AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಲೈವ್ ಟ್ರ್ಯಾಕರ್, ಇದು ಅಧಿಕಾರಿಗಳನ್ನು ಎಚ್ಚರಿಸಲು ಹೊಸ ತಂತ್ರ

ಬೆಂಗಳೂರಿನಲ್ಲಿ ರಸ್ತೆ ಗುಂಡಿಗಳ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ತಿಳಿಸಲು ಹೊಸ ತಂತ್ರವೊಂದು ಬಂದಿದೆ, ಎಲ್ಲಿ ರಸ್ತೆ ಗುಂಡಿ ಕಂಡರೂ ಸ್ಥಳದ ಹೆಸರು ಹಾಗೂ ಅದರ ಫೋಟೋವನ್ನು ತೆಗೆದು ಇಲ್ಲಿ ಅಪ್ಲೋಡ್​​ ಮಾಡಬಹುದು. ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಪ್ರಶಂಸೆ ಪಡೆದಿದೆ. ಈ ಬಗ್ಗೆ ಅನೇಕರು ಎಕ್ಸ್​ನಲ್ಲಿ ಟ್ವೀಟ್​ ಮಾಡಿದ್ದಾರೆ. ಈ ಬಗೆಗಿನ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ.

ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಲೈವ್ ಟ್ರ್ಯಾಕರ್, ಇದು ಅಧಿಕಾರಿಗಳನ್ನು ಎಚ್ಚರಿಸಲು ಹೊಸ ತಂತ್ರ
ವೈರಲ್​ ಪೋಸ್ಟ್​​
ಸಾಯಿನಂದಾ
| Updated By: ಮಾಲಾಶ್ರೀ ಅಂಚನ್​|

Updated on: Jun 25, 2025 | 2:21 PM

Share

ಬೆಂಗಳೂರಿನಲ್ಲಿ ಟ್ರಾಫಿಕ್ ಜತೆಗೆ ರಸ್ತೆ ಗುಂಡಿಗಳು ಹೆಚ್ಚಾಗಿದೆ. ಮಳೆ ಬಂದ್ರೆ ಹೇಳಬೇಕಿಲ್ಲ, ಗುಂಡಿಗಳು ಈಜು ಕೊಳದಂತೆ ಆಗಿರುತ್ತದೆ. ಇದು ಇಲ್ಲಿ ಜನರು ಅನುಭವಿಸುತ್ತಿರುವ ಸಮಸ್ಯೆ. ಇದನ್ನು ಯಾರಿಂದಲ್ಲೂ ಸರಿ ಮಾಡಲು ಸಾಧ್ಯವಾಗಿಲ್ಲ, ಮುಂದೆ ಇದು ಸರಿಯಾಗುವ ಲಕ್ಷಣವೂ ಕಾಣುತ್ತಿಲ್ಲ. ರಸ್ತೆ ಗುಂಡಿಗಳು (pothole map) ಬೆಂಗಳೂರಿಗರಿಗೆ ಸಾಮಾನ್ಯವಾಗಿದೆ. ಇದರಿಂದ ಅನೇಕ ಜೀವಗಳು ಕೂಡ ಹೋಗಿದೆ. ಇದರ ಬಗ್ಗೆ ಸರ್ಕಾರವನ್ನು ಎಚ್ಚರಿಸಿದ್ರು ಯಾವುದೇ ಪ್ರಯೋಜನವಿಲ್ಲ, ಆದರೆ ಇಲ್ಲೊಂದು ಹೊಸ ತಂತ್ರಜ್ಞಾನದ ಮೂಲಕ ಜನರಿಗೆ ರಸ್ತೆ ಗುಂಡಿಗಳನ್ನು ಎಚ್ಚರಿಸುವ ಆ್ಯಪ್​​ನ್ನು ಗೂಗಲ್​​ನಲ್ಲಿ ಕಂಡುಹಿಡಿಯಲಾಗಿದೆ. ಈ ಬಗ್ಗೆ ಪೋಸ್ಟ್​​​ವೊಂದು ಸಖತ್​​ ವೈರಲ್​ ಆಗಿದೆ.  ಈ ಪ್ರಯೋಗ ಬೆಂಗಳೂರಿಗರ ಮನಗೆದ್ದಿದೆ. blr-potholes.pages.dev (road hazard data)  ವೆಬ್‌ಸೈಟ್​​​ ಸ್ಕ್ರೀನ್‌ಶಾಟ್​​ನ್ನು ಎಕ್ಸ್​​ನಲ್ಲಿ ಶಾಂತನು ಗೋಯೆಲ್ ಎಂಬುವವರು ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ರಸ್ತೆಗಳನ್ನು ಸುರಕ್ಷಿತವಾಗಿಸುವ ಉದ್ದೇಶದಿಂದ ಯಾರೋ ಇದನ್ನು ರಚಿಸಿದ್ದಾರೆ ಎಂದು ಇಲ್ಲಿ ಹೇಳಿದ್ದು, ಜತೆಗೆ ಇದನ್ನು ಗುಂಡಿ ಎಂದು ಕರೆಯಬಾರದು, ಕುಳಿ ಎಂದು ಕರೆಯಬೇಕು ಎಂದು ಎಕ್ಸ್​​ನಲ್ಲಿ ಬರೆದುಕೊಂಡಿದ್ದಾರೆ.

ಅನಾಮಧೇಯ ವ್ಯಕ್ತಿ ಈ ತಂತ್ರವನ್ನು ಪತ್ತೆ ಮಾಡಿದ್ದೇನೆ, ಇದನ್ನು ಸಾರ್ವಜನಿಕರು ಕೂಡ ಉಯೋಗಿಸಬಹುದು. ಹಾಗಾಗಿ ಮುಕ್ತವಾಗಿ ಬೆಂಗಳೂರಿನ ನಕ್ಷೆಯಲ್ಲಿ ರಸ್ತೆ ಗುಂಡಿಗಳ ಚಿತ್ರಗಳನ್ನು ಅಪ್‌ಲೋಡ್ ಮಾಡಬಹುದು ಹಾಗೂ ನಿಖರವಾದ ಸ್ಥಳವನ್ನು ಪಿನ್ ಮಾಡಲು ಅನುಮತಿ ನೀಡಲಾಗಿದೆ. ಇದೀಗ ಈ ತಂತ್ರದಿಂದ ಬೆಂಗಳೂರಿಗರು ಎಲ್ಲಿ ಗುಂಡಿ ಕಂಡರೂ, ಇಲ್ಲಿ ಅಪ್ಲೋಡ್ ಮಾಡುತ್ತಾರೆ. ಈ ಒಂದು ತಂತ್ರ ಬೆಂಗಳೂರಿಗರನ್ನು ಆಕರ್ಷಿಸುತ್ತಿದೆ ಎಂದು ಹೇಳಲಾಗಿದೆ. ಬೆಂಗಳೂರು ಲೈವ್ ಪಾಟ್‌ಹೋಲ್ಸ್ ಮ್ಯಾಪ್ ಮೂಲಕ ರಸ್ತೆ ಅಪಾಯದ ಡೇಟಾವನ್ನು ಕ್ರೌಡ್‌ಸೋರ್ಸ್ ಮಾಡುವ ಮೂಲಕ ಸರ್ಕಾರ ಹಾಗೂ ಅದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಸಾರ್ವಜನಿಕರೇ ಎಚ್ಚರಿಸುವ ಕೆಲಸವನ್ನು ಈ ಆ್ಯಪ್​​ ಮಾಡುತ್ತಿದೆ.

ಇದನ್ನೂ ಓದಿ
Image
ಬೆಂಗಳೂರಿನಿಂದ ದೊಡ್ಡ-ದೊಡ್ಡ ಕಂಪನಿಗಳು ಹೊರ ಹೋಗಲು ಈ ಪೋಸ್ಟ್​​​ ಕಾರಣ
Image
ಇದಕ್ಕೆಲ್ಲ ಬೆಂಗಳೂರು ಟ್ರಾಫಿಕ್ ಕಾರಣ
Image
HMT ವಾಚ್‌ನಲ್ಲೂ ಕನ್ನಡದ ಕಂಪು, ಈ ವಾಚ್ ಹೇಗಿದೆ ನೋಡಿ
Image
ಸಲೀಸಾಗಿ ಕನ್ನಡ ಮಾತನಾಡುವ ಓಡಿಶಾದ ಪ್ಲಂಬರ್

ಇಲ್ಲಿದೆ ನೋಡಿ ಪೋಸ್ಟ್​​:

ಈ ಒಂದು ನೂತನ ತಂತ್ರಕ್ಕೆ ಮನಸೋತು ಅನೇಕರು ಎಕ್ಸ್​​ನಲ್ಲಿ ಟ್ವೀಟ್​ ಮಾಡಿದ್ದಾರೆ. ಒಬ್ಬ ಬಳಕೆದಾರ, ಈ ಯೋಜನೆಯನ್ನು ನಾಗರಿಕ ಕ್ರಿಯಾಶೀಲತೆ ಮತ್ತು ಬೆಂಗಳೂರಿನ ತಾಂತ್ರಿಕ ಪರಾಕ್ರಮ ಎಂದು ಶ್ಲಾಘಿಸಿದ್ದಾರೆ. ಇನ್ನೊಬ್ಬ ಬಳಕೆದಾರ ಈ ಆ್ಯಪ್​​​​​ ರಚಿಸಿದವರಿಗೆ ನಾನು ಗೌರವ ಸಲ್ಲಿಸುತ್ತೇನೆ. ಬೆಂಗಳೂರಿನಲ್ಲಿ ಇನ್ನು ಹೆಚ್ಚಿನ ಕೆಲಸ ಆಗಬೇಕಿದೆ, ಹಾಗೂ ಹಲವು ನಿರೀಕ್ಷೆ ಇದೆ, ಹಾಗಾಗಿ ಇದು ಒಳ್ಳೆಯ ಪ್ರಯತ್ನ ಎಂದು ಹೇಳಿದ್ದಾರೆ. ಇನ್ನು ಕೆಲವರು, ಈ ಪ್ರಯತ್ನ ಮುಂದುವರಿಯಬೇಕು. ಸ್ಥಳೀಯ ಪುರಸಭೆಯ ಕಚೇರಿಗಳಿಗೆ ವಾರಕ್ಕೊಮ್ಮೆ ವರದಿ ಕಳುಹಿಸಬೇಕೆಂದು ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರ, ಈ ರೀತಿ ಮಾಡಿ ಆಯಾ ಅಧಿಕಾರಿಗಳಿಗೆ ಕಳುಹಿಸಬೇಕು. ನಂತರ ಈ ರಸ್ತೆ ದುರಸ್ತಿಯಾಗಿದೆ ಎಂದು ಯಾರು ಈ ಪೋಸ್ಟ್​​ ಹಾಕಿದ್ದರೆ ಅವರು ಅದನ್ನು ಇಲ್ಲಿ ಅಪ್ಡೇಟ್​​ ಮಾಡುವಂತೆ ಇರಬೇಕು ಎಂದು ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಿಂದ ದೊಡ್ಡ-ದೊಡ್ಡ ಕಂಪನಿಗಳು ಹೊರ ಹೋಗಲು ಈ ಪೋಸ್ಟ್​​​ ಕಾರಣ, ಎಕ್ಸ್​​​ನಲ್ಲಿ ಭಾರೀ ಚರ್ಚೆ

ಪಾರದರ್ಶಕತೆ ಮತ್ತು ನಾಗರಿಕರೇ ಈ ವಿಚಾರವಾಗಿ ಮುಂದವರಿಯುವ ಇಂತಹ ತಂತ್ರಗಾರಿಕೆ ಭಾರತದಲ್ಲಿ ಮುಂದುವರಿಯಬೇಕು ಎಂದು ಹೇಳಿದ್ದಾರೆ. ಅಧಿಕಾರಿಗಳು ಈ ಪೋಸ್ಟ್​​​ನ್ನು ಗಮನಿಸಿದರೆ ಎಂಬುದು ಗೊತ್ತಿಲ್ಲ ಆದರೆ ಜನರು ಈ ಬಗ್ಗೆ ಇಷ್ಟಪಟ್ಟಿದ್ದಾರೆ. 2024ರಲ್ಲಿ, ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಗರದಾದ್ಯಂತ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ 15 ದಿನಗಳ ಗಡವು ನೀಡಿದ್ದರು. ಆದರೆ ಇದರ ಬಗ್ಗೆ ಗಮನ ನೀಡಿದ್ದಾರೆಯೇ ಎಂದು ಗೊತ್ತಿಲ್ಲ, ಆದರೆ ರಾಜಧಾನಿಯ ಹದಗೆಡುತ್ತಿರುವ ರಸ್ತೆ ಮೂಲಸೌಕರ್ಯವನ್ನು ಪರಿಹರಿಸುವ ಸಾರ್ವಜನಿಕರು ಈ ಮೂಲಕ ಒತ್ತಾಯ ಮಾಡಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ