ಹಾಲಿ ವಿಶ್ವ ಚಾಂಪಿಯನ್ ಜೋಯಿ ಚೆಸ್ಟ್ನಟ್ ಕಳೆದ ಭಾನುವಾರ ವಿಶ್ವ ದಾಖಲೆಯನ್ನು ಮುರಿದಿದ್ದಾರೆ. ಪ್ರಸಿದ್ಧತೆ ಪಡೆದುಕೊಂಡಿರುವ ಅಂತರಾಷ್ಟ್ರೀಯ ಮಟ್ಟದ ಹಾಟ್ ಡಾಗ್ (Hot Dog) ತಿನ್ನುವ ಸ್ಪರ್ಧೆಯಲ್ಲಿ ಜಯಗಳಿಸಿದ್ದಾರೆ. 10 ನಿಮಿಷಗಳಲ್ಲಿ 76 ಹಾಟ್ ಡಾಗ್ ತಿನ್ನುವ ಮೂಲಕ ವಿಶ್ವ ದಾಖಲೆ ಮುರಿದಿದ್ದಾರೆ. 14 ಬಾರಿ ಈ ಸ್ಪರ್ಧೆಯಲ್ಲಿ ಅವರು ಜಯ ಗಳಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೋನಿ ದ್ವೀಪದಲ್ಲಿ ಈ ಸ್ಪರ್ಧೆಯನ್ನು ಪ್ರತೀ ವರ್ಷ ಏರ್ಪಡಿಸಲಾಗುತ್ತದೆ. ಕಳೆದ 15 ವರ್ಷಗಳಿಂದ ಇವರು ಸ್ಪರ್ಧಿಸುತ್ತಿದ್ದು ಒಟ್ಟು 14 ಬಾರಿ ಪ್ರಶಸ್ತಿಯನ್ನು ಬಾಚಿಕೊಂಡಿದ್ದಾರೆ. ಕಳೆದ ವರ್ಷ ತಿಂದ ಹಾಟ್ ಡಾಗ್ ಮತ್ತು ಎರಡನೇ ಸ್ಥಾನ ಪಡೆದ ಜೆಫ್ರಿ ಎಸ್ಟರ್ ಅವರಿಗಿಂತ ಹೆಚ್ಚಿಗೆ ತಿಂದು ದಾಖಲೆಗೆ ಹೆಸರಾಗಿದ್ದಾರೆ.
ಸ್ಪರ್ಧೆಯು ಜುಲೈ ತಿಂಗಳಂದು ಕಳೆದ ಭಾನುವಾರ ಕೋನಿ ದ್ವೀಪದಲ್ಲಿ ನಡೆಯಿತು. ಸ್ಪರ್ಧೆಯನ್ನು ವೀಕ್ಷಿಸಲು ಅಪಾರ ಪ್ರೇಕ್ಷಕರು ಆಗಮಿಸಿದ್ದರು. ಕೊರೊನಾ ಸಾಂಕ್ರಾಮಿಕ ಇರುವುದರಿಂದ ಕಳೆದ ವರ್ಷ ಸ್ಪರ್ಧೆಯನ್ನು ಸಣ್ಣ ಪ್ರಮಾಣದಲ್ಲಿ ಆಚರಿಸಲಾಗಿತ್ತು. ನಾನು ಈ ಸ್ಪರ್ಧೆಯಲ್ಲಿ ವಿಜೇತನಾಗಲು ಅಸಮರ್ಥನಾಗುತ್ತಿದ್ದೆನೋ ಏನೋ.. ಆದರೆ ನೆರೆದ ಪ್ರೇಕ್ಷಕರು ನನ್ನನ್ನು ಹುರಿದುಂಬಿಸರು. ಅವರೆಲ್ಲರ ಹಾರೈಕೆಯಿಂದ ನಾನು ವಿಜೇತನಾಗಿದ್ದೇನೆ ಎಂದು ಅಭಿಪ್ರಾಯ ಹಂಚಿಕೊಂಡಿದ್ದಾರೆ. ಈ ಕುರಿತಂತೆ ವರದಿಗಳು ತಿಳಿಸಿವೆ.
NEW WORLD RECORD: #JoeyChestnut eats 76 hot dogs in 10 minutes, surpassing his previous record. ??? pic.twitter.com/Plbh8kQntq
— News12CT (@News12CT) July 4, 2021
ಇದನ್ನೂ ಓದಿ: