ಸರ್ಪ ದೋಷ ನಿವಾರಣೆಗೆ ಮಗಳನ್ನೇ ನರಬಲಿ ನೀಡಿದ ತಾಯಿ, ಮಹತ್ವದ ತೀರ್ಪು ನೀಡಿದ ಕೋರ್ಟ್
ಒಂದು ವಿಚಾರದ ಮೇಲೆ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು, ಮೂಢನಂಬಿಕೆಯಿಂದ ಒಂದು ಜೀವವನ್ನು ಬಲಿ ಪಡೆಯುತ್ತದೆ ಎಂದರೆ ಏನ್ ಅರ್ಥ? ಜಗತ್ತು ವೇಗವಾಗಿ ತಂತ್ರಜ್ಞಾನದ ಹಿಂದೆ ಓಡುತ್ತಿದೆ. ಆದರೆ ಕೆಲವೊಂದು ಕಡೆ ಮೂಢನಂಬಿಕೆ ಕೊನೆಯಾಗಿಲ್ಲ ನೋಡಿ. ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ಮಹಿಳೆಯೊಬ್ಬರು ತನ್ನ ಮಗಳನೇ ನರಬಲಿ ನೀಡಿರುವ ಘಟನೆ ನಡೆದಿದೆ. ಆಕೆ ತನ್ನ ಮಗಳನ್ನು ನರಬಲಿ ನೀಡಲು ಕಾರಣ ಏನು ಗೊತ್ತಾ? ಆಕೆ ಮಾಡಿ ಅಪರಾಧಕ್ಕೆ ಕೋಟ್ ನೀಡಿದ ಶಿಕ್ಷೆ ಏನ್ ಗೊತ್ತಾ? ಇಲ್ಲಿದೆ ನೋಡಿ.

ಒಂದು ನಂಬಿಕೆ ಎನ್ನುವುದು ನಮ್ಮ ಜೀವನವನ್ನು ರೂಪಿಸುತ್ತದೆ, ಅದೇ ಒಂದು ಮೂಢನಂಬಿಕೆ ನಮ್ಮ ಜೀವನವನ್ನೇ ಕೊನೆ ಮಾಡುತ್ತದೆ. ಪದಗಳ ವ್ಯತ್ಯಾಸದಷ್ಟೇ, ಅವುಗಳ ಆಚರಣೆಯಲ್ಲೂ ವ್ಯತ್ಯಾಸ ಇದೆ. ಒಬ್ಬ ಮನುಷ್ಯನಿಗೆ ನಂಬಿಕೆ ಇರಬೇಕು, ಆದರೆ ಮೂಢನಂಬಿಕೆ ಇರಬಾರದು, ಅದು ಈ ಆಧುನಿಕ ಜಗತ್ತಿನಲ್ಲಿ, ಇಡೀ ಜಗತ್ತು ತಂತ್ರಜ್ಞಾನದ ಹಿಂದೆ ಓಡುತ್ತಿದೆ. ಎಐ ಅಂತಹ ವಿಚಾರಗಳ ಮುಂದೆ ಈ ಮೂಢನಂಬಿಕೆ ಎಂಬ ಭೂತ ಇನ್ನು ಹೋಗಿಲ್ಲ ನೋಡಿ. ಹೌದು ಇಲ್ಲೊಂದು ಘಟನೆ ಇಡೀ ಮನುಷ್ಯ ಕುಲಕ್ಕೆ ಅವಮಾನ. ಅದರಲ್ಲೂ ತಾಯಿ ಎನ್ನುವ ಪದಕ್ಕೆ ಕಳಂಕ ತಂದಿದೆ. ತನ್ನ ಅತಿಯಾದ ಮೂಢನಂಬಿಕೆಯಿಂದ ಸ್ವಂತ ಮಗಳನ್ನೇ ತಾಯಿಯೊಬ್ಬಳು ಬಲಿ ನೀಡಿದ್ದಾಳೆ. ಈ ಘಟನೆ ತೆಲಂಗಾಣದ ಸೂರ್ಯಪೇಟ್ ಜಿಲ್ಲೆಯ ಮೋತೆ ಮಂಡಲದ ಮೇಕಲ ತಾಂಡಾದಲ್ಲಿ ನಡೆದಿದೆ. ಕೃಷ್ಣ ಮತ್ತು ಭಾರತಿ ಎಂಬ ದಂಪತಿಗಳು ಇಲ್ಲಿ ವಾಸವಾಗಿದ್ದರು. ಭಾರತಿ ಮತ್ತು ಕೃಷ್ಣ ಅವರ ಮದುವೆಗೆ ಭಾರತಿ ಮನೆಯವರ ಒಪ್ಪಿಗೆ ಇರಲಿಲ್ಲ. ಬಲವಂತವಾಗಿ ಭಾರತಿಗೆ ಬೇರೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಿದ್ದಾರೆ. ಆದರೆ ಆಕೆ ಆತನ ಜತೆ ಸಂಸಾರ ನಡೆಸದೆ. ಕೃಷ್ಣನ ಜತೆಗೆ ಓಡಿ ಹೋಗಿ 2019ರಲ್ಲಿ ಕೃಷ್ಣ ಅವರನ್ನು ವಿವಾಹವಾದರು. ಹೀಗೆ ಅವರ ಪ್ರೀತಿಯ ಸಂಕೇತವಾಗಿ ಒಬ್ಬಳು ಮಗಳು ಜನಿಸಿದಳು.
ಭಾರತಿಗೆ ಮೊದಲಿನಿಂದಲ್ಲೂ ದೇವರ ಬಗ್ಗೆ ಅಥವಾ ಜ್ಯೋತಿಷ್ಯದ ಬಗ್ಗೆ ಅಪಾರ ನಂಬಿಕೆ, ಆ ಕಾರಣಕ್ಕೆ ಆಕೆಗೆ ಒಬ್ಬ ಜ್ಯೋತಿಷ್ಯರು ಸರ್ಪ ದೋಷ ಇದೆ ಎಂದು ಹೇಳಿದರು. ಅಂದಿನಿಂದ ಆಕೆ ಎಲ್ಲ ಕಡೆ ಸರ್ಪ ದೋಷ ನಿವಾರಣೆ ಪೂಜೆ, ಆ ಪೂಜೆ, ಈ ಪೂಜೆ ಎಲ್ಲ ಮಾಡುತ್ತಿದ್ದಳು. ಆದರೆ ತಾಯಿಯ ಈ ಮೂಢನಂಬಿಕೆ ಬಗ್ಗೆ ಆಕೆಯ ಮಗಳು ಅಸಡ್ಡೆ ತೋರುತ್ತಿದ್ದಳು. ಈಕೆಯ ಈ ವರ್ತನೆ ನೋಡಿ ಗಂಡ ಕೃಷ್ಣ ಹಾಗೂ ಆಕೆಯ ಅತ್ತೆ-ಮಾವ ಮನೋವೈದ್ಯರ ಬಳಿಗೆ ಕರೆದೊಯ್ಯಲು ನಿರ್ಧಾರಿಸಿದರು. ಆದರೆ ಆಕೆ ಈ ಮೂಢನಂಬಿಕೆಗೆ ಒಳಗಾಗಿ, ನಾನು ಮಂತ್ರ ಶಕ್ತಿಯಿಂದ ಸರಿಯಾಗುತ್ತೇನೆ ಎಂದು ಚಿಕಿತ್ಸೆಯನ್ನು ವಿರೋಧಿಸಿದಳು.
ಸ್ವಲ್ಪ ದಿನಗಳ ನಂತರ ಭಾರತಿ ಈ ಸರ್ಪ ದೋಷದಿಂದ ಮುಕ್ತಿ ಪಡೆಯಲು ನರಬಲಿ ಪೂಜೆ ಮಾಡಬೇಕು ಎಂದು ನಿರ್ಧಾರಿಸಿದಳು. ಇದಕ್ಕೆ ಏಪ್ರಿಲ್ 15, 2021 ರಂದು, ಮನೆಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಸರ್ಪ ದೋಷದಿಂದ ಮುಕ್ತಿಗೆ ಈ ದಾರಿ ಸರಿ ಎಂದು ಭಾರತಿ ತನ್ನ ಏಳು ವರ್ಷ ಮಗಳ ನಾಲಿಗೆ ಮತ್ತು ಗಂಟಲನ್ನು ಕತ್ತರಿಸಿ ಕ್ರೂರವಾಗಿ ಕೊಂದು ಹಾಕಿದ್ದಾಳೆ. ನಂತರ ಸ್ಥಳದಿಂದ ಭಾರತಿ ಪರಾರಿಯಾಗಿದ್ದಾಳೆ. ಕೃಷ್ಣ ಮನೆಗೆ ಬಂದು ನೋಡಿದ್ರೆ, ತನ್ನ ಮಗುವು ರಕ್ತ ಮಡುವಿನಲ್ಲಿ ಬಿದ್ದಿರುವುದು ಕಂಡು ಅಘಾತಕ್ಕೆ ಒಳಗಾಗಿದ್ದ, ನಂತರ ಈ ವಿಷಯನ್ನು ಪೋಲಿಸರಿಗೆ ತಿಳಿಸಿದ್ದಾನೆ.
ಇದನ್ನೂ ಓದಿ: ತಿರುಮಲ ಪಾವಿತ್ರ್ಯಕ್ಕೆ ಧಕ್ಕೆ : ಚಪ್ಪಲಿ ಧರಿಸಿ ಶ್ರೀವಾರಿ ದೇವಾಲಯದ ಮುಖ್ಯದ್ವಾರ ಪ್ರವೇಶಿಸಿದ ಮೂವರು ಭಕ್ತರು
ಪೊಲೀಸರು ತನಿಖೆಯನ್ನು ನಡೆಸಿ, ತಾಯಿ ಭಾರತಿಯನ್ನು ಪತ್ತೆ ಮಾಡಿ ಬಂಧಿಸಿದ್ದಾರೆ. ತನಿಖೆ ನಡೆಸಿದ ಪೊಲೀಸರು, ಆಕೆಯನ್ನು ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ. ಪೊಲೀಸ್ ಇಲಾಖೆ ನಡೆಸಿದ ಎಲ್ಲ ತನಿಖೆಗಳ ವರದಿಯನ್ನು ಕೋರ್ಟ್ ಮುಂದೆ ಇಟ್ಟಿದ್ದಾರೆ. ಆಕೆ ತಪ್ಪಿಗೆ ಬಲವಾದ ಸಾಕ್ಷಿಗಳಿದ್ದು, ಕೋರ್ಟ್ ಆಕೆಗೆ ಮರಣದಂಡನೆ ನೀಡಿದೆ. ಸೂರ್ಯಪೇಟೆ ಜಿಲ್ಲಾ ನ್ಯಾಯಾಲಯದ ಮೊದಲ ಹೆಚ್ಚುವರಿ ನ್ಯಾಯಾಧೀಶ ಎಂ. ಶ್ಯಾಮ್ ಶ್ರೀ ತೀರ್ಪು ನೀಡಿದ್ದಾರೆ. ಹಾಗೂ ಆಕೆಗೆ 5 ಸಾವಿರ ದಂಡ ವಿಧಿಸಲಾಯಿತು. ಒಂದು ವೇಳೆ ದಂಡ ಪಾವತಿಸದಿದ್ದಾರೆ. 3 ತಿಂಗಳು ಹೆಚ್ಚುವರಿ ಜೈಲು ಶಿಕ್ಷೆಯನ್ನು ವಿಧಿಸುತ್ತದೆ ಎಂದು ಹೇಳಿದೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:55 pm, Sat, 12 April 25