Bank Holidays in March 2021: ಮಾರ್ಚ್​ ತಿಂಗಳಲ್ಲಿ ಬ್ಯಾಂಕ್​ಗೆ ಎಷ್ಟೆಲ್ಲಾ ದಿನ ರಜೆ ಇದೆ ಎಂಬ ಮಾಹಿತಿ ಇಲ್ಲಿದೆ

Karnataka Bank Holidays in March 2021: ಮಾರ್ಚ್​ನಲ್ಲಿ ಶಿವರಾತ್ರಿ ಹೊರತುಪಡಿಸಿದರೆ ಬೇರೆ ಯಾವುದೇ ದೊಡ್ಡ ಹಬ್ಬ ಅಥವಾ ಸರ್ಕಾರಿ ದಿನಾಚರಣೆಗಳಿಲ್ಲ. ಸಾಧಾರಣವಾಗಿ ಮಾರ್ಚ್​ ತಿಂಗಳಲ್ಲಿ ಎಲ್ಲಾ ವಹಿವಾಟುದಾರರಿಗೂ ತುಸು ಹೆಚ್ಚೇ ಒತ್ತಡವಿದ್ದು, ಬ್ಯಾಂಕ್​ಗೆ ಯಾವ ಸಂದರ್ಭದಲ್ಲಿ ಹೋಗಬೇಕಾಗಿ ಬರಬಹುದು ಎಂದು ಹೇಳಲಾಗುವುದಿಲ್ಲ.

Bank Holidays in March 2021: ಮಾರ್ಚ್​ ತಿಂಗಳಲ್ಲಿ ಬ್ಯಾಂಕ್​ಗೆ ಎಷ್ಟೆಲ್ಲಾ ದಿನ ರಜೆ ಇದೆ ಎಂಬ ಮಾಹಿತಿ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
| Updated By: Digi Tech Desk

Updated on:Feb 28, 2021 | 4:34 PM

ಜನಸಾಮಾನ್ಯರಿಗೆ ಹಬ್ಬ ಹರಿದಿನಗಳನ್ನು ತಿಳಿಸುವ ಕ್ಯಾಲೆಂಡರ್​ ಎಷ್ಟು ಮುಖ್ಯವೋ, ಬ್ಯಾಂಕ್​ ರಜೆಗಳ ಪಟ್ಟಿಯೂ ಅಷ್ಟೇ ಮುಖ್ಯ. ವ್ಯವಹಾರ ಕಾರಣಗಳಿಗಾಗಿ ತುರ್ತು ಸಂದರ್ಭದಲ್ಲಿ ಬ್ಯಾಂಕ್​ಗೆ ತೆರಳಿದಾಗ ಅಪ್ಪಿತಪ್ಪಿ ಅಂದು ಬ್ಯಾಂಕ್​ಗೆ ರಜೆಯಿದ್ದರೆ ಭಾರೀ ಕಷ್ಟವಾಗಿಬಿಡುತ್ತದೆ. ಹಾಗಾಗಿ, ಹೆಚ್ಚಿನವರು ಹೊಸ ತಿಂಗಳು ಹತ್ತಿರವಾಗುತ್ತಿದ್ದಂತೆಯೇ ಯಾವ್ಯಾವ ದಿನ ಬ್ಯಾಂಕ್​ಗಳಿಗೆ ರಜೆ ಎಂದು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಸದ್ಯ ಫೆಬ್ರವರಿ ಮುಗಿದು ಮಾರ್ಚ್​ ತಿಂಗಳು ಶುರುವಾಗುತ್ತಿದೆ. ಈ ಬಾರಿ ಮಾರ್ಚ್​ನಲ್ಲಿ ಒಟ್ಟು 7 ರಜೆಗಳಿದ್ದು ಅದು ಯಾವ ಯಾವ ದಿನಾಂಕದಂದು ಎಂಬ ಪಟ್ಟಿ ಇಲ್ಲಿದೆ.

ಮಾರ್ಚ್​ನಲ್ಲಿ ಶಿವರಾತ್ರಿ ಹೊರತುಪಡಿಸಿದರೆ ಬೇರೆ ಯಾವುದೇ ದೊಡ್ಡ ಹಬ್ಬ ಅಥವಾ ಸರ್ಕಾರಿ ದಿನಾಚರಣೆಗಳಿಲ್ಲ. ಸಾಧಾರಣವಾಗಿ ಮಾರ್ಚ್​ ತಿಂಗಳಲ್ಲಿ ಎಲ್ಲಾ ವಹಿವಾಟುದಾರರಿಗೂ ತುಸು ಹೆಚ್ಚೇ ಒತ್ತಡವಿದ್ದು, ಬ್ಯಾಂಕ್​ಗೆ ಯಾವ ಸಂದರ್ಭದಲ್ಲಿ ಹೋಗಬೇಕಾಗಿ ಬರಬಹುದು ಎಂದು ಹೇಳಲಾಗುವುದಿಲ್ಲ.

2021ರ ಮಾರ್ಚ್​ ತಿಂಗಳ ರಜಾ ವಿವರ:

  • ಮಾರ್ಚ್​ 7: ಭಾನುವಾರ
  • ಮಾರ್ಚ್​ 11: ಶಿವರಾತ್ರಿ
  • ಮಾರ್ಚ್​ 13: ಎರಡನೇ ಶನಿವಾರ
  • ಮಾರ್ಚ್​ 14: ಭಾನುವಾರ
  • ಮಾರ್ಚ್​ 21: ಭಾನುವಾರ
  • ಮಾರ್ಚ್​ 27: ನಾಲ್ಕನೇ ಶನಿವಾರ
  • ಮಾರ್ಚ್​ 28: ಭಾನುವಾರ

ಹೀಗೆ ಒಟ್ಟು 7 ದಿನಗಳು ರಜೆ ಇದ್ದು, ಮಾರ್ಚ್​ 12ರ ಶುಕ್ರವಾರ ಒಂದು ರಜೆ ಹಾಕಿಕೊಂಡರೆ ಬ್ಯಾಂಕ್​ ಉದ್ಯೋಗಿಗಳಿಗೆ ಸತತ ನಾಲ್ಕು ದಿನಗಳ ರಜೆ ಸಿಗಲಿದೆ. ಈ ಕಾರಣಗಳಿಂದ ಬ್ಯಾಂಕ್​ನಲ್ಲಿ ಮುಖ್ಯ ಕೆಲಸವೇನಾದರೂ ಇದ್ದರೆ ಮೊದಲೇ ಯೋಚಿಸಿ ತುಸು ಮುಂಚಿತವಾಗಿ ಮುಗಿಸಿಕೊಳ್ಳುವುದೇ ಒಳಿತು.

ಇದನ್ನೂ ಓದಿ: ಮತ್ತೊಂದು ಕ್ರಾಂತಿಗೆ ಸಿದ್ಧವಾಯ್ತು ಜಿಯೋ, ಕೇವಲ ₹1,999ಕ್ಕೆ ಎರಡು ವರ್ಷಗಳ ತನಕ ಅನಿಯಮಿತ ಸೌಲಭ್ಯ

ಸೋಷಿಯಲ್ ಮೀಡಿಯಾ, ಒಟಿಟಿ, ಡಿಜಿಟಲ್ ಕಂಟೆಂಟ್ ನಿಯಂತ್ರಣಕ್ಕೆ ಕೇಂದ್ರದಿಂದ ಹೊಸ ನಿಯಮ: ನೀವು ತಿಳಿಯಬೇಕಾದ 10 ಅಂಶಗಳು

Published On - 2:42 pm, Sat, 27 February 21