Viral : ನ್ಯೂಜೆರ್ಸಿಯ ಎಡಿಸನ್ ನಗರದಲ್ಲಿರುವ ಇಂಡೋ-ಅಮೇರಿಕನ್ ಕುಟುಂಬವು ತಮ್ಮ ಮನೆಯ ಮುಂದೆ ಬಾಲಿವುಡ್ ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ಪ್ರತಿಮೆಯನ್ನು ಸ್ಥಾಪಿಸಿದೆ. ಪ್ರತಿಮೆಯನ್ನು ದೊಡ್ಡ ಗಾಜಿನ ಪೆಟ್ಟಿಗೆಯೊಳಗೆ ಇರಿಸಲಾಗಿದೆ. ಪ್ರತಿಮೆಯನ್ನು ರಾಜಸ್ಥಾನದಲ್ಲಿ ತಯಾರಿಸಿ ನಂತರ ಅಮೆರಿಕಕ್ಕೆ ತರಿಸಿಕೊಳ್ಳಲಾಗಿದೆ. ಇದಕ್ಕೆ ಅಂದಾಜು ರೂ. 60 ಲಕ್ಷ ಖರ್ಚು ಮಾಡಲಾಗಿದೆ. ಅನಾವರಣ ಕಾರ್ಯಕ್ರಮವೂ ಅದ್ಧೂರಿಯಾಗಿಯೇ ನಡೆದಿದೆ. ಅಭಿಮಾನಿಗಳ ಸಂಘದ ಸದಸ್ಯರುಗಳು ಇದರಲ್ಲಿ ಪಾಲ್ಗೊಂಡು, ಪಟಾಕಿ ಸಿಡಿಸಿ, ನೃತ್ಯ ಮಾಡಿ ಸಂಭ್ರಮಿಸಿದ್ದಾರೆ.
????On Saturday august 27th we have placed @SrBachchan statue ????????at outside in the front of our new home in edison NJ USA . Lots of Mr Bachchan’s fan’s participated on Mr Bachchan’s staue inoguration ceremony. pic.twitter.com/O3RklFS5eZ
ಇದನ್ನೂ ಓದಿ— Gopi EFamily (@GopiSheth) August 28, 2022
‘ನನಗೆ ಮತ್ತು ನನ್ನ ಹೆಂಡತಿಗೆ ಬಿಗ್ ಬಿ ದೇವರಸಮಾನ’ ಎಂದು ಗೋಪಿ ಸೇಠ್ ಪಿಟಿಐಗೆ ತಿಳಿಸಿದ್ದಾರೆ. ಗೋಪಿ ಸೇಠ್ ಅವರ ಕುಟುಂಬಕ್ಕೆ ಮೀಸಲಾಗಿರುವ ಟ್ವಿಟರ್ ಖಾತೆಯಲ್ಲಿ ಈ ಸಮಾರಂಭದ ಫೋಟೋಗಳು ಪೋಸ್ಟ್ ಆಗಿವೆ.
‘ಆಗಸ್ಟ್ 27 ರ ಶನಿವಾರದಂದು ಎಡಿಸನ್ NJ USA ನಲ್ಲಿರುವ ನಮ್ಮ ಹೊಸ ಮನೆಯ ಮುಂಭಾಗದಲ್ಲಿ @SrBachchan ಪ್ರತಿಮೆಯನ್ನು ಸ್ಥಾಪಿಸಿದ್ದೇವೆ. ಬಚ್ಚನ್ ಅವರ ಪ್ರತಿಮೆ ಉದ್ಘಾಟನಾ ಸಮಾರಂಭದಲ್ಲಿ ಅವರ ಅನೇಕ ಅಭಿಮಾನಿಗಳು ಭಾಗವಹಿಸಿದ್ದರು’ ಎಂಬ ಒಕ್ಕಣೆ ಈ ಪೋಸ್ಟ್ನದ್ದು.
ಸೇಠ್, 1990 ರಲ್ಲಿ ಪೂರ್ವ ಗುಜರಾತ್‌ನ ದಾಹೋಡ್‌ನಿಂದ ಯುಎಸ್‌ಗೆ ಬಂದವರು. ಕಳೆದ ಮೂವತ್ತು ವರ್ಷಗಳಿಂದ “ಬಿಗ್ ಬಿ ಎಕ್ಸ್ಟೆಂಡೆಡ್ ಫ್ಯಾಮಿಲಿ” ಗಾಗಿ ವೆಬ್‌ಸೈಟ್ www.BigBEFamily.com ಅನ್ನು ನಡೆಸುತ್ತಿದ್ದಾರೆ.
1991 ರಲ್ಲಿ ನ್ಯೂಜೆರ್ಸಿಯಲ್ಲಿ ನವರಾತ್ರಿ ಆಚರಣೆಯ ಸಂದರ್ಭದಲ್ಲಿ ಅಮಿತಾಬ್ ಬಚ್ಚನ್ ಅವರನ್ನು ಭೇಟಿಯಾದ ಸೇಠ್, ಅಂದಿನಿಂದಲೇ ಅವರ ಅಭಿಮಾನಿಯಾದರು.
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 3:52 pm, Mon, 29 August 22