Video: ಅಬ್ಬಾ ! ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ರೂ ಗಳಿಸಬಹುದಂತೆ; ಹೇಗೆ? ಇಲ್ಲಿದೆ ವಿಡಿಯೋ

ಮನೆಯಲ್ಲಿ ಜಾಗವಿದ್ದು ಹೊಸದಾಗಿ ತೋಟ ಮಾಡುವ ಪ್ಲ್ಯಾನ್ ನಲ್ಲಿದ್ದವರಿಗೆ ಈ ಮಾಹಿತಿ ಖಂಡಿತ ಉಪಯೋಗಕ್ಕೆ ಬರುತ್ತೆ. ನೀವು ಒಂದು ಎಕರೆ ಪ್ರದೇಶದಲ್ಲಿ ತೆಂಗಿನ ತೋಟ ಲಾಭವೇ ಹೆಚ್ಚು. ಹೌದು, ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷಕ್ಕೂ ಅಧಿಕ ಆದಾಯ ಗಳಿಸಬಹುದೆಂತೆ. ಅದೇಗೆ ಅಂತೀರಾ? ಇದಕ್ಕೆ ಉತ್ತರ ಈ ವಿಡಿಯೋದಲ್ಲಿದೆ ನೋಡಿ.

Video: ಅಬ್ಬಾ ! ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ರೂ ಗಳಿಸಬಹುದಂತೆ; ಹೇಗೆ? ಇಲ್ಲಿದೆ ವಿಡಿಯೋ
ಸಾಂದರ್ಭಿಕ ಚಿತ್ರ
Image Credit source: Pinterest

Updated on: Feb 02, 2026 | 4:03 PM

ಇತ್ತೀಚೆಗಿನ ದಿನಗಳಲ್ಲಿ ಕೃಷಿಯತ್ತ (agriculture) ಮುಖ ಮಾಡುವ ಯುವಕರ ಸಂಖ್ಯೆ ಹೆಚ್ಚಾಗಿದೆ. ಅದಲ್ಲದೇ ಆಧುನಿಕ ಕೃಷಿಯಲ್ಲಿ ಟ್ರಾಕ್ಟರ್‌ಗಳು, ಡ್ರೋನ್‌ಗಳು, ಸ್ಮಾರ್ಟ್ ನೀರಾವರಿ, ಮತ್ತು ಜೈವಿಕ ತಂತ್ರಜ್ಞಾನದಂತಹ ಆಧುನಿಕ ಪರಿಕರಗಳ ಬಳಕೆಯ ಮೂಲಕ ಇಳುವರಿಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಆದರೆ ಕೃಷಿಯಲ್ಲಿ ಆಸಕ್ತಿ ಇದ್ದು, ತೆಂಗಿನ ತೋಟ ಮಾಡಬೇಕೆಂದು ಕೊಂಡವರು ಈ ವಿಧಾನ ಅನುಸರಿಸಿದ್ರೆ 28 ಲಕ್ಷ ರೂ ಆದಾಯ ಬರೋದು ಗ್ಯಾರಂಟಿಯಂತೆ. ಈ ಕುರಿತಾದ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ರೈತ ಪ್ರಗತಿ (Raita Pragati) ಹೆಸರಿನ ಫೇಸ್ ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ವ್ಯಕ್ತಿಯೊಬ್ಬರು ತೆಂಗಿನ ತೋಟದಲ್ಲಿ ಹೆಚ್ಚು ಆದಾಯ ಗಳಿಸುವುದು ಹೇಗೆಂದು ವಿವರಿಸಿದ್ದಾರೆ. ಒಂದು ಎಕರೆ ತೆಂಗಿನ ತೋಟದಲ್ಲಿ 28 ಲಕ್ಷ ದುಡಿಯಬಹುದಂತೆ. ತೆಂಗಿನ ತೋಟದಲ್ಲಿ ಹೆಚ್ಚು ಆದಾಯ ಬರಲು ಏನೆಲ್ಲಾ ಕ್ರಮಗಳನ್ನು ಅನುಸರಿಸಬೇಕೆಂದು ವಿವರಿಸಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಇದು ಹಳ್ಳಿ ಜೀವನದ ಗಮ್ಮತ್ತು; ಕೃಷಿ ಕಾಯಕದಲ್ಲಿ ನಿರತರಾಗಿರುವ ಹಳ್ಳಿ ಜನ್ರು

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಒಳ್ಳೆಯ ಮಾಹಿತಿ ಎಂದರೆ, ಮತ್ತೊಬ್ಬರು, ಇವರ ಹೇಳಿಕೆಯಲ್ಲಿ ವಿಸ್ತಾರವಾದ ಅರ್ಥವಿದೆ. ವೈಜ್ಞಾನಿಕವಾಗಿ ಚಿಂತಿಸಿ ಅರ್ಥ ಮಾಡಿಕೊಳ್ಳಿ, ಇಂದಿನ ದಿನಮಾನದಲ್ಲಿ ಯಾವುದೂ ಕಷ್ಟವಲ್ಲ. ಇವರೇ ಹೇಳಿದ್ದು ಒಂದು ಎಕರೆ ತೆಂಗಿನ ಜೊತೆಗೆ ಹಲವಾರು ಬೆಳೆಗಳನ್ನು ಕೂಡ ಹೇಳಿದ್ದಾರೆ ಅಮೌಂಟ್ ಸ್ವಲ್ಪ ಹೆಚ್ಚಿಗೆ ಹೇಳಿದ್ದಾರೆ ಆದರೆ ಸತ್ಯ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಕಾಡು ಪ್ರಾಣಿಗಳು ಬಿಟ್ರೆ ನಮಗೆ ಫಸಲು ಸಿಗೋದು ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:02 pm, Mon, 2 February 26