Viral: ಅಮುಲ್‌ ಗರ್ಲ್‌, ಪಾರ್ಲೆಜಿ ಹುಡುಗಿಗೆ ಜೀವ ಕಳೆ ತುಂಬಿದ ಎಐ; ವೈರಲ್‌ ಆಯ್ತು ಮುದ್ದಾದ ವಿಡಿಯೋ

ಆರ್ಟಿಫಿಶಿಯಲ್‌ ಇಂಟಲಿಜೆನ್ಸ್‌ (AI) ಅಂದರೆ ಕೃತಕ ಬುದ್ಧಿಮತ್ತೆ ಇಂದು ಪ್ರತಿಯೊಂದು ಕ್ಷೇತ್ರವನ್ನು ಆವರಿಸಿದೆ. AI ತಂತ್ರಜ್ಞಾನದ ಸಹಾಯದಿಂದ ಹಲವಾರು ಭಿನ್ನ ವಿಭಿನ್ನ ಪ್ರಯೋಗಗಳು ಕೂಡಾ ನಡೆಯುತ್ತಿದೆ. ಅದೇ ರೀತಿ ಇದೀಗ ಇಲ್ಲೊಬ್ರು ಆರ್ಟಿಸ್ಟ್‌ AI ತಂತ್ರಜ್ಞಾನದ ಸಹಾಯದಿಂದ ಅಮುಲ್‌ ಗರ್ಲ್‌, ಪಾರ್ಲೆ ಜಿ ಹುಡುಗಿ, ನಿರ್ಮಾ ಹುಡುಗಿ ಸೇರಿದಂತೆ, ಭಾರತದ ಒಂದಷ್ಟು ಫೇಮಸ್‌ ಬ್ರ್ಯಾಂಡ್‌ನ ಮ್ಯಾಸ್ಕಾಟ್‌ಗಳಿಗೆ ಜೀವ ಕಳೆ ತುಂಬಿದ್ದಾರೆ. ಈ ಕ್ರಿಯೆಟಿವ್‌ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗಿದ್ದು, AI ಕೈ ಚಳಕಕ್ಕೆ ನೆಟ್ಟಿಗರು ಫುಲ್‌ ಫಿದಾ ಆಗಿದ್ದಾರೆ.

Viral: ಅಮುಲ್‌ ಗರ್ಲ್‌, ಪಾರ್ಲೆಜಿ ಹುಡುಗಿಗೆ ಜೀವ ಕಳೆ ತುಂಬಿದ ಎಐ; ವೈರಲ್‌ ಆಯ್ತು ಮುದ್ದಾದ ವಿಡಿಯೋ
ವೈರಲ್‌ ವಿಡಿಯೋ
Updated By: ಅಕ್ಷಯ್​ ಪಲ್ಲಮಜಲು​​

Updated on: Apr 13, 2025 | 9:52 PM

ಇಂದಿನ ಡಿಜಿಟಲ್‌ ಯುಗದಲ್ಲಿ (Digital World) ಎಐ ತಂತ್ರಜ್ಞಾನ (AI technology) ಅಂದರೆ ಕೃತಕ ಬುದ್ಧಿಮತ್ತೆ (Artificial Intelligence) ಕೂಡಾ ದಿನದಿಂದ ದಿನಕ್ಕೆ ಸಖತ್‌ ಅಭಿವೃದ್ಧಿಯನ್ನು ಹೊಂದುತ್ತಿದೆ. ಈ AI ತಂತ್ರಜ್ಞಾನ ಶಿಕ್ಷಣ (education), ವೈದ್ಯಕೀಯದಿಂದ  (medical) ಹಿಡಿದು ಪ್ರತಿಯೊಂದು ಕ್ಷೇತ್ರವನ್ನು ಆವರಿಸಿದೆ. ಮೊನ್ನೆಯಷ್ಟೆ  AI  ತಂತ್ರಜ್ಞಾನದ ಭಾಗವಾದ ಘಿಬ್ಲಿ (Ghibli) ಫೋಟೋ ಟ್ರೆಂಡ್‌ ಸಖತ್‌ ವೈರಲ್‌ ಆಗಿತ್ತು. ಹೆಚ್ಚಿನವರು ಚಾಟ್‌ ಜಿಪಿಟಿಗೆ ತನ್ನ ಫೋಟೋವನ್ನು ಅಪ್‌ಲೋಡ್‌ ಮಾಡಿ AI ಸಹಾಯದಿಂದ ಆ ಫೋಟೋವನ್ನು ಘಿಬ್ಲಿ ಸ್ಟೈಲ್‌ ಇಮೇಜ್‌ಗಳಾಗಿ ಪರಿವರ್ತಿಸಿದ್ದರು. ಇದೀಗ ಇಲ್ಲೊಂದು ವಿಡಿಯೋ ವೈರಲ್‌ ಆಗಿದ್ದು, ಆರ್ಟಿಸ್ಟ್‌ ಒಬ್ರು ಎಐ ಸಹಾಯದಿಂದ ಅಮುಲ್‌ ಗರ್ಲ್‌ (Amul girl), ಪಾರ್ಲೆಜಿ ಹುಡುಗಿ (Parle G girl)  ಸೇರಿದಂತೆ ಒಂದಷ್ಟು ಬ್ರ್ಯಾಂಡ್‌ (brand) ಮ್ಯಾಸ್ಕಾಟ್‌ಗಳಿಗೆ (mascots) ಜೀವ ಕಳೆ ತುಂಬಿದ್ದಾರೆ. ಈ ಮುದ್ದಾದ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್‌ ಆಗುತ್ತಿದೆ.

ಆರ್ಟಿಸ್ಟ್‌ ಶಾಹಿದ್ (Sahid SK) ಎಐ ತಂತ್ರಜ್ಞಾನದ ಸಹಾಯದಿಂದ ಭಾರತದ ಒಂದಷ್ಟು ಫೇಮಸ್‌ ಬ್ರ್ಯಾಂಡ್‌ಗಳ ಪ್ರಸಿದ್ಧಿ ಪಡೆದ ಮ್ಯಾಸ್ಕಾಟ್‌ಗಳನ್ನು ಹೈಪರ್-ರಿಯಲಿಸ್ಟಿಕ್ ರೀತಿಯಲ್ಲಿ ಮರುಕಲ್ಪಿಸಿದ್ದಾರೆ. ಫೇಮಸ್‌ ಮ್ಯಾಸ್ಕಾಟ್‌ಗಳಾದ ಅಮುಲ್‌ ಗರ್ಲ್‌, ಪಾರ್ಲೆ ಜಿ ಗರ್ಲ್‌, ಅಮುಲ್‌ ಗರ್ಲ್‌, ಏರ್‌ ಇಂಡಿಯಾದ ಮಹಾರಾಜ, ಏಷಿಯಲ್‌ ಪೈಂಟ್‌ ಹುಡುಗ, ಭಾರತೀಯ ರೈಲ್ವೆಯ ಆನೆ, ನಿರ್ಮಾ ಹುಡಗಿ ಚೀಟೋಸ್‌ ಚಿಪ್ಸ್‌ನ ಚೀತಾ ಹೀಗೆ ಒಂದಷ್ಟು ಫೇಮಸ್‌ ಮ್ಯಾಸ್ಕಾಟ್‌ಗಳಿಗೆ ಜೀವ ಕಳೆ ತುಂಬಿದ್ದಾರೆ.

ಇದನ್ನೂ ಓದಿ
ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ
ಅಂಗಡಿಯೊಂದರಲ್ಲಿ ಪತ್ನಿ ಎದುರೇ ಪತಿಯ ಖಾಸಗಿ ಅಂಗ ಹಿಡಿದ ಮಹಿಳೆ
ಇವನಿಗೆ ಬೇರೆ ಜಾಗನೇ ಸಿಗ್ಲಿಲ್ವಾ ಲಿಫ್ಟ್ ನೊಳಗೆ ಮೂತ್ರ ವಿಸರ್ಜಿಸಿದ ವ್ಯಕ್ತ
ಸರ್ಪ ದೋಷ ನಿವಾರಣೆಗೆ ಮಗಳನ್ನೇ ನರಬಲಿ ನೀಡಿದ ತಾಯಿ

ಇದನ್ನೂ ಓದಿ: ಜಂಡರ್ ರಿವೀಲ್ ಪಾರ್ಟಿಯಲ್ಲಿ ಮಗುವಿನ ತಂದೆಯಾರೆಂಬ ಗೊಂದಲ, ಗರ್ಭಪಾತಕ್ಕೆ ಕಾರಣವಾಯ್ತು

 ವೈರಲ್ ವಿಡಿಯೋ ಇಲ್ಲಿದೆ ನೋಡಿ :

Sahixd ಹೆಸರಿನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಈ ಕುರಿತ ವಿಡಿಯೋವನ್ನು ಶೇರ್‌ ಮಾಡಲಾಗಿದ್ದು, “ನಿಜ ಜೀವನದಲ್ಲಿ ಹೇಗಿದ್ದಾರೆ ನೋಡಿ ಐಕಾನಿಕ್‌ ಬ್ರ್ಯಾಂಡ್‌ ಮ್ಯಾಸ್ಕಾಟ್‌ಗಳು” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್‌ ವಿಡಿಯೋದಲ್ಲಿ ಪಾರ್ಲೆಜಿ ಬಿಸ್ಕೆಟ್‌ ಪ್ಯಾಕೆಟ್‌ನಲ್ಲಿರುವ ಹುಡುಗಿ ನಗುತ್ತಾ ಕುಳಿತಿರುವ, ಅಮುಲ್‌ ಹುಡುಗಿ ಚೀಸ್‌ ತಿನ್ನುತ್ತಾ ನಿಂತಿರುವ, ಏರ್‌ ಇಂಡಿಯಾ ಮಹರಾಜ ಎಲ್ಲರನ್ನು ಸ್ವಾಗತಿಸುವ ಹೀಗೆ ಕೆಲವೊಂದಷ್ಟು ಫೇಮಸ್‌ ಮ್ಯಾಸ್ಕಾಟ್‌ಗಳಿಗೆ ಜೀವ ಕಳೆ ಬಂದಿರುವ ದೃಶ್ಯವನ್ನು ಕಾಣಬಹುದು.

ಎರಡು ದಿನಗಳ ಹಿಂದೆ ಶೇರ್‌ ಮಾಡಲಾದ ಈ ವಿಡಿಯೋ 10.9 ಮಿಲಿಯನ್‌ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಪಾರ್ಲೆ ಜಿ ಹುಡುಗಿ ತುಂಬಾ ಮುದ್ದಾಗಿದ್ದಾಳೆʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಕೊನೆಗೂ ಇವರಿಗೆ ಜೀವ ಬಂತಲ್ವಾʼ ಎಂಬ ತಮಾಷೆಯ ಕಾಮೆಂಟ್‌ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆಹಾ ಏನದ್ಭುವಾಗಿದೆ ಈ ದೃಶ್ಯ, ನೀವು ನನ್ನ ಬಾಲ್ಯವನ್ನು ನೆನಪು ಮಾಡಿದಿರಿʼ ಎಂದು ಹೇಳಿದ್ದಾರೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ