
Nagaland: ನಾಗಾಲ್ಯಾಂಡ್ನ ಪ್ರವಾಸೋದ್ಯಮ ಮತ್ತು ಉನ್ನತ ಶಿಕ್ಷಣ ಸಚಿವ ತೆಂಜೆನ್ ಇಮ್ನಾ ಅಲಾಂಗ್ (Temjen Imna Along) ಇತ್ತೀಚೆಗೆ ನವದೆಹಲಿಯಿಂದ ಕೊಲ್ಕತ್ತೆಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಇಂಡಿಗೋ ಏರ್ಲೈನ್ಸ್ನ ಗಗನಸಖಿಯಿಂದ ಒಂದು ಚೀಟಿಯನ್ನು ಸ್ವೀಕರಿಸಿದರು. ಆ ಚೀಟಿಯನ್ನು ಅವರು X ನಲ್ಲಿ ಉಲ್ಲಾಸಮಯವಾದ ಶೀರ್ಷಿಕೆಯೊಂದಿಗೆ ಪೋಸ್ಟ್ ಮಾಡಿದ್ದಾರೆ. ಗಗನಸಖಿ ಬರೆದ ಚೀಟಿ ಹೀಗಿದೆ; ‘ಡಿಯರ್ ಸರ್, ನೀವು 6E (513) DEL-CCU 6E ವಿಮಾನದಲ್ಲಿ ಪ್ರಯಾಣಿಸುತ್ತಿರುವುದು ಸಂತೋಷ ತಂದಿದೆ. ಎಂದಿನಂತೆ ತುಂಬಾ ಮುದ್ದಾಗಿ ಕಾಣುತ್ತಿದ್ದೀರಿ. ನಾನು ನಿಮಗೆ ನನ್ನ ಫೋನ್ ನಂಬರ್ ನೀಡಬಹುದಾಗಿತ್ತು ಆದರೆ ನನ್ನ ಮತ್ತು ನಿಮ್ಮ ಸರ್ನೇಮ್ ಒಂದೇ. ಹಾಗಾಗಿ ನಾವು ಮೂಲತಃ ‘ಸಹೋದರರು ಮತ್ತು ಸಹೋದರಿಯರು.’ ಇಂಡಿಗೋದಲ್ಲಿ ಪ್ರಯಾಣಿಸಿದ್ದಕ್ಕಾಗಿ ಧನ್ಯವಾದಗಳು.’
ಇದನ್ನೂ ಓದಿ : Viral: ಹ್ಯಾಲ್ಯೋವೀನ್; ಹ್ಯಾರಿಪಾಟರ್ ಪಾತ್ರಧಾರಿಗಳ ವೇಷದಲ್ಲಿ ಝ್ಯುಕರ್ಬರ್ಗ್ ಕುಟುಂಬ
ಅಕ್ಟೋಬರ್ 31 ರಂದು X ನಲ್ಲಿ ಈ ಪೋಸ್ಟ್ ಮಾಡಲಾಗಿದೆ. ‘ಆಸಾನ್ ಭಾಷಾ ಮೇ ಮೇರೇ ಕೋ ಫೋನ್ ನಂಬರ್ ನಹೀಂ ದಿಯಾ’ ಎಂಬ ಉಲ್ಲಾಸಮಯ ಒಕ್ಕಣೆಯನ್ನು ತೆಂಜಾನ್ ಈ ಪೋಸ್ಟಿಗೆ ಬರೆದಿದ್ದಾರೆ. ಈತನಕ 6.2 ಲಕ್ಷಕ್ಕೂ ಹೆಚ್ಚು ಜನರು ಇದನ್ನು ನೋಡಿದ್ದಾರೆ. ಅನೇಕರು ಈ ಪೋಸ್ಟಿನಡಿ ಪ್ರತಿಕ್ರಿಯಿಸಿ, ನಿಜವಾಗಲೂ ನಿಮ್ಮದು ತುಂಬಾ ಮುದ್ದಾದ ವ್ಯಕ್ತಿತ್ವ ಸರ್ ಎಂದು ಪ್ರತಿಕ್ರಿಯಿಸಿದ್ದಾರೆ.
ಓಹೋ ಹೀಗಾಯಿತೇ! ಹಾಗಿದ್ದರೆ ಮುಂದಿನ ಬಾರಿ ಶುಭವಾಗಲಿ ಎಂದಿದ್ದಾರೆ ಒಬ್ಬರು. ಕನಿಷ್ಠ ರಕ್ಷಾ ಬಂಧನಕ್ಕಾದರೂ ಆಕೆ ನಿಮಗೆ ನಂಬರ್ ನೀಡಬಹುದಿತ್ತು ಎಂದಿದ್ದಾರೆ ಇನ್ನೊಬ್ಬರು. ನೀವಿಬ್ಬರೂ ಒಂದೇ ಬುಡಕಟ್ಟಿಗೆ ಸೇರದೇ ಇದ್ದಿದ್ದರೆ ಇಷ್ಟೊತ್ತಿಗೆ… ಎಂದಿದ್ದಾರೆ ಮತ್ತೊಬ್ಬರು. ಮತ್ತೊಮ್ಮೆ ಆ ಗಗನಸಖಿಯ ಸಿಕ್ಕರೆ ನಂಬರ್ ಪಡೆದು ನನಗೆ ಕೊಡಿ ಸರ್ ಎಂದಿದ್ದಾರೆ ಮಗದೊಬ್ಬರು.
ಇದನ್ನೂ ಓದಿ : Viral Brain Teaser: ‘ತೆರೆಸಾ ಬ್ರೇನ್ ಟೀಸರ್’ಗೆ ಉತ್ತರ ಕಂಡುಕೊಳ್ಳಲು ಯಾರಿಗೂ ಆಗುತ್ತಿಲ್ಲ, ನಿಮಗೆ?
ಯಾರೂ ಈತನಕ ನನಗೆ ಹೀಗೆ ಹೇಳಿಯೇ ಇಲ್ಲವಲ್ಲ ಎಂದಿದ್ದಾರೆ ಒಬ್ಬರು. ಅದಕ್ಕೆ ಸಚಿವರು, ಇಬ್ಬರೂ ಸೇರಿ ಒಂದು ಕ್ಲಬ್ ಓಪನ್ ಮಾಡೋಣ ನಡೀರಿ ಎಂದಿದ್ದಾರೆ. ಇದೇನು ಹೊಸದಲ್ಲ, ಅವಿವಾಹಿತರಿಗೆ ಇದು ಸಾಮಾನ್ಯ ಎಂದಿದ್ದಾರೆ ಇನ್ನೊಬ್ಬರು. ನನ್ನೊಂದಿಗೆ ಇದು ಯಾವಾಗಲೂ ಆಗುತ್ತಲೇ ಇರುತ್ತದೆ ಎಂದಿದ್ದಾರೆ ಸಚಿವರು. ಅಲ್ಲಿ ಪ್ರತಿಕ್ರಿಯಿಸಿರುವ ಅನೇಕರಿಗೆ ಸಚಿವರು ಪ್ರತಿಯಾಗಿ ಪ್ರತಿಕ್ರಿಯಿಸುತ್ತಾ ಹೋಗಿದ್ದಾರೆ.
ಇದನ್ನು ಓದಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ನ್ಯೂಸ್ಗಾಗಿ ಕ್ಲಿಕ್ ಮಾಡಿ
Published On - 2:36 pm, Wed, 1 November 23