ಗಣರಾಜ್ಯೋತ್ಸವ: ಪಿಯಾನೋದಲ್ಲಿ ಜನಗಣಮನ ನುಡಿಸಿ ಗೌರವ ಸಲ್ಲಿಸಿದ ಇಸ್ರೇಲಿ ಕಾನ್ಸುಲ್ ಜನರಲ್

| Updated By: ಶ್ರೀದೇವಿ ಕಳಸದ

Updated on: Jan 27, 2023 | 12:35 PM

Republic Day : ಸರ್, ‘ಗಾಯೇ ತವ ಜಯ ಗಾಥಾ’ ಈ ಸಾಲನ್ನು ನೀವು ಮರೆತಿದ್ದೀರಿ ಎಂದು ಒಬ್ಬರು ಹೇಳಿದ್ದಕ್ಕೆ, ‘ಕ್ಷಮಿಸಿ ಮುಂದಿನ ಸಲ ಸರಿಯಾಗಿ ನುಡಿಸುವೆ. ಆದರೆ ನಿಮ್ಮ ರಾಷ್ಟ್ರಗೀತೆ ಬಹಳ ಚೆಂದವಿದೆ’ ಎಂದು ಕೊಬ್ಬಿ ಉತ್ತರಿಸಿದ್ದಾರೆ.

ಗಣರಾಜ್ಯೋತ್ಸವ: ಪಿಯಾನೋದಲ್ಲಿ ಜನಗಣಮನ ನುಡಿಸಿ ಗೌರವ ಸಲ್ಲಿಸಿದ ಇಸ್ರೇಲಿ ಕಾನ್ಸುಲ್ ಜನರಲ್
ಇಸ್ರೇಲಿ ಕಾನ್ಸುಲ್ ಜನರಲ್ ಕೊಬ್ಬಿ ಶೊಶಾನಿ ಜನಗಣ ಮನ ನುಡಿಸುತ್ತಿರುವುದು
Follow us on

Viral Video : ಪ್ರೀತಿಸುವುದು ಎಂದರೆ ನಮ್ಮ ನೆಲ ನಮ್ಮ ಸಂಸ್ಕೃತಿಯನ್ನಷ್ಟೇ ಅಲ್ಲ. ಅನ್ಯ ನೆಲವನ್ನೂ ಸಂಸ್ಕೃತಿಗಳನ್ನೂ ಗೌರವಿಸುವುದು. ಅಂದಾಗ ಮಾತ್ರ ಮಾನವೀಯತೆ ನಮ್ಮಲ್ಲಿ ಜಾಗೃತವಾಗಿದೆ ಎಂದರ್ಥ. ನಿನ್ನೆಯಷ್ಟೇ ಇಡೀ ದೇಶ ಗಣರಾಜ್ಯೋತ್ಸವದ ಸಂಭ್ರಮದಲ್ಲಿ ಪಾಲ್ಗೊಂಡಿದೆ. ಜಗತ್ತಿನಾದ್ಯಂತ ಅನೇಕರು ಆನ್​ಲೈನ್ ಮೂಲಕ ಕೂಡ ಈ ಸಂಭ್ರಮಕ್ಕೆ ಕಾರಣೀಭೂತರಾಗಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಇಸ್ರೆಲ್​ನ ಕಾನ್ಸುಲ್ ಜನರಲ್​ ಕೊಬ್ಬಿ ಶೋಶಾನಿ 74ನೇ ಗಣರಾಜ್ಯೋತ್ಸವದ ದಿನದಂದು ಪಿಯಾನೋದಲ್ಲಿ ನಮ್ಮ ರಾಷ್ಟ್ರಗೀತೆ ಜನಗಣಮನ ನುಡಿಸಿ ಗೌರವ ಸಲ್ಲಿಸಿದರು.

‘ಭಾರತದ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಸುಂದರವಾದ ರಾಷ್ಟ್ರಗೀತೆ ಜನಗಣಮನ ನುಡಿಸಲು ಪ್ರಯತ್ನಿಸಿದ್ದೇನೆ’ ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಟ್ವೀಟ್ ಮಾಡಿದ್ದಾರೆ. 12 ಲಕ್ಷಕ್ಕಿಂತಲೂ ಹೆಚ್ಚು ಜನರು ಈ ವಿಡಿಯೋ ನೋಡಿದ್ದಾರೆ. 1,600 ಜನರು ರೀಟ್ವೀಟ್ ಮಾಡಿದ್ದಾರೆ. 11, 300 ಜನರು ಈ ವಿಡಿಯೋ ಇಷ್ಟಪಟ್ಟಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ಧಾರೆ.

ಇದನ್ನೂ ಓದಿ : ಯಾರಿಗೆ ಬೇಕು ರುಚಿರುಚಿ ಗರಿಗರಿಯಾದ ಮಿನಿಯೇಚರ್ ಜಿಲೇಬಿ

ಸರ್, ಗಾಯೇ ತವ ಜಯ ಗಾಥಾ ಈ ಸಾಲನ್ನು ನುಡಿಸುವುದನ್ನು ನೀವು ಮರೆತಿದ್ದೀರಿ ಎಂದು ಒಬ್ಬರು ಹೇಳಿದ್ದಾರೆ. ಕ್ಷಮಿಸಿ ಮುಂದಿನ ಸಲ ಸರಿಯಾಗಿ ನುಡಿಸುವೆ. ಆದರೆ ನಿಮ್ಮ ರಾಷ್ಟ್ರಗೀತೆ ಬಹಳ ಚೆನ್ನಾಗಿದೆ ಎಂದು ಕೊಬ್ಬಿ ಉತ್ತರಿಸಿದ್ದಾರೆ. ತುಂಬಾ ಹೃದಯಸ್ಪರ್ಶಿಯಾಗಿದೆ, ಧನ್ಯವಾದ ಇಸ್ರೇಲ್​ ಎಂದಿದ್ದಾರೆ ಒಬ್ಬರು. ಜೈಹಿಂದ್​ ಎಂದು ಅನೇಕ ಭಾರತೀಯರು ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ : ಆನ್​ಲೈನ್​ ಆರ್ಡರ್​; ಸ್ಯಾನಿಟರಿ ಪ್ಯಾಡ್​ ಜೊತೆ ಚಾಕೊಲೇಟ್​ ಕುಕೀಸ್​ ಪಡೆದ ಮಹಿಳೆ

ಪರಸ್ಪರ ಸಂಬಂಧವನ್ನು ಕಾಪಾಡಿಕೊಳ್ಳಲು ಹೀಗೆ ಸಣ್ಣಪುಟ್ಟ ನಡೆಗಳಿಂದ ಗೌರವಿಸುವುದನ್ನು ಕಲಿಯಬೇಕು. ನೀವು ಸರಿಯಾದ ಹಾದಿಯಲ್ಲಿದ್ದೀರಿ ಸರ್ ಎಂದು ಕೆಲವರು ಹೇಳಿದ್ದಾರೆ. ನಿಜಕ್ಕೂ ನಮ್ಮ ರಾಷ್ಟ್ರಗೀತೆ ಬಹಳ ಚೆನ್ನಾಗಿದೆ, ನಿಮ್ಮ ಈ ಪ್ರಯತ್ನ ಶ್ಲಾಘನೀಯ ಎಂದಿದ್ದಾರೆ ಅನೇಕರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​ಗಾಗಿ ಕ್ಲಿಕ್ ಮಾಡಿ

 

Published On - 12:35 pm, Fri, 27 January 23