ್ಯಕ್ತಿಯೊಬ್ಬ , ತನಗೆ ಆಗಿರುವ ಅನ್ಯಾಯದ ಬಗ್ಗೆ ಹಂಚಿಕೊಂಡಿದ್ದಾನೆ. ತನ್ನನ್ನು ತಿರಸ್ಕರಿಸಿದ ಕಂಪನಿಗೆ ಮೇಲ್​​ ಮೂಲಕ ಕೋಪವನ್ನು ವ್ಯಕ್ತಪಡಿಸಿದ್ದಾನೆ. ನೇಮಕಾತಿ ಮಾಡುವವರ ಪಾರದರ್ಶಕತೆಯ ಕೊರತೆ ಮತ್ತು “ಭಾವನಾತ್ಮಕ ಕುಶಲತೆ ಇದೆ ಎಂದು ಟೀಕಿಸಿದ್ದಾನೆ. ತುಂಬಾ ವೃತ್ತಿಪರವಲ್ಲದ ಕೆಲಸವಾಗಿದೆ. ನಿಮಗೆ ಬೇಕಾದವರನ್ನು ನೇಮಕ ಮಾಡಿಕೊಂಡಿದ್ದೀರಾ, ಇದರ ಜತೆಗೆ ನನಗೆ 8 ಸುತ್ತಿನ ಸಂದರ್ಶವನ್ನು ನಡೆಸಿದ್ದೀರಾ, ಆಂತರಿಕವಾಗಿ ನೇಮಕ ಮಾಡುವುದಾದರೇ ನನ್ನ ಸಂದರ್ಶನ ಏಕೆ ಮಾಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ. ನೀವು ಹುದ್ದೆಯ ಸ್ಥಿತಿಯ ಬಗ್ಗೆ ನನ್ನೊಂದಿಗೆ ಸ್ವಲ್ಪ ಹೆಚ್ಚು ಪಾರದರ್ಶಕವಾಗಿರಬೇಕೆಂದು ನಾನು ಬಯಸುತ್ತೇನೆ. ಹಾಗೂ ನಿಮ್ಮ ಅಭ್ಯರ್ಥಿಗಳು ಹಾಕುತ್ತಿರುವ ಸಮಯ ಮತ್ತು ಶಕ್ತಿಯ ಬಗ್ಗೆ ನಿಮಗೆ ಯಾವುದೇ ಸಹಾನುಭೂತಿ ಇಲ್ಲ, ನೀವು ಒತ್ತಡಕ್ಕೆ ಮನಿದು ಈ ಕೆಲಸ ಮಾಡುತ್ತಿದ್ದೀರಾ, ಈ ಬಗ್ಗೆ ನನಗೆ ತಿಳಿದಿದೆ ಎಂದು ಬರೆದುಕೊಂಡಿದ್ದಾರೆ.

ಆ ಹುದ್ದೆಗೆ ನಿಮ್ಮ ಅಭ್ಯರ್ಥಿ ಸೂಕ್ತವಲ್ಲ ಎಂದು ಗೊತ್ತಿದ್ದರೂ, ಒತ್ತಾಯದಿಂದ ಇತರರಿಗೆ ಅಭ್ಯರ್ಥಿಗಳಿಗೆ ಅತಿಯಾದ ಭರವಸೆ ನೀಡುವುದು ಅವಮಾನಕರ ಎಂದು ಹೇಳಿದ್ದಾರೆ. ನಾನು ನಿಮ್ಮ ಸಮಯಕ್ಕೆ ಗೌರವ ನೀಡಿದ್ದೇನೆ. ನೀವು ಕೂಡ ನಮ್ಮ ಸಮಯಕ್ಕೆ ಗೌರವ ನೀಡಬೇಕಿತ್ತು. ಆದರೆ ನನಗೆ 8 ಸುತ್ತಿನ ಸಂದರ್ಶನ ಮಾಡಿ, ಕೊನೆಯಲ್ಲಿ ನಿಮಗೆ ಕೆಲಸ ಎಂದು ನನ್ನ ಸಮಯವನ್ನು ವ್ಯರ್ಥ ಮಾಡಿದ್ದೀರಿ ಎಂದು ಖಾರವಾಗಿ ಇಮೇಲ್​​ನಲ್ಲಿ ಈ ಉತ್ತರಿಸಿದ್ದಾರೆ. ಇನ್ನು ಉತ್ತರ ಭಾರೀ ವೈರಲ್​​ ಆಗಿದ್ದು, ಅನೇಕರು ಈ ಕಾಮೆಂಟ್​​ಗೆ ಮೆಚ್ಚು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ
Image
ಅಯ್ಯಯ್ಯೋ… ಹೆಂಡ್ತಿರು ಐ ಲವ್‌ ಯು ಹೇಳಿದ್ರೆ ಗಂಡಂದಿರು ಹೀಗ್‌ ಹೇಳೋದಾ
Image
ಬೆಂಗಳೂರು ತೊರೆದ ಯುವ ಉದ್ಯಮಿ ದಂಪತಿ, ಕಾರಣ ತಿಳಿದ್ರೆ ಶಾಕ್ ಆಗ್ತೀರಾ
Image
ಗಂಡ, ಮಗಳ ಮುಂದೆಯೇ ಸೋದರಳಿಯನನ್ನು ಮದುವೆಯಾದ ಮಹಿಳೆ!
Image
ಪಾತ್ರೆ ತೊಳೆಯುತ್ತಿದ್ದ ಗಂಡನಿಗೆ ಒದ್ದು ಹಿಂಸೆ ಕೊಟ್ಟ ಪತ್ನಿ

ಇದನ್ನೂ ಓದಿ: ಸೋಶಿಯಲ್​​ ಮೀಡಿಯಾದಲ್ಲಿ ಅರಿಶಿನ ಪುಡಿ ಟ್ರೆಂಡ್​​, ಯಾಕೆ ಗೊತ್ತಾ? ಇಲ್ಲಿದೆ ನೋಡಿ

ಇನ್ನು ಈ ಬಗ್ಗೆ ಕಾಮೆಂಟ್​ ಮಾಡಿದ ಬಳಕೆದಾರರೂ, ಯಾವುದೇ ಕೆಲಸಕ್ಕೆ 8 ಸುತ್ತಿನ ಸಂದರ್ಶನಗಳು ಅತಿಯಾಗಿರುತ್ತವೆ. ಈ ಕೆಲಸಕ್ಕೆ ನಿಮ್ಮ ಅನಿವಾರ್ಯತೆಯನ್ನು ಅವರು ಅರ್ಥ ಮಾಡಿಕೊಂಡಿಲ್ಲ, ಈ ಕೆಲಸಕ್ಕೆ ನೀವು ಅರ್ಹರು ಎಂದು ಅವರಿಗೆ ಅನ್ನಿಸಿದರೂ, ಒತ್ತಡಕ್ಕೆ ಶರಣಾಗಿ ನಿಮ್ಮ ಕೆಲಸವನ್ನು ಕಸಿದುಕೊಂಡಿದ್ದಾರೆ ಎಂದು ಹೇಳಿದ್ದಾರೆ. ನೀವು ವೃತ್ತಿಪರರಲ್ಲದವರು ಎಂದು ಯಾರಾದರೂ ಹೇಳಿದರೆ ಅದು ಭ್ರಮೆ. ನೀವು ನಿಮ್ಮನ್ನು ಚೆನ್ನಾಗಿ ನಿಭಾಯಿಸಿದ್ದೀರಿ. ಯಾವುದೇ ಸ್ಥಾನದಲ್ಲಾದರೂ ಎಂಟು ಸುತ್ತುಗಳು ಅತಿಯಾಗಿರುತ್ತವೆ ಎಂದು ಮತ್ತೊಬ್ಬ ಬಳಕೆದಾರ ಕಮೆಂಟ್ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ