AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ಸೆಕ್ಯೂರಿಟಿ ಗಾರ್ಡ್​​​​ನ ಹಿಂಸೆ ತಾಳಲಾರದೆ 17ನೇ ಮಹಡಿಯಿಂದ ಬಲವಂತವಾಗಿ ಜಿಗಿದು ಸಾವನ್ನಪ್ಪಿದ ನಾಯಿ

ಪ್ರಾಣಿಗಳು ಯಾರಿಗೂ ತೊಂದರೆ ಮಾಡುವುದಿಲ್ಲ, ಕೆಲವೊಂದು ಬಾರಿ ಅವುಗಳು ಮನುಷ್ಯನ ಮೇಲೆ ದಾಳಿ ಮಾಡುವುದು ಮಾತ್ರ, ಅದರಲ್ಲೂ ಈ ಶ್ವಾನಗಳು ತುಂಬಾ ಸಾಧು ಪ್ರಾಣಿಗಳು, ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಆದರೆ ಇಂತಹ ಸಾಧು ಪ್ರಾಣಿಯನ್ನು ಹೇಗೆಲ್ಲ ಹಿಂಸೆ ಮಾಡಿದ್ದಾರೆ ಎಂಬುದನ್ನು ಇಲ್ಲಿ ನೋಡಿ. ಸೆಕ್ಯೂರಿಟಿ ಗಾರ್ಡ್​​​ ಮಾಡಿದ ಒಂದು ತಪ್ಪಿನಿಂದ ಆ ಮೂಕ ಪ್ರಾಣಿಯ ಪ್ರಾಣವೇ ಹೋಗಿದೆ. ಈ ಸ್ಟೋರಿ ಓದಿದ ಮೇಲೆ ಈತನಿಗೆ ಯಾವ ಶಿಕ್ಷೆ ನೀಡಬೇಕು ಎಂದು ನೀವೇ ಹೇಳಿ.

Video: ಸೆಕ್ಯೂರಿಟಿ ಗಾರ್ಡ್​​​​ನ ಹಿಂಸೆ ತಾಳಲಾರದೆ 17ನೇ ಮಹಡಿಯಿಂದ ಬಲವಂತವಾಗಿ ಜಿಗಿದು ಸಾವನ್ನಪ್ಪಿದ ನಾಯಿ
ವೈರಲ್​ ವಿಡಿಯೋ
ಸಾಯಿನಂದಾ
| Updated By: ಮಾಲಾಶ್ರೀ ಅಂಚನ್​|

Updated on: Jun 26, 2025 | 11:13 AM

Share

ಮುಂಬೈನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಪ್ರಾಣಿಗಳಿಗೂ ನೋವುವಾಗುತ್ತದೆ ಎಂಬ ಮನೋಭಾವವನ್ನು ಅನೇಕರು ಇಂದಿನ ಕಾಲದಲ್ಲಿ ಮರೆಯುತ್ತಿದ್ದಾರೆ. ಅದೆಷ್ಟೋ ಇಂತಹ ಸ್ಟೋರಿಗಳು ಆಗ್ಗಾಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿರುತ್ತವೆ. ಅಂತಹದ್ದೇ ಘಟನೆಯೊಂದು ಇದೀಗ ನಡೆದಿದದ್ದು,  ಮುಂಬೈನಲ್ಲಿ ಸೆಕ್ಯೂರಿಟಿ ಗಾರ್ಡ್​​​​ 17ನೇ ಮಹಡಿಯಿಂದ ಸಾಕು ನಾಯಿಯನ್ನು ಬಲವಂತವಾಗಿ ತಳ್ಳಿ ಸಾಯಿಸಿದ್ದಾನೆ.  ಈ ಘಟನೆಯ ಬಗೆಗಿನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​​ ಆಗುತ್ತಿದೆ. ಆ ಮೂಕ ಪ್ರಾಣಿ ಎಷ್ಟು ನೋವು ತಿಂದಿರಬೇಡ, ಇಂತಹ ಕೃತ್ಯವನ್ನು ಮಾಡುವವರಿಗೆ ಸರಿಯಾದ ಶಿಕ್ಷೆಯನ್ನು ನೀಡಬೇಕು ಎಂದು ಅನೇಕರು ಕಾಮೆಂಟ್​​ ಕೂಡ ಮಾಡಿದ್ದಾರೆ. ಮುಂಬೈನ ವಸತಿ ಕಟ್ಟಡವೊಂದರಲ್ಲಿ ನಾಯಿಯನ್ನು ಕ್ರೂರವಾಗಿ ಥಳಿಸಿ 17 ನೇ ಮಹಡಿಯ ಬಾಲ್ಕನಿಯಿಂದ ಬಲವಂತವಾಗಿ ಜಿಗಿಯುವಂತೆ ಮಾಡಿದ್ದಾನೆ. ನಾಯಿ ನರಳಿ ನರಳಿ ಸಾವನ್ನಪ್ಪಿದ್ದು,  ಈ ದೃಶ್ಯವನ್ನು ನೋಡಲು ಸಾಧ್ಯವಿಲ್ಲ ಅಷ್ಟು ಕ್ರೂರವಾಗಿದೆ.

ವಿಜಯ್ ರಂಗರೆ ಎಂಬುವವರು ಈ ಬಗ್ಗೆ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಬ್ಬ ಸೆಕ್ಯೂರಿಟಿ ಗಾರ್ಡ್​​​​ ವಯಸ್ಸಾದ ನಾಯಿಯನ್ನು 17ನೇ ಮಹಡಿಯಿಂದ ಬಲವಂತವಾಗಿ ಜಿಗಿಯುವಂತೆ ಮಾಡಿದ್ದಾನೆ. ಆ ಜೀವನ ನರಳಾಡಿ ಸತ್ತಿದೆ ಎಂದು ಬರೆದುಕೊಂಡಿದ್ದಾರೆ. ಈಗಾಗಲೇ ಸೆಕ್ಯೂರಿಟಿ ಗಾರ್ಡ್​​​​ ಮೇಲೆ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆಯನ್ನು ನಡೆಸುತ್ತಿದ್ದಾರೆ. ಆದರೆ ಇಷ್ಟಕ್ಕೆ ಆ ವ್ಯಕ್ತಿಯನ್ನು ಯಾವುದೇ ಕಾರಣಕ್ಕೂ ಬೀಡಬಾರದು, ಆತನಿಗೆ ಕಠಿಣ ಶಿಕ್ಷಯಾಗಬೇಕು ಎಂದು ವಿಜಯ್ ರಂಗರೆ ಒತ್ತಾಯ ಮಾಡಿದ್ದಾರೆ. ಈ ವಿಡಿಯೋದಲ್ಲಿ ನಾಯಿಯನ್ನು ಮನಬಂದಂತೆ ಆ ಸೆಕ್ಯೂರಿಟಿ ಗಾರ್ಡ್ ಹೊಡೆಯುತ್ತಾನೆ. ಆ ಶ್ವಾನ ಕಿರುಚಿದರೂ ದಯೆ ಇಲ್ಲದಂತೆ ಹೊಡೆದಿದ್ದಾನೆ. ನಾಯಿ ನೋವು ಸಹಿಸಲಾಗದೇ ಓಡಲು ಪ್ರಾರಂಭಿಸಿದೆ, ಈ ವೇಳೆ ಬಾಲ್ಕನಿ ಬಳಿ ಬಂದ ನಾಯಿ ದಾರಿ ಕಾಣದೇ ಬಲವಂತವಾಗಿ 17 ಮಹಡಿಯ ಬಾಲ್ಕನಿಯಿಂದ ಜಿಗಿದಿದೆ.

ಇದನ್ನೂ ಓದಿ
Image
ಲಖಿಂಪುರ ಖೇರಿಯ ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿದ ಯುವಕ
Image
ತಳ್ಳುಗಾಡಿಯಲ್ಲಿದ್ದ ಹಣ್ಣನ್ನು ಕದ್ದು ತಿಂದ ಮರಿ ಆನೆ
Image
ಶ್ವಾನದ ಮೇಲೆ ಕಾರು ಹತ್ತಿಸಿ, ಮಾಡಿದ ತಪ್ಪಿಗೆ ಕ್ಷಮೆಯಾಚಿಸಿದ ವ್ಯಕ್ತಿ
Image
ದೈತ್ಯ ಮೊಸಳೆಯ ಬಾಲ ಹಿಡಿದು ಎಳೆದ ವ್ಯಕ್ತಿ

ಇದನ್ನೂ ಓದಿ: 79 ವರ್ಷ ವಯಸ್ಸಲ್ಲೂ ಇಡ್ಲಿ-ಸಾಂಬಾರ್‌ ಮಾರಿ ಸ್ವಾವಲಂಬಿ ಜೀವನ ನಡೆಸುತ್ತಿರುವ ನಿವೃತ್ತ ಯೋಧೆ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

View this post on Instagram

A post shared by Vijay Rangare (@vjrangare)

ಇನ್ನು ಈ ವಿಡಿಯೋ ನೋಡಿ ಅನೇಕರು ಕಮೆಂಟ್​​ ಮಾಡಿದ್ದಾರೆ. ಒಬ್ಬ ಬಳಕೆದಾರ ಇಂತಹ ಘಟನೆಗಳಿಗೆ ಕಠಿಣ ಕ್ರಮ ಆಗಲೇಬೇಕು. ಆತನನ್ನು ಯಾವುದೇ ಕಾರಣಕ್ಕೂ ಬಿಡಬಾರದು, ಆ ಶ್ವಾನ ಜೀವ ಉಳಿಸಿಕೊಳ್ಳಲು ಎಷ್ಟು ಒದ್ದಾಡಿದೆ ಎಂಬುದನ್ನು ವಿಡಿಯೋದಲ್ಲಿ ನೋಡಿ ಎಂದು ಕಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಇನ್ಸ್ಟಾ ಬಳಕೆದಾರ  ಆ ವ್ಯಕ್ತಿ ನಾಯಿ ಅಷ್ಟು ಹಿಂಸೆ ಕೊಟ್ಟರು ಯಾರು ಅಲ್ಲಿ ಮಾತನಾಡಿಲ್ಲ, ಅಥವಾ ಅದನ್ನು ತಡೆಯಲಿಲ್ಲ ಇದು ವಿಪರ್ಯಾಸವೇ ಸರಿ. ಒಂದು ವೇಳೆ ಇಂತಹ ಸ್ಥಿತಿ ಅವರಿಗೆ ಬಂದಿದ್ದರೆ, ಆಗಾ ಅವರಿಗೆ ಗೊತ್ತಾಗುತ್ತಿತ್ತು ಎಂದು ಹೇಳಿದ್ದಾರೆ.

ವೈರಲ್​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಮಳೆನೀರು ತುಂಬಿದ್ದ ಗುಂಡಿಗೆ ಬಿದ್ದ ಮೊಬೈಲ್; ಬಿಕ್ಕಿ ಬಿಕ್ಕಿ ಅತ್ತ ಯುವಕ
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ಶಿವಕುಮಾರ್ ಸಿಎಂ ಆಗುತ್ತಾರೆ, ನಾಯಕತ್ವದ ಗುಣಗಳು ಅವರಲ್ಲಿವೆ: ಮಂಜುನಾಥ್
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ನಟಿ ಶ್ರುತಿಗೆ ಚಾಕು ಇರಿತ; ಘಟನೆ ಬಗ್ಗೆ ವಿವರಿಸಿದ ಪ್ರತ್ಯಕ್ಷದರ್ಶಿ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಚಿಕ್ಕಮಗಳೂರು -ತಿರುಪತಿ ರೈಲಿಗೆ ನಮಸ್ಕರಿಸಿದ ವೃದ್ಧೆ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಯಾರದ್ದೋ ತಪ್ಪಿಗೆ ನಮ್ಮನ್ಯಾಕೆ ಹೊಣೆ ಮಾಡಲಾಗುತ್ತಿದೆ? ಸಣ್ಣ ವ್ಯಾಪಾರಿ
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಎಂಬಿ ಪಾಟೀಲ್ ತಮ್ಮನ್ನು ರಾಜ್ಯದ ಮುಖ್ಯಮಂತ್ರಿ ಅಂದುಕೊಂಡಿದ್ದಾರಾ? ಪ್ರಕಾಶ್
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಸಚಿವೆ ಪದೇಪದೆ ಗೃಹಲಕ್ಷ್ಮಿ ಯೋಜನೆ ಹಣದ ಬಗ್ಗೆ ಸಮಜಾಯಿಷಿ ನೀಡುವುದ್ಯಾಕೆ?
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಪತ್ನಿಯ ಹುಡುಕುತ್ತಾ ಕಾರಿನಲ್ಲಿ ರೈಲ್ವೆ ಪ್ಲಾಟ್​ಫಾರ್ಮ್​ಗೆ ಬಂದ ಪತಿ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಶಾಸಕರಿಗೆ ಸ್ಥಾನಮಾನ ನೀಡುವ ಬಗ್ಗೆ ಸುರ್ಜೇವಾಲಾ ಜೊತೆ ಚರ್ಚೆಯಾಗಿದೆ: ಡಿಸಿಎಂ
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್
ಮಗಳೊಟ್ಟಿಗೆ ಕಾಪು ಮಾರಿಗುಡಿ ದೇವಾಲಯಕ್ಕೆ ಅಶ್ವಿನಿ ಪುನೀತ್​​ ರಾಜ್​​ಕುಮಾರ್