ಸೋಶಿಯಲ್ ಮೀಡಿಯಾ ಇಂದು ಪವರ್ಫುಲ್ ಮಾಧ್ಯಮವಾಗಿ ಮಾರ್ಪಟ್ಟಿದೆ. ಯಾವುದೇ ವ್ಯಕ್ತಿ ರಾತ್ರಿ ಬೆಳಗಾಗುವುದರೊಳಗೆ ಖ್ಯಾತಿ ಪಡೆದುಕೊಳ್ಳಬಹುದು. ಅದೇ ರೀತಿ, ಹಲವು ವರ್ಷಗಳಿಂದ ಗಳಿಸಿದ ಖ್ಯಾತಿ ರಾತ್ರಿ ಕಳೆಯುವರೊಳಗೆ ಮಣ್ಣು ಪಾಲಾಗಬಹುದು. ಅಷ್ಟು ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣ ಬೆಳೆದುಕೊಂಡಿದೆ. ಇದಕ್ಕೆ ತಾಜಾ ಉದಾಹರಣೆ ಚತ್ತೀಸ್ಗಢದ ಹುಡುಗ ಸುಹ್ದೇವ್ ಡಿರ್ಡೋ. ಈತ ‘ಬಚ್ಪನ್ ಕಾ ಪ್ಯಾರ್..’ ಹಾಡಿನ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಸೆನ್ಸೇಶನ್ ಸೃಷ್ಟಿ ಮಾಡಿದ್ದ. ಸಹದೇವ್ಗೆ ಎಂಜಿ ಹೆಕ್ಟರ್ ಕಂಪನಿಯವರು ಕಾರು ನೀಡಿದ್ದಾರೆ ಎನ್ನಲಾದ ಫೋಟೋ ಒಂದು ಇತ್ತೀಚೆಗೆ ವೈರಲ್ ಆಗಿತ್ತು. ಆದರೆ, ಇದರ ಅಸಲಿಯತ್ತು ಬೇರೆಯೇ ಇದೆ.
ಸಹದೇವ್ ‘ಬಚ್ಪನ್ ಕಾ ಪ್ಯಾರ್..’ ಹಾಡನ್ನು ಹಾಡಿದ್ದ. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಸೆನ್ಸೇಶನ್ ಸೃಷ್ಟಿಮಾಡಿತ್ತು. ಅನೇಕರು ಬಾಲಕನ ಕಂಠವನ್ನು ಮೆಚ್ಚಿಕೊಂಡಿದ್ದರು. ರ್ಯಾಪರ್ ಬಾದ್ಶಾ ಕೂಡ ಸಹದೇವ್ ಹಾಡಿಗೆ ತಲೆದೂಗಿದ್ದರು. ಸಹದೇವ್ನನ್ನು ಒಳಗೊಂಡ ‘ಬಚ್ಪನ್ ಕ ಪ್ಯಾರ್’ ಹೊಸ ಹಾಡನ್ನು ಕೂಡ ರಿಲೀಸ್ ಮಾಡಿದ್ದರು ಬಾದ್ಶಾ.
ಇದಾದ ಬೆನ್ನಲ್ಲೇ ಸಹದೇವ್ ಎಂಜಿ ಹೆಕ್ಟರ್ ಕಾರಿನ ಎದುರು ನಿಂತಿರುವ ಫೋಟೋ ವೈರಲ್ ಆಗಿತ್ತು. ಅನೇಕರು ಸಹದೇವ್ಗೆ 23 ಲಕ್ಷದ ಕಾರ್ ಗಿಫ್ಟ್ ಆಗಿ ಸಿಕ್ಕಿದೆ ಎಂದು ಭಾವಿಸಿದ್ದರು. ಆದರೆ, ಅಸಲಿಯತ್ತು ಬೇರೆಯೇ ಇದೆ. ಸಹದೇವ್ ಎಂಜಿ ಹೆಕ್ಟರ್ ಶೋರೂಮ್ಗೆ ಬಂದಿದ್ದು ನಿಜ. ಆದರೆ, ಆತನಿಗೆ ಕಾರು ಗಿಫ್ಟ್ ಆಗಿ ಸಿಕ್ಕಿಲ್ಲ. ಬದಲಿಗೆ ಆತನಿಗೆ ಶೋರೂಮ್ನಲ್ಲಿ 21 ಸಾವಿರ ರೂಪಾಯಿಯ ಚೆಕ್ ವಿತರಣೆ ಮಾಡಲಾಗಿದೆ. ಈ ವಿಚಾರವನ್ನು ಎಂಜಿ ಹೆಕ್ಟರ್ ಬ್ರ್ಯಾಂಚ್ ಕಡೆಯಿಂದಲೇ ಸ್ಪಷ್ಟನೆ ಸಿಕ್ಕಿದೆ.
ಸಹದೇವ್ ಚತ್ತೀಸ್ಗಢದ ಸುಕ್ಮಾ ಜಿಲ್ಲೆಯವನು. ರಾತ್ರಿ ಬೆಳಗಾಗುವುದರೊಳಗೆ ಈತ ಸೋಶಿಯಲ್ ಮೀಡಿಯಾ ಸ್ಟಾರ್ ಆಗಿದ್ದ. ರಾನು ಮಂಡಲ್ ಕೂಡ ಇದೇ ರೀತಿಯಲ್ಲಿ ಖ್ಯಾತಿ ಪಡೆದುಕೊಂಡಿದ್ದರು.
ಇದನ್ನೂ ಓದಿ: ನೆಟ್ಫ್ಲಿಕ್ಸ್ನಲ್ಲಿ ಮಣಿರತ್ನಂ ಧಮಾಕಾ; ‘ನವರಸ’ ವೆಬ್ ಸಿರೀಸ್ ಟ್ರೇಲರ್ನಲ್ಲಿ ಘಟಾನುಘಟಿಗಳ ಸಂಗಮ