ಸಾಮಾನ್ಯವಾಗಿ ನಾವು ಸೇವಿಸುವ ಆಹಾರ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಭಿನ್ನವಾಗಿರುತ್ತದೆ. ಇನ್ನೂ ಈ ಚಿತ್ರವಿಚಿತ್ರ ಆಡುಗೆ, ಆಹಾರ ಎಂದ ಕೂಡಲೇ ನೆನಪಾಗುವುದೇ ಚೀನಾ. ಅವರು ಜಿರಳೆಯಿಂದ ಹಿಡಿದು ಹಾವು ಚೇಳುಗಳವರೆಗೂ ಎಲ್ಲವನ್ನು ತಿನ್ನುತ್ತಾರೆ. ಇವರುಗಳಿಗಿಂತ ನಾನೇನು ಕಮ್ಮಿ ಇಲ್ಲ ಎಂಬಂತೆ ಇಲ್ಲೊಬ್ಬ ಇಂಡೋನೇಷ್ಯಾದ ವ್ಯಕ್ತಿ ಕಬ್ಬಿಣದ ಮೊಳೆಗಳನ್ನೇ ತಿಂದಿದ್ದಾನೆ. ಅರೇ ಏನಿದು, ಕಬ್ಬಿಣದ ಮೊಳೆಯನ್ನು ತಿನ್ನೋದಾ? ನಮ್ಗೆಲ್ಲ ಗಟ್ಟಿ ಕಡ್ಲೆ ಬೀಜವನ್ನೇ ತಿನ್ನಲು ಆಗೊಲ್ಲ, ಇವನ್ಯಾರಪ್ಪಾ ಕಬ್ಬಿಣದ ಮೊಳೆಗಳನ್ನು ಕಡ್ಲೆಬೀಜದಂತೆ ತಿಂದಿದ್ದಾನೆ, ಅಷ್ಟಕ್ಕೂ ಇದನ್ನು ತಿನ್ನಲು ಸಾಧ್ಯನಾ ಅಂತ ಯೋಚ್ನೆ ಮಾಡ್ತಿದ್ದೀರಾ? ಹಾಗಿದ್ರೆ ಈ ವೈರಲ್ ವಿಡಿಯೋವನ್ನೊಮ್ಮೆ ನೋಡಿ…
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಡ್ಲೆಕಾಯಿ ಜಗಿದು ತಿಂದಂತೆ, ಒಂದು ಹಿಡಿಯಷ್ಟು ಕಬ್ಬಿಣದ ಮೊಳೆಯನ್ನು ಬಾಯಿಗೆ ಹಾಕಿ ಜಗಿಯುತ್ತಿರುವಂತ ದೃಶ್ಯಾವಳಿಯನ್ನು ಕಾಣಬಹುದು. ಈ ವೈರಲ್ ವಿಡಿಯೋವನ್ನು ಅಹಮದ್ ಸಲರಿ (@ahamadsalari.2) ಎಂಬವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ವೈರಲ್ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕಬ್ಬಿಣದ ಮೊಳೆಗಳನ್ನು ಜಗಿದು ತಿನ್ನುತ್ತಿರುವ ದೃಶ್ಯವನ್ನು ಕಾಣಬಹುದು. ನಾವೆಲ್ರೂ ಹಸಿವಾದಾಗ ಗಬ ಗಬನೇ ಊಟ ಮಾಡುವಂತೆ ಈ ಆಸಾಮಿ ಒಂದೊಂದು ಮುಷ್ಟಿಯಷ್ಟು ಕಬ್ಬಿಣದ ಮೊಳೆಯನ್ನು ಬಾಯಿಗೆ ಹಾಕಿ ಜಗಿದಿದ್ದಾನೆ. ಅಷ್ಟೇ ಅಲ್ಲದೆ ಆತನ ಸ್ನೇಹಿತ ಕೂಡಾ ಇತನಿಗೆ ಕಬ್ಬಿಣದ ಮೊಳೆಯನ್ನು ತಿನ್ನಿಸಿದ್ದಾನೆ. ಈ ವಿಡಿಯೋ ಇದೀಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಕಬ್ಬಿಣವನ್ನು ಕೂಡಾ ಹಿಂಗೆ ಸಲೀಸಾಗಿ ತಿನ್ಬೋದಾ ಅಂತ ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಗೂಢಚಾರಿಕೆ ಆರೋಪದಡಿ ಪೊಲೀಸ್ ವಶದಲ್ಲಿದ್ದ ಪಾರಿವಾಳಕ್ಕೆ ಕಡೆಗೂ ಬಿಡುಗಡೆ
ಕೆಲ ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 6.7 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 80 ಸಾವಿರಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಾಗೂ ಹಲವಾರು ಕಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನನ್ಗೆ ಒಂದು ಪ್ರಶ್ನೆ ಕಾಡ್ತಿದೆ! ಆತ ಇನ್ನೂ ಬದುಕಿದ್ದಾನೆಯೇ ಅಥವಾ ಸತ್ತಿದ್ದಾನೆಯೇ?ʼ ಅಂತ ತಮಾಷೆಯ ಕಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಇವನೇ ನಿಜವಾದ ಐರನ್ ಮ್ಯಾನ್ʼ ಎಂದು ತಮಾಷೆ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಈತ ನಿಜವಾಗಿಯೂ ಮನುಷ್ಯನೇ?ʼ ಅಂತ ಪ್ರಶ್ನೆ ಮಾಡಿದ್ದಾನೆ. ಹಾಗೂ ಹಲವರು ಈತ ಸಲೀಸಾಗಿ ಕಬ್ಬಿಣದ ಮೊಳೆಯನ್ನು ಜಗಿದು ತಿನ್ನುವುದನ್ನು ಕಂಡು ಶಾಕ್ ಆಗಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ