Viral Video: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್?!

|

Updated on: Oct 27, 2023 | 12:12 PM

Kulfi: ನೋಡಲು ಡೊನಾಲ್ಡ್​ ಟ್ರಂಪ್​ರಂತೆ ಕಾಣುವ ಈ ವ್ಯಕ್ತಿ ಇಲ್ಲಿ ನೆಪ ಮಾತ್ರ. ನೆಟ್ಟಿಗರು ಈ ವಿಡಿಯೋದಲ್ಲಿ ಟ್ರಂಪ್​ ​ಹೆಸರಿನಲ್ಲಿ ಸಾಕಷ್ಟು ಟ್ರೋಲ್​ ಮಾಡಿದ್ದಾರೆ. ಆದರೆ ಕೆಲವರು, ಈ ಬಡಪಾಯಿಯನ್ನು ಯಾಕೆ ಅವಮಾನಿಸುತ್ತಿದ್ದೀರಿ, ಇವರ ಕಂಠದೆಡೆ ನಿಮ್ಮ ಗಮನ ಹೋಗುತ್ತಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಒಟ್ಟಾರೆಯಾಗಿ ಈ ವಿಡಿಯೋ ಮತ್ತೆ ಮತ್ತೆ ನೋಡುವಂತಿದೆ.

Viral Video: ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಡೊನಾಲ್ಡ್ ಟ್ರಂಪ್?!
Follow us on

Donald Trump: ಪಾಕಿಸ್ತಾನದಲ್ಲಿ ವಿದ್ಯುಚ್ಛಕ್ತಿ ಬಿಲ್ ಪಾವತಿಸಿದ ನಂತರ ಟ್ರಂಪ್ ತಮ್ಮ ನಿಜವಾದ ಜೀವನವನ್ನು ಸಾಗಿಸುತ್ತಿದ್ದಾರೆ. ಎಲ್ಲಾ ತೊಂದರೆಗಳನ್ನು ಎದುರಿಸಿದ ನಂತರವೂ ಟ್ರಂಪ್​ನಲ್ಲಿ ಬಂಡವಾಳಶಾಹಿ ಮನೋಭಾವ ಉಳಿದಿದೆ. ಪಾಕಿಸ್ತಾನದಲ್ಲಿ ಪತ್ತೇದಾರಿ ಡೊನಾಲ್ಡ್​ ಟ್ರಂಪ್​. ನೀವು ಎಂದಿಗೂ ಉತ್ತರ ಕರಾಚಿಯಲ್ಲಿ ಹೆಜ್ಜೆ ಹಾಕಬೇಡಿ. 2024 ರ ನಂತರ ಡೊನಾಲ್ಡ್ ಟ್ರಂಪ್​ನ ಅವತಾರ ಹೀಗಿರುತ್ತದೆ. ಇದನ್ನು ನನ್ನ ರಿಂಗ್ ಟೋನ್ ಆಗಿ ಹೇಗೆ ಅಳವಡಿಸಿಕೊಳ್ಳುವುದು? ಅವನು ಬಿಳಿಯನೋ ಅಥವಾ ಅಲ್ಬಿನೋ ರೋಗಕ್ಕೆ ಒಳಗಾಗಿದ್ಧಾನೋ? ನೆಟ್ಟಿಗರು ಈ ವಿಡಿಯೋಗೆ ಹೀಗೆಲ್ಲ ಪ್ರತಿಕ್ರಿಯೆ ನೀಡಿದ್ದಾರೆ. ಇದಕ್ಕೆ ಪ್ರತಿಯಾಗಿ ಒಬ್ಬರು, ನಿಮಗೆ ಯಾರಿಗೂ ಈ ಕುಲ್ಫಿ ಮಾರುವವನ ಅದ್ಭುತವಾದ ಕಂಠದೆಡೆ ಗಮನವೇ ಹೋಗಿಲ್ಲವಲ್ಲ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : Viral Video: ಜೋಲೋಚಿಪ್ ಚಾಲೇಂಜ್​; ಈ ವಿಡಿಯೋದಲ್ಲಿ ಮುಂದೇನಾಗುತ್ತದೆ ನೋಡಿ

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

Fakenewsnetwork ಎಂಬ ಇನ್​ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದೆ. ಪಾಕಿಸ್ತಾನದಲ್ಲಿ  ಕುಲ್ಫಿ ಮಾರುವ ವ್ಯಕ್ತಿ ಡೊನಾಲ್ಡ್​ ಟ್ರಂಪ್​ನಂತೆ ಕಾಣುತ್ತಿರುವ ಕಾರಣಕ್ಕೆ ಈ ವಿಡಿಯೋ ವೈರಲ್ ಆಗಿದೆ. ಈತನಕ 1 ಮಿಲಿಯನ್​ಗಿಂತಲೂ ಹೆಚ್ಚು ಜನರು ಈ ವಿಡಿಯೋ ಲೈಕ್ ಮಾಡಿದ್ದಾರೆ. ಲಕ್ಷಾಂತರ ಜನರು ಮನಬಂದಂತೆ ಪ್ರತಿಕ್ರಿಯಿಸಿದ್ದಾರೆ. ಟ್ರಂಪ್​ನನ್ನು ಸಾಕಷ್ಟು ಆಡಿಕೊಂಡಿದ್ದಾರೆ.

ಪಾಕಿಸ್ತಾನದಲ್ಲಿ ಕುಲ್ಫಿ ಮಾರುತ್ತಿರುವ ಟ್ರಂಪ್​!?

ನಿಜಕ್ಕೂ ಈ ವಿಡಿಯೋ ಬಹಳ ಮಜವಾಗಿದೆ ಎಂದು ನಕ್ಕಿದ್ದಾರೆ ಅನೇಕರು. ಆದರೆ ಟ್ರಂಪ್ ಹೆಸರಿನಲ್ಲಿ ದುಡಿದು ತಿನ್ನುವ ಈ ವ್ಯಕ್ತಿಗೆ ಯಾಕೆ ಅವಮಾನಿಸುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ ಕೆಲವರು. ಡೊನಾಲ್ಡ್ ಸಿಂಗ್ ಟ್ರಂಪ್​ ಎಂದಿದ್ದಾರೆ ಒಬ್ಬರು. ಟ್ರಂಪ್​ಗಿಂತ ಈ ವ್ಯಕ್ತಿ ಉತ್ತಮನಂತೆ ಕಾಣುತ್ತಿದ್ದಾನೆ ಎಂದಿದ್ದಾರೆ ಇನ್ನೊಬ್ಬರು. ಇವನೊಬ್ಬ ಸಾಮಾನ್ಯ ಕುಲ್ಫಿ ಮಾರಾಟಗಾರ, ಹೀಗೆ ಅವಮಾನಿಸುವುದು ತಪ್ಪು ಎಂದಿದ್ದಾರೆ ಮತ್ತೊಬ್ಬರು.

ಇದನ್ನೂ ಓದಿ : Viral Video: ವಿಚ್ಛೇದಿತ ಮಗಳನ್ನು ಬ್ಯಾಂಡ್​ ಬಾಜಾದೊಂದಿಗೆ ಸ್ವಾಗತಿಸಿದ ಪೋಷಕರು; ಭಾರತೀಯ ಪೋಷಕರು ಹೀಗೆ ಧೈರ್ಯವಂತರಾಗಲಿ ಎಂದ ನೆಟ್ಟಿಗರು

ನನಗನಿಸಿದಂತೆ ಈ ವ್ಯಕ್ತಿ ಸಂಗೀತ ಕಲಿತಿದ್ದಾನೆ, ಅನಿವಾರ್ಯಕ್ಕಾಗಿ ಈ ಕೆಲಸ ಮಾಡುತ್ತಿದ್ದಾನೆ ಎಂದಿದ್ದಾರೆ ಮಗದೊಬ್ಬರು. ಬಹುಪಾಲು ಜನರು ಟ್ರಂಪ್​ನ ಹೆಸರಿನಲ್ಲಿ ಈ ವ್ಯಕ್ತಿಗೆ ಹೀಗೆ ಅವಮಾನಿಸಬಾರದಿತ್ತು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 12:11 pm, Fri, 27 October 23