Viral Video: ದ್ವೇಷ ಹರಡುವುದನ್ನೇ ಧ್ಯೇಯ ಎಂದು ಭಾವಿಸಿರುವ ವಾಟ್ಸ್ಯಾಪ್ ಆಂಟೀ ಅಂಕಲ್​​ಗಳು; ರವೀಶ್ ಕುಮಾರ್ ಹೊತ್ತಿಸಿದ ಕಿಡಿ

|

Updated on: Jul 03, 2023 | 6:38 PM

WhatsApp Colonies : "ವಾಟ್ಸ್ಯಾಪ್ ಯುನಿವರ್ಸಿಟಿಯ ಕೆಳಗೆ ಅಗೆದು ನೋಡಿದಾಗ ನಮಗೆ ವಾಟ್ಸ್ಯಾಪ್​ ಕಾಲನಿ (colony) ಸಿಕ್ಕಿದೆ. ನೀವೂ ಅದರ ನಿವಾಸಿಗಳೆ?'' ಒಮ್ಮೆ ವಿಡಿಯೋ ನೋಡಿದರೆ ಹೂರಣ ತಿಳಿದೀತು.

Viral Video: ದ್ವೇಷ ಹರಡುವುದನ್ನೇ ಧ್ಯೇಯ ಎಂದು ಭಾವಿಸಿರುವ ವಾಟ್ಸ್ಯಾಪ್ ಆಂಟೀ ಅಂಕಲ್​​ಗಳು; ರವೀಶ್ ಕುಮಾರ್ ಹೊತ್ತಿಸಿದ ಕಿಡಿ
ವಾಟ್ಸ್ಯಾಪ್​ ಕಾಲೊನಿಯ ಆಂಟೀ ಅಂಕಲ್​
Follow us on

Ravish Kumar : ಈ ವಿಡಿಯೋ ನೋಡಿದ ಸಾವಿರಾರು ಮಂದಿ ಬಿದ್ದು ಬಿದ್ದು ನಗುತ್ತಿದ್ದಾರೆ. “ಬೇಜಾರಿನ ಭಾನುವಾರ ಒಮ್ಮೆಲೇ ರಂಜನೀಯವಾಯಿತು,” “ಇದು ನೂರಕ್ಕೆ ನೂರು ಸತ್ಯ,” ಎಂದು ಹಲವರು ಹೇಳುತ್ತ ತಮ್ಮ ವಾಟ್ಸ್ಯಾಪ್ ಗುಂಪುಗಳಲ್ಲಿ (WhatsApp Groups) ಹಂಚಿಕೊಂಡಿದ್ದಾರೆ. ಸಹಜವಾಗಿ ಬಹಳಷ್ಟು ಮಂದಿಗೆ ಇದು ರುಚಿಸಿಲ್ಲ, ಅಂಥವರು “ರವೀಶ್ ಕುಮಾರ್ ಬಾಯಿ ತೆರೆದರೆ ಸುಳ್ಳಿನ ಕಂತೆ,” “ಇವನ ವಿರುದ್ಧ ಕೇಸ್ ಹಾಕಿ,” ಎಂದು ವಾಟ್ಸ್ಯಾಪ್ ಮತ್ತು ಮೆಟಾ ಸಂಸ್ಥೆಗಳಿಗೆ ಪುಕಾರನ್ನು ಒಯ್ದಿದ್ದಾರೆ. ಹಾಗಿದ್ದರೆ ಈ ವಿಡಿಯೋದಲ್ಲಿ ಅಂಥದ್ದೇನಿದೆ?

ಪತ್ರಕರ್ತ ರವೀಶ್ ಕುಮಾರ್ ಅವರ ಈ ವಿಡಿಯೋ ಕಾಲ್ಪನಿಕ (ಅಥವಾ ವಾಸ್ತವಿಕ?) ವಸಾಹತಿನಲ್ಲಿ ನಮ್ಮನ್ನು ಸುತ್ತಿಸುಕೊಂಡು ಬರುತ್ತದೆ. ಆಕರ್ಷಕ ಎನಿಮೇಶನ್ (Animation) ಮತ್ತು ಹಿನ್ನೆಲೆಯಲ್ಲಿ ರವೀಶ್‌ರ ಧ್ವನಿಯಲ್ಲಿನ ಚುರುಗುಟ್ಟುವ ವ್ಯಂಗ್ಯದಿಂದಾಗಿ ಈ ವಿಡಿಯೋ ವೈರಲ್ ಆಗಿದೆ. ಇಂದು ಬಹುತೇಕ ವಸತಿ ಸಮುದಾಯಗಳು ಈ ಹೊಸ ವಸಾಹತುವಿನ ಅಧೀನವಾಗಿವೆ. ಇಲ್ಲಿ ಕೇವಲ ಗೋದಿ ಮೀಡಿಯಾ (Godi-media) ದ ಪ್ರಚಾರಗಳು, ಅನ್ಯ ಮತಗಳ ಬಗೆಗಿನ ಸುಳ್ಳುಗಳು ಚಾಲ್ತಿಯಲ್ಲಿರುತ್ತವೆ.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಇದನ್ನೂ ಓದಿ : Viral Video: ಮಟಮಟ ಮಧ್ಯಾಹ್ನ ಮಟನ್​ ಮ್ಯಾಗೀ, ಬೆಲೆ ಕೇವಲ ರೂ. 600!

ಎಲ್ಲೆಡೆ ವಾಟ್ಸ್ಯಾಪ್ ಅಂಕಲ್ ಮತ್ತು ಆಂಟಿಗಳು ಸೇರಿಕೊಂಡು ವಾಟ್ಸ್ಯಾಪ್ ಗುಂಪುಗಳಲ್ಲಿ ತಪ್ಪು ಮಾಹಿತಿಯುಳ್ಳ, ದ್ವೇಷ ಹರಡುವ ಸಂದೇಶಗಳನ್ನು ಹಗಲೂರಾತ್ರಿ ಕಳಿಸುವುದನ್ನೇ ತಮ್ಮ ಉದ್ಯೋಗವನ್ನಾಗಿ ಮಾಡಿಕೊಂಡಿದ್ದಾರೆ. ಹಾಗಾಗಿ ಇಲ್ಲಿ ಬೇರೆ ನಿಲುವುಗಳಿಗೆ, ಅಭಿಮತಕ್ಕೆ ಅವಕಾಶವೇ ಇಲ್ಲ. ಹಾಗೆ ಯಾರಾದರೂ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದರೆ ಅವರನ್ನು ಕೂಡಲೇ ದೇಶದ್ರೋಹಿ ಎಂದು ಈ ಅಂಕಲ್ ಆಂಟಿಗಳು ನಿರ್ಣಯಿಸುತ್ತಾರೆ. ಇದಿಷ್ಟು ಈ ವಿಡಿಯೋದ ತಾತ್ಪರ್ಯ.

ಇದನ್ನೂ ಓದಿ : Viral Video: 11 ವರ್ಷದ ಶ್ಫಾ ಯೂಟ್ಯೂಬ್​ ಮೂಲಕ ಮಿಲಿಯನ್​ಗಟ್ಟಲೆ ಗಳಿಗೆ

“ಒಂದೇ ಒಂದು ಅಕ್ಷರ ಚರಿತ್ರೆ ಓದದವರು ಇಂದು ಚರಿತ್ರೆಯ ಪಂಡಿತರಾಗಿದ್ದಾರೆ,” ಎಂದು ಈ ಕಾಲನಿಯ ಮಂದಿಯನ್ನು ಗೇಲಿ ಮಾಡಿರುವ ರವೀಶ್ ಅವರ ವಾದವನ್ನು ಒಪ್ಪುತ್ತೀರಾ? ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

 

Published On - 6:32 pm, Mon, 3 July 23