
ಇಸ್ರೇಲ್ ಮತ್ತು ಹಮಾಸ್ ನಡುವಿನ ವಿಧ್ವಂಸಕ ಯುದ್ಧವು 12 ನೇ ದಿನವೂ ಮುಂದುವರಿದಿದೆ. ಇದೇ ವೇಳೆ ಗಾಯಾಳುಗಳ ಚಿಕಿತ್ಸೆಯಲ್ಲಿ ಹಗಲಿರುಳು ಶ್ರದ್ಧೆಯಿಂದ ದುಡಿಯುತ್ತಿದ್ದ ಪ್ಯಾಲೆಸ್ತೀನ್ ವೈದ್ಯರೊಬ್ಬರ ಸ್ಟ್ರೆಚರ್ ನಲ್ಲಿದ್ದ ಸ್ವಂತ ಮಗನ ಮೃತದೇಹವನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಈ ವೈದ್ಯರ ಮಗ ಸಾವನ್ನಪ್ಪಿದ್ದಾನೆ. ಮಗನ ಶವ ನೋಡುತ್ತಿದ್ದಂತೆ ಶಾಕ್ಗೆ ಒಳಗಾದ ವೈದ್ಯನ ವಿಡಿಯೋ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಇಸ್ರೇಲ್ ಪ್ರಸ್ತುತ ದಾಳಿಗೊಳಗಾಗುತ್ತಿರುವ ಗಾಜಾ ಪಟ್ಟಿಯಲ್ಲಿ ವೈದ್ಯರ ಕುಟುಂಬ ವಾಸಿಸುತ್ತಿದ್ದು, ಕೆಳ ದಿನಗಳಿಂದ ನಿರಂತರವಾಗಿ ವೈಮಾನಿಕ ದಾಳಿಯಿಂದ ವೈದ್ಯರ ಕುಟುಂಬ ಕಂಗಾಲಾಗಿತ್ತು. ಇದೀಗಾ ಕುಟುಂಬದಲ್ಲಿ ಮಗುವೊಂದು ಸಾವನ್ನಪ್ಪಿದ್ದು, ಕುಟುಂಬದ ಹಲವು ಮಂದಿ ಗಾಯಗೊಂಡಿದ್ದಾರೆ. ವೈರಲ್ ಆಗಿರುವ ಕ್ಲಿಪ್ನಲ್ಲಿ, ಗಾಯಾಳುಗಳನ್ನು ಉಪಚರಿಸುವಾಗ, ಸ್ಟ್ರೆಚರ್ನಲ್ಲಿ ಸ್ವಂತ ಮಗನ ಶವ ಕಾಣಿಸಿಕೊಂಡಾಗ, ಶಾಕ್ಗೆ ಒಳಗಾಗಿರುವುದನ್ನು ಕಾಣಬಹುದು.
ಇದನ್ನೂ ಓದಿ: ವೈದ್ಯರ ಎಡವಟ್ಟಿನಿಂದ ಎರಡು ವರ್ಷ ಕ್ಯಾನ್ಸರ್ಗೆ ಚಿಕಿತ್ಸೆ ಪಡೆದ ಮಹಿಳೆ
ಯುದ್ಧದ ಭೀಕರತೆಯನ್ನು ವಿವರಿಸುವ ಸುದ್ದಿ ಸಂಸ್ಥೆಗಳು, ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಇಂತಹ ಅನೇಕ ನೋವಿನ ಕಥೆಗಳು ಹರಿದಾಡುತ್ತಿವೆ.ಎರಡು ದೇಶಗಳ ನಡುವಿನ ಯುದ್ಧದಲ್ಲಿ ಅಂತಿಮವಾಗಿ ನರಳುವುದು ಶ್ರೀಸಾಮಾನ್ಯರೇ. ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದ್ದಂತೆ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮೂಲಕ ನೋವನ್ನು ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: