Viral Video: ರೆಸ್ಟೋರೆಂಟ್‌ನ ಬಿರಿಯಾನಿಯಲ್ಲಿ ಸಿಗರೇಟ್ ಪತ್ತೆ; ವಿಡಿಯೋ ವೈರಲ್​​

ಹೈದರಾಬಾದ್‌ನ ಒಂದು ಪ್ರಸಿದ್ಧ ರೆಸ್ಟೋರೆಂಟ್‌ನಲ್ಲಿ ಬಿರಿಯಾನಿಯಲ್ಲಿ ಅರ್ಧ ಸೇವಿಸಿದ ಸಿಗರೇಟ್ ಪತ್ತೆಯಾಗಿರುವ ಘಟನೆ ವೈರಲ್ ಆಗಿದೆ. ಗ್ರಾಹಕರು ಈ ಘಟನೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ರೆಸ್ಟೋರೆಂಟ್‌ನ ನಿರ್ಲಕ್ಷ್ಯಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Follow us
ಅಕ್ಷತಾ ವರ್ಕಾಡಿ
|

Updated on:Nov 26, 2024 | 10:46 AM

ಹೈದರಾಬಾದ್: ಬಿರಿಯಾನಿಯಲ್ಲಿ ಅರ್ಧದಷ್ಟು ಸೇದಿದ್ದ ಸಿಗರೇಟ್​​ ಪತ್ತೆಯಾಗಿರುವ ಘಟನೆ ತೆಲಂಗಾಣದ ಹೈದರಾಬಾದ್‌ನ ಪ್ರಸಿದ್ಧ ರೆಸ್ಟೊರೆಂಟ್​​ ಒಂದರಲ್ಲಿ ನಡೆದಿದೆ. ಸದ್ಯ ತಮಗಾದ ಅನುಭವವನ್ನು ಗ್ರಾಹಕರು ವಿಡಿಯೋ ಮಾಡಿ ಸೋಶಿಯಲ್​​ ಮೀಡಿಯಾಗಳಲ್ಲಿ ಹರಿಬಿಟ್ಟಿದ್ದಾರೆ. ರೆಸ್ಟೋರೆಂಟ್​​ನ ಬೇಜಾವಬ್ದಾರಿಗೆ ನೆಟ್ಟಿಗರು ಕಾಮೆಂಟ್​​ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RTC ‘X’ ರಸ್ತೆಯ ಬಳಿ ಇರುವ ಜನಪ್ರಿಯ ಬಾವರ್ಚಿ ರೆಸ್ಟೋರೆಂಟ್‌ನಲ್ಲಿ ಈ ಘಟನೆ ನಡೆದಿರುವುದಾಗಿ ವರದಿಯಾಗಿದೆ. ಸುಮಾರು 8-10 ಯುವಕರು ರೆಸ್ಟೋರೆಂಟ್‌ನಲ್ಲಿ ತಮ್ಮ ಆಹಾರವನ್ನು ತಿನ್ನುತ್ತಿರುವುದನ್ನು ವೀಡಿಯೊದಲ್ಲಿ ನೋಡಬಹುದು ಮತ್ತು ಅವರಲ್ಲಿ ಒಬ್ಬನ ಪ್ಲೇಟ್‌ನಲ್ಲಿ ಸಿಗರೇಟ್ ತುಂಡು ಕಂಡುಬಂದಿದೆ.

ಇದನ್ನೂ ಓದಿ:ಹುಲಿ ಘರ್ಜನೆ ಕೇಳಿ ಮರವೇರಿ ಕುಳಿತ ಫಾರೆಸ್ಟ್‌ ಗಾರ್ಡ್; ಮುಂದೇನಾಯ್ತು ನೋಡಿ…

ಈ ಘಟನೆಗೆ ರೆಸ್ಟೊರೆಂಟ್‌ನ ಆಡಳಿತ ಮಂಡಳಿ ಗ್ರಾಹಕರಲ್ಲಿ ಕ್ಷಮೆ ಯಾಚಿಸುತ್ತಿರುವುದು ಕಂಡುಬಂದಿದೆ. ಬಿರಿಯಾನಿಯಲ್ಲಿ ಸಿಗರೇಟ್ ತುಂಡು ನೋಡಿ ರೆಸ್ಟೋರೆಂಟ್‌ನಲ್ಲಿದ್ದ ಇತರ ಜನರು ಸಹ ಆಘಾತಕ್ಕೊಳಗಾಗಿದ್ದಾರೆ. ಘಟನೆಯ ನಿಖರವಾದ ದಿನಾಂಕ ಮತ್ತು ಸಮಯ ಇನ್ನೂ ತಿಳಿದಿಲ್ಲ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:46 am, Tue, 26 November 24