Viral : ವಿದೇಶಿಗರೊಬ್ಬರು ಇತ್ತೀಚೆಗೆ ಕೆಲಸದ ನಿಮಿತ್ತ ಭಾರತಕ್ಕೆ ಭೇಟಿ ನೀಡಿದ್ದರು. ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅವರ ಕೈಗಡಿಯಾರ ಕಳೆದು ಹೋಯಿತು. ವಾಪಸ್ ತಮ್ಮ ದೇಶಕ್ಕೆ ಮರಳಿದಾಗ ಅವರಿಗೆ ಕೈಗಡಿಯಾರದ ನೆನಪಾಯಿತು. ತಕ್ಷಣವೇ ಇಮೇಲ್ ರವಾನಿಸಿದರು. ತ್ವರಿತ ರೀತಿಯಲ್ಲಿ ಇವರ ಕೈಗಡಿಯಾರ ಇವರನ್ನು ಮರಳಿ ಸೇರಿತು. ಇದರಿಂದ ಸಂತೋಷಗೊಂಡ ಈ ವ್ಯಕ್ತಿ ಲಿಂಕ್ಡಿನ್ ನಲ್ಲಿ ತಮ್ಮ ಕೈಗಡಿಯಾರದ ಕಥೆಯನ್ನು ಹಂಚಿಕೊಂಡಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿ ಮತ್ತು ಐಟಿಸಿ ಕಂಪೆನಿಯ ವೃತ್ತಿಪರತೆಯನ್ನು ಸಿಬ್ಬಂದಿಯನ್ನು ಶ್ಲಾಘಿಸಿದ್ದಾರೆ.
ನಾನು ಆ್ಯಂಡರ್ ಆ್ಯಂಡರ್ಸನ್. ಇತ್ತೀಚೆಗೆ ಕಾರ್ಯನಿಮಿತ್ತ ನನಗೆ ಭಾರತಕ್ಕೆ ಭೇಟಿನೀಡುವ ಅವಕಾಶ ದೊರೆಯಿತು. ನಾನು ಇಷ್ಟೊಂದು ದೇಶಗಳನ್ನು ಸುತ್ತಿದರೂ ಇಂಥ ಆಪ್ತ, ಅದ್ಭುತ ಅನುಭವ ಈತನಕ ನನಗಾಗಿರಲಿಲ್ಲ. ಕಳೆದುಹೋದ ಒಂದು ಕೈಗಡಿಯಾರ ಮರಳಿ ಸಿಕ್ಕಾಗ ಭಾರತದ ಸಂಸ್ಕೃತಿ, ಸಂಬಂಧಗಳ ಬಂಧ ಎಷ್ಟೊಂದು ಶ್ರೀಮಂತಿಕೆಯಿಂದ ಕೂಡಿದೆ ಎಂಬ ಅರಿವಾಯಿತು.
ಇದನ್ನೂ ಓದಿ : Viral News: 13 ದಿನದಲ್ಲಿ 3,955 ಕಿ.ಮೀ ಸೈಕಲ್ ಸವಾರಿ ಮಾಡಿದ ಪುಣೆಯ ಮಹಿಳೆ
ನಾನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆಕಸ್ಮಿಕವಾಗಿ ನನ್ನ ಕೈಗಡಿಯಾರವನ್ನು ಎಕ್ಸ್ರೇ ಟ್ರೇಯಲ್ಲಿ ಬಿಟ್ಟುಬಂದಿದ್ದೆ. ಇದು ಸಾಮಾನ್ಯವಾದ ಕೈಗಡಿಯಾರವಲ್ಲ, ಇದರೊಂದಿಗೆ ಭಾವನಾತ್ಮಕ ಸಂಬಂಧವಿದೆ. ತೀರಿಹೋದ ನನ್ನ ಅಜ್ಜ ನನ್ನ ಹುಟ್ಟುಹಬ್ಬದ ದಿನ ಉಡುಗೊರೆಯಾಗಿ ಕೊಟ್ಟಿದ್ದಿದು.
ಕಚೇರಿ ಸಂಬಂಧಿಸಿದ ಎಲ್ಲ ಕೆಲಸಗಳನ್ನು ಮುಗಿಸಿ ಬೆಂಗಳೂರಿನಿಂದ ವಾಪಸ್ ಫ್ರಾಂಕ್ಫರ್ಟ್ಗೆ ಹೋದಾಗ ನನಗೆ ಕೈಗಡಿಯಾರದ ನೆನಪಾಯಿತು. ತಕ್ಷಣವೇ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ಈ ಕುರಿತು ಇಮೇಲ್ ರವಾನಿಸಿದೆ. ಅದೇ ವೇಳೇಗೆ ನಾನು ಭೇಟಿಕೊಟ್ಟ ಟಿಸಿಎಸ್ ಕಂಪೆನಿಯ ಸರ್ವೀಸ್ ತಂಡಕ್ಕೂ ಸಹಾಯ ಕೋರಿ ಇಮೇಲ್ ರವಾನಿಸಿದೆ. ಒಂದು ತಾಸಿನ ಒಳಗೆ ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳಿಂದ ಉತ್ತರ ಬಂದಿತು, ಭಾನುವಾರ ಮಧ್ಯರಾತ್ರಿ 1.41ಕ್ಕೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದು ಕೈಗಡಿಯಾರವನ್ನು ತೆಗೆದುಕೊಂಡು ಹೋಗಬಹುದು ಎಂಬ ಸಾರಾಂಶ ಅದರಲ್ಲಿತ್ತು.
ನಂತರ ಟಿಸಿಎಸ್ ಪ್ರತಿನಿಧಿಯು ಕೈಗಡಿಯಾರವನ್ನು ನನಗೆ ತಲುಪಿಸಿದರು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದ ಭದ್ರತಾ ಸಿಬ್ಬಂದಿ ಮತ್ತು ಅಧಿಕಾರಿಗಳ ತಂಡದ ವೃತ್ತಿಪರತೆ ಮತ್ತು ಟಿಸಿಎಸ್ನ ಸರ್ವೀಸ್ ಸಿಬ್ಬಂದಿಯ ತಂಡದ ಬದ್ಧತೆಗೆ ನಾನು ಕೃತಜ್ಞನಾಗಿದ್ದೇನೆ.
ಇದೊಂದು ಅನಿರೀಕ್ಷಿತ ಘಟನೆ, ನನ್ನನ್ನು ಭಾವುಕನನ್ನಾಗಿಸಿದೆ.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 1:01 pm, Tue, 29 November 22