
ಸಾಮಾನ್ಯವಾಗಿ ಬೇರೆ ಊರುಗಳಿಗೆ ಹೋದಾಗ ಏನಾದ್ರೂ ಕೊಂಡುಕೊಳ್ಳಲು ಹೋದರೆ, ಅಂಗಡಿಯವರು ಪ್ರವಾಸಿಗ (tourist) ರ ಬಳಿ ಹೆಚ್ಚುವರಿ ಹಣ ಲೂಟಿ ಮಾಡುವುದನ್ನು ನೋಡಿರಬಹುದು. ಅದರಲ್ಲಿಯೂ ಭಾಷೆ ಗೊತ್ತಿರದ ವಿದೇಶಿಗ (foreigners) ರು ಪ್ರವಾಸಕ್ಕೆಂದು ಭಾರತಕ್ಕೆ ಬಂದಾಗ ಎಷ್ಟೋ ಸಲ ಈ ವಿಚಾರದಿಂದ ಮೋಸ ಹೋಗುತ್ತಾರೆ. ಬ್ರಿಟಿಷ್ ಪ್ರವಾಸಿ ವ್ಲಾಗರ್ ಮತ್ತು ಕಂಟೆಂಟ್ ಕ್ರಿಯೇಟರ್ ಜಾರ್ಜ್ ಬಕ್ಲಿ (George Buckley) ಭಾರತಕ್ಕೆ ಭೇಟಿ ನೀಡಿದ್ದ ವೇಳೆಯಲ್ಲಿ ಹೇರ್ ಕಟ್ ಮಾಡಿಸಲು ಹೋದಾಗ ಸೆಲ್ಯೂನ್ ಅಂಗಡಿಯವನು 1,800 ರೂ. ಕೇಳಿದ್ದು, ಹೇಗೆ ತನ್ನನ್ನು ಮೋಸಗೊಳಿಸಲು ಪ್ರಯತ್ನಿಸಿದ್ದಾನೆ ಹಾಗೂ ಹೇಗೆ ತಾನು ಚೌಕಾಸಿ ಮಾಡಿದೆ ಎನ್ನುವ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾನೆ. ಈ ವಿಡಿಯೋವೊಂದು ಶೇರ್ ಮಾಡಿಕೊಳ್ಳುವುದಿದ್ದಂತೆ ನೆಟ್ಟಿಗರು ಕಾಮೆಂಟ್ ಗಳ ಸುರಿಮಳೆಗೈದಿದ್ದಾರೆ.
georgebxckley ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದೊಂದಿಗೆ, ನಾನು ಟಿಪ್ ಕೊಡುತ್ತಿದ್ದೆ ಆದರೆ ಅವನು ಅದನ್ನು ಹಾಳು ಮಾಡಿದನು. ಏಷ್ಯಾ ಪ್ರಯಾಣದ ಸ್ವಲ್ಪ ಅನುಭವದ ಬಳಿಕ , ನಿಮಗೆ ಯಾವಾಗ ಹೆಚ್ಚಿನ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಯುತ್ತದೆ. ಅದಲ್ಲದೇ, ಇಂತಹ ಅನುಭವ ನನಗೂ ಕೂಡ ಆಗಿದೆ. ಹೌದು, ನಾನು ಅವನಿಗೆ ಟಿಪ್ ನೀಡಲು ಯೋಜಿಸುತ್ತಿದ್ದೆ. ಆದರೆ ಪ್ರಾಮಾಣಿಕತೆಗೆ ಮೊದಲ ಸ್ಥಾನವಿದ್ದು ಅದನ್ನು ಆತನು ಕಳೆದುಕೊಂಡಿದ್ದಾನೆ. ಹೇರ್ ಕಟ್ ಸ್ವಲ್ಪ ಕಹಿಯಾಗಿದ್ದರೂ ಆಸಕ್ತಿದಾಯಕ ಅನುಭವ!’ ಎಂದು ಬರೆದುಕೊಂಡಿರುವುದನ್ನು ಕಾಣಬಹುದು.
ಈ ವಿಡಿಯೋದಲ್ಲಿ ಭಾರತಕ್ಕೆ ಪ್ರವಾಸಕ್ಕೆ ಬಂದಿದ್ದ ವೇಳೆ ಹೇರ್ ಕಟ್ ಮಾಡಿಸಲು ಹೋದಾಗ ತನ್ನಿಂದ ಹೇಗೆ ಹೆಚ್ಚುವರಿ ಹಣವನ್ನು ಹೇಗೆ ವಸೂಲಿ ಮಾಡಲಾಯಿತು ಎನ್ನುವ ಬಗ್ಗೆ ಹೇಳಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ವಿದೇಶಿಗನು ಹೇರ್ ಕಟ್ ಮಾಡಿಸಲು ಸೆಲ್ಯೂನ್ ಗೆ ಹೋಗಿರುವುದನ್ನು ನೋಡಬಹುದು. ಈ ವೇಳೆಯಲ್ಲಿ ಜಾರ್ಜ್ ಬಕ್ಲಿ ಅವರ ಬಳಿ ಹೇರ್ ಕಟ್ ಹಾಗೂ ಹೆಡ್ ಮಸಾಜ್‌ಗೆ 1,800 ರೂ. ಕೇಳಲಾಗಿದೆ. ಇದು ದುಬಾರಿಯಾಗಿದ್ದು ವಿದೇಶಿಗನು ಹಣವನ್ನು ನೀಡಲು ಹಿಂದೆ ಮುಂದೆ ನೋಡಿದ್ದು, ಇದನ್ನು ಅರಿತ ಸೆಲ್ಯೂನ್ ಅಂಗಡಿಯವನು 1,500 ರೂ ಎಂದು ಹೇಳುವುದನ್ನು ನೋಡಬಹುದು.
ಇದನ್ನೂ ಓದಿ : Viral :ಮದುಮಗನ ಡಾನ್ಸ್ ಗೆ ನಾಚಿ ನೀರಾದ ಮದುಮಗಳು, ವಿಡಿಯೋ ವೈರಲ್
ಈ ವಿಡಿಯೋ ಈಗಾಗಲೇ ಮೂರು ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಈ ವಿಡಿಯೋ ನೋಡಿದ ಬಳಿಕ ಬಳಕೆದಾರರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ. ಒಬ್ಬ ಬಳಕೆದಾರರು, ‘ತಾವು ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ ಇರಬೇಕು. ಈ ರೀತಿ ಮಾಡಿ ವಿದೇಶಿಗರಿಂದ ಹಣವನ್ನು ವಸೂಲಿ ಮಾಡುವುದು ಸರಿಯಲ್ಲ, ಇದು ಗ್ರಾಹಕರ ನಂಬಿಕೆಯನ್ನು ಕಳೆದುಕೊಂಡಂತೆ’ ಎಂದಿದ್ದಾರೆ. ಇನ್ನೊಬ್ಬರು ‘ದೊಡ್ಡ ದೊಡ್ಡ ಸೆಲ್ಯೂನ್ ಗಳಲ್ಲಿ ಹೇರ್ ಕಟ್ ಹಾಗೂ ಇನ್ನಿತ್ತರ ಸೇವೆಗಳಿಗೆ ಹೆಚ್ಚೆಂದರೆ ಐದು ರೂಪಾಯಿ ಇರಬಹುದು’ ಎಂದು ಹೇಳಿದ್ದಾರೆ. ಮತ್ತೊಬ್ಬರು, ‘ ಹೇರ್ ಹಾಗೂ ಶೇವಿಂಗ್ ಮಾಡಿಸಿಕೊಳ್ಳಲು 100 ರಿಂದ 200 ರೂ ತೆಗೆದುಕೊಳ್ಳುತ್ತಾರೆ’ ಎಂದು ಇಲ್ಲಿನ ಸೆಲ್ಯೂನ್ ಶಾಪ್ ಗಳಲ್ಲಿನ ನಿಜವಾದ ಬೆಲೆಯಲ್ಲಿ ಉಲ್ಲೇಖಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ