ಕನ್ನಡ ಚಿತ್ರರಂಗದ ಅಭಿನಯ ಚರ್ಕವರ್ತಿ ಸುದೀಪ್ ಕನ್ನಡ ನಾಡು, ನುಡಿ, ಭಾಷೆಯ ಬಗ್ಗೆ ಅಪಾರ ಗೌರವವನ್ನು ಹೊಂದಿರುವ ನಟ. ಇವರು ತಮ್ಮ ಕನ್ನಡಾಭಿಮಾನವನ್ನು ಆಗಾಗ್ಗೆ ವ್ಯಕ್ತಪಡಿಸುತ್ತಿರುತ್ತಾರೆ. ಅದರಲ್ಲೂ ಬಾದ್ ಷಾ ಕಿಚ್ಚ ಯಾರೇ ಕನ್ನಡವನ್ನು ಕನ್ನಡ್ ಎಂದರೆ ಸಹಿಸೊಲ್ಲ. ಹೌದು ಹೊರ ರಾಜ್ಯದ ಸೆಲೆಬ್ರಿಟಿಗಳು ಮಾತ್ರವಲ್ಲದೆ, ಸಾಮಾನ್ಯರು ಕೂಡಾ ಕನ್ನಡವನ್ನು ಕನ್ನಡ್ ಅಂತಲೇ ಉಚ್ಛರಿಸುತ್ತಾರೆ. ಈ ರೀತಿ ಕನ್ನಡಕ್ಕೆ ಅವಮಾನವನ್ನು ಮಾಡಿದಾಗ ಕಿಚ್ಚ ಧ್ವನಿ ಎತ್ತುತ್ತಾರೆ. ಕೆಲ ವಾರಗಳ ಹಿಂದೆಯಷ್ಟೇ ಅವಾರ್ಡ್ ಫಂಕ್ಷನ್ ಒಂದರಲ್ಲಿ ಕನ್ನಡ್ ಎಂದು ಹೇಳಿದ ವ್ಯಕ್ತಿಗೆ ಅದು ಕನ್ನಡ್ ಅಲ್ಲ ಕನ್ನಡ ಎಂದು ಕಿಚ್ಚ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ರು. ಆ ವಿಡಿಯೋ ಕ್ಲಿಪ್ ಕೂಡಾ ಭಾರೀ ವೈರಲ್ ಆಗಿತ್ತು. ಇದೀಗ ಕನ್ನಡ ರಾಜ್ಯೋತ್ಸವದ ಶುಭ ದಿನದಂದು ಕಿಚ್ಚನ ಕನ್ನಡಾಭಿಮಾನಕ್ಕೆ ಸಂಬಂಧಿಸಿದ ಈ ವಿಡಿಯೋ ಮತ್ತೊಮ್ಮೆ ವೈರಲ್ ಆಗಿದೆ.
ಕೆಲ ವಾರಗಳ ಹಿಂದೆಯಷ್ಟೇ ದುಬೈನಲ್ಲಿ ನಡೆದ ಅವಾರ್ಡ್ ಕಾರ್ಯಕ್ರಮದಲ್ಲಿ ಕಿಚ್ಚ ಸುದೀಪ್ ತಮ್ಮ ಕನ್ನಡ ಪ್ರೇಮವನ್ನು ತೋರಿಸಿದ್ದರು. ಹೌದು ವೇದಿಕೆಯ ಮೇಲೆ ಚಿತ್ರರಂಗಕ್ಕೆ ಸೇರಿದ ಹೈದರಬಾದ್ ಮೂಲದ ವ್ಯಕ್ತಿಯೊಬ್ಬರು ತಾವು ಮಾತನಾಡುವ ಸಂದರ್ಭದಲ್ಲಿ ಕನ್ನಡವನ್ನು ಕನ್ನಡ್ ಎಂದು ಉಚ್ಛರಿಸುತ್ತಾರೆ. ಆ ತಕ್ಷಣವೇ ಕಿಚ್ಚ ʼಅದು ಕನ್ನಡ್ ಕನ್ನಡ, ಮುಂಬೈ ಜನರು ಕನ್ನಡ್ ಅಂತಾ ಹೇಳ್ತಾರೆ. ನೀವು ಹೈದರಬಾದ್‌ನವರಾಗಿ ಕನ್ನಡ್ ಅಂತ ಹೇಳ್ತಿರಲ್ವಾ ಎಂದು ಕಿಚ್ಚ ಸಖತ್ ಆಗಿ ಕ್ಲಾಸ್ ತೆಗೆದುಕೊಂಡಿದ್ರು. ಈ ವಿಡಿಯೋ ಭಾರೀ ವೈರಲ್ ಆಗಿತ್ತು. ಕನ್ನಡ ರಾಜ್ಯೋತ್ಸವದ ಈ ಶುಭ ದಿನದಂದು toxicant ಹೆಸರಿನ ಇನ್‌ಸ್ಟಾಗ್ರಾಮ್ ಪೇಜ್ ಒಂದರಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ.
ಈ ವೈರಲ್ ವಿಡಿಯೋದಲ್ಲಿ ಅವಾರ್ಡ್ ಫಂಕ್ಷನ್‌ನಲ್ಲಿ ಕಿಚ್ಚ ಸುದೀಪ್ ಕನ್ನಡ್ ಅಲ್ಲ ಅದು ಕನ್ನಡ ಎಂದು ವ್ಯಕ್ತಿಯೊಬ್ಬರಿಗೆ ಕನ್ನಡವನ್ನು ಸರಿಯಾಗಿ ಉಚ್ಚರಿಸಿ ಎಂದು ಹೇಳಿಕೊಂಡುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಸರಳವಾಗಿ ಪರಭಾಷಿಕರಿಗೆ ಕನ್ನಡ ಕಲಿಸುವ ಪ್ರಯತ್ನದಲ್ಲಿ ಯುವತಿಯರು…
ನಿನ್ನೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಕಿಚ್ಚನ ಕನ್ನಡಾಭಿಮಾನಕ್ಕೆ ಕನ್ನಡಿಗರು ಭಾರೀ ಮೆಚ್ಚುಗೆ ಸೂಚಿಸಿದ್ದಾರೆ.
ಕನ್ನಡ ರಾಜ್ಯೋತ್ಸವ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ