Video: ಸೋಶಿಯಲ್ ಮೀಡಿಯಾದಲ್ಲಿ ಅರಿಶಿನ ಪುಡಿ ಟ್ರೆಂಡ್, ಯಾಕೆ ಗೊತ್ತಾ? ಇಲ್ಲಿದೆ ನೋಡಿ
ಭಾರತ ಏನ್ ಮಾಡಿದ್ರು ಅದು ಮಾಸ್ ಆಗಿರುತ್ತದೆ. ಚಿಕ್ಕ ಚಿಕ್ಕ ವಿಷಯವನ್ನು ದೊಡ್ಡ ಮಟ್ಟದಲ್ಲಿ ಟ್ರೆಂಡ್ ಮಾಡುವ ಕಲೆ ಭಾರತೀಯರಿಗೆ ಗೊತ್ತಿದೆ. ಅದೇ ರೀತಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿರುವುದು ಅರಶಿನ ವಿಡಿಯೋ. ಈ ಬಗ್ಗೆ ನಿಮ್ಗೂ ಗೊತ್ತಿರಬಹುದು, ಜಗತ್ತಿನಲ್ಲಿ ಎಲ್ಲರೂ ಯುದ್ಧ ಬಗ್ಗೆ ಚಿಂತೆ ಮಾಡುತ್ತಿದ್ದರೆ, ಭಾರತದ ಯುವಕರು ಅರಶಿನ ಪುಡಿಯನ್ನು ನೀರಿಗೆ ಹಾಕಿ ಟ್ರೆಂಡ್ ಆಗುತ್ತಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ

ಈ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ವಿಷಯದ ಬಗ್ಗೆ ಚರ್ಚೆ ಆಗುತ್ತಲೇ ಇರುತ್ತದೆ. ಅದರಲ್ಲೂ ಭಾರತದಲ್ಲಿ ಹೊಸ ಟ್ರೆಂಡ್ಗಳನ್ನು ಹುಟ್ಟು ಹಾಕುವ ಸೃಷ್ಟಿಕರ್ತರು ಹೆಚ್ಚಾಗಿಯೇ ಇದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿರುವುದು ಅರಶಿನ “ಮ್ಯಾಜಿಕಲ್ ಸ್ಪ್ಲಾಶ್” ಪ್ರಯೋಗ . ಈ ಮ್ಯಾಜಿಕಲ್ ಸ್ಪ್ಲಾಶ್ಗೆ ಅರಿಶಿನ, (turmeric) ನೀರು ಮತ್ತು ಮೊಬೈಲ್ ಟಾರ್ಚ್ ಇದ್ರೆ ಸಾಕು. ಮಕ್ಕಳಿಂದ ಹಿಡಿದು ವೃದ್ಧರವರೆಗೂ ಇಷ್ಟವಾಗಿರುವ ಈ ಟ್ರೆಂಡ್ ಸಖತ್ ವೈರಲ್ ಆಗುತ್ತಿದೆ. ಇನ್ನು ಕೆಲವರು ವಿಭಿನ್ನವಾಗಿ ಈ ಬಗ್ಗೆ ಟ್ರೆಂಡ್ ಮಾಡಿ ವೈರಲ್ ಆಗುತ್ತಿದ್ದಾರೆ. ಈ DIY ದೃಶ್ಯದ ವೀಡಿಯೊಗಳು Instagram, YouTube ಮತ್ತು WhatsApp ಹೀಗೆ ಎಲ್ಲಾ ಸಾಮಾಜಿಕ ಜಾಲತಾಣ ವೇದಿಕೆಯಲ್ಲೂ ವೈರಲ್ ಆಗಿದೆ. ಇದೊಂದು ಮಾಂತ್ರಿಕ ವಿಜ್ಞಾನದಂತೆ ಕಾಣುತ್ತಿದೆ. ಇದನ್ನು ಮಾಡಲು ಒಂದು ಲೋಟ ನೀರು, ಒಂದು ಚಿಟಿಕೆ ಅರಿಶಿನ ಪುಡಿ ಮತ್ತು ಒಂದು ಫೋನ್ ಟಾರ್ಚ್ ಇದ್ರೆ ಸಾಕು.
ಇವುಗಳನ್ನು ಬಳಸಿಕೊಂಡು ಕತ್ತಲೆ ಕೊಣೆಯಲ್ಲಿ ಒಂದು ಲೋಟ ನೀರನ್ನು ತೆಗೆದುಕೊಂಡು, ಅದನ್ನು ಮೊಬೈಲ್ ಟಾರ್ಚ್ ಮೇಲೆ ಇಟ್ಟು, ಆ ನೀರಿಗೆ ಅರಶಿನ ಪುಡಿ ಹಾಕಿ, ನಿಮ್ಮ ಮುಖವನ್ನು ಹತ್ತಿರ ತೆಗೆದುಕೊಂಡು ನೋಡಿ. ಅದರ ಲೈಟ್‌ಗೆ ನಿಮ್ಮ ಮುಖ ಹೊಳೆಯುತ್ತದೆ. ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವ ಮೊದಲು ಒಳ್ಳೆಯ ಮ್ಯೂಸಿಕ್ ಹಾಕಿ, ಎಡಿಟ್ ಮಾಡಿ. ನಂತರ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿ. ಈಗ ಅನೇಕರು ಸೋಶಿಯಲ್ ಮೀಡಿಯಾ ಈ ರೀತಿ ಮಾಡಿ ಟ್ರೆಂಡ್ ಆಗುತ್ತಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
அழகு 🥰😘 pic.twitter.com/D2G0OtH0Qt
— Rajini (@rajini198080) June 20, 2025
ಇನ್ನು ಈ ಪ್ರಯೋಗವನ್ನು ಮನೆಯಲ್ಲಿ ತಾಯಂದಿರು ತಮ್ಮ ಚಿಕ್ಕ ಮಕ್ಕಳ ಜತೆ ಟ್ರೆಂಡ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಾಕುತ್ತಿದ್ದಾರೆ. ಹೀಗೆ ಮಗುವೊಂದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವಿನ ನಗು ಎಲ್ಲರಿಗೂ ಮೆಚ್ಚುಗೆ ಆಗಿದೆ ಹಾಗೂ ಆ ಮಗು ಈ ಬೆಳಕನ್ನು ಕಂಡು ಅಚ್ಚರಿಯಿಂದ ನೋಡುವುದನ್ನು ಕೂಡ ಈ ವಿಡಿಯೋದಲ್ಲಿ ನೋಡಬಹುದು. ಈ ರೀತಿ ಮ್ಯಾಜಿಕ್ ಪ್ರಯೋಗವನ್ನು ಮಕ್ಕಳು, ವಿದ್ಯಾರ್ಥಿಗಳು, ಅದರಲ್ಲೂ ಈ ಯುವಕರು ಹೆಚ್ಚು ಮಾಡುತ್ತಿದ್ದಾರೆ. ಇನ್ನು ಕೆಲವರು ಇದನ್ನು ಮಿಮ್ಸ್ ಆಗಿ ಪರಿವರ್ತಿಸಿದ್ದಾರೆ. ಇಡೀ ಜಗತ್ತು ಯುದ್ಧದಲ್ಲಿ ಮುಳುಗಿದೆ, ಆದರೆ ಭಾರತದಲ್ಲಿ ಮಾತ್ರ ಅರಿಶಿನ ಟ್ರೆಂಡ್ ಆಗುತ್ತಿದೆ. ಕೆಲವೊಂದು ವಿಡಿಯೋಗಳನ್ನು ತುಂಬಾ ತಮಾಷೆಯಾಗಿ ಮಾಡಿದ್ದಾರೆ. ಒಂದು ಗ್ಲಾಸ್ಗೆ ಸೋಡಾ ಹಾಕಿ, ಅದನ್ನು ಫೋನ್ ಟಾರ್ಚ್ಗೆ ಇಟ್ಟು ಆ ಗ್ಲಾಸ್ಗೆ ಅರಿಶಿನ ಬದಲು ವಿಸ್ಕಿ, ಇತರ ಮದ್ಯಗಳನ್ನು ಹಾಕಿ ಟ್ರೆಂಡ್ ಕ್ರಿಯೆಟ್ ಮಾಡಿದ್ದಾರೆ.
ಇದನ್ನೂ ಓದಿ: ಈಗೀಗ ಗಂಡಂದಿರು ಹೆಂಡ್ತಿರಿಗೆ ಸಿಕ್ಕಾಪಟ್ಟೆ ಹೆದರಿಕೊಳ್ತಿದ್ದಾರೆ, ಯಾಕೆ ಗೊತ್ತಾ? ಈ ವಿಡಿಯೋ ನೋಡಿ
ಸಾಮಾಜಿಕ ಮಾಧ್ಯಮ ಬಳಕೆದಾರರು ಈ ಪ್ರವೃತ್ತಿ ಬಗ್ಗೆ ಹೆಚ್ಚು ಕುತೂಹಲದಲ್ಲಿದ್ದಾರೆ. ಈ “ಮ್ಯಾಜಿಕಲ್ ಸ್ಪ್ಲಾಶ್” ಕೆಲವೊಮ್ಮೆ ವಿಜ್ಞಾನದ ಮ್ಯಾಜಿಕ್ ಆಗಬಹುದು ಎಂಬುದಕ್ಕೆ ಈ ವಿಡಿಯೋಗಳೇ ಸಾಕ್ಷಿಯಾಗಿದೆ. ಇನ್ನು ಕೆಲವರು ಇದೇ ರೀತಿ ಮಾಡಿ… ಮಾಡಿ ಅರಿಶಿನದ ಬೆಲೆಯನ್ನು ಹೆಚ್ಚು ಮಾಡಿಸುವ ಪ್ಲಾನ್ ಹಾಕಿಕೊಂಡಿದ್ದಾರೆ ಎಂದು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವೊಂದು ಮಿಮ್ಸ್ಗಳಲ್ಲಿ ಮನೆಯಲ್ಲಿ ಈ ಮಕ್ಕಳು ಅರಿಶಿನ ಎಲ್ಲ ಖಾಲಿ ಮಾಡುತ್ತಿದ್ದಾರೆ ಎಂದೆಲ್ಲ ತಮಾಷೆ ಮಾಡಿದ್ದಾರೆ. ಒಟ್ಟಿನಲ್ಲಿ ಟ್ರೆಂಡ್ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್ ಆಗಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ








