
ಕೇರಳ, ಡಿಸೆಂಬರ್ 08: ಆನಂದ್ ಮಹೀಂದ್ರಾ ಇತ್ತೀಚೆಗೆ ಕೇರಳದ ಕಡಮಕ್ಕುಡಿ (Kadamakkudi in Kerala) ದ್ವೀಪಕ್ಕೆ ಭೇಟಿ ನೀಡಿದ್ದು, ಈ ಸುಂದರವಾದ ಹಳ್ಳಿಯನ್ನು ಕಂಡು ಕಳೆದೇ ಹೋಗಿದ್ದಾರೆ. ಸ್ವಚ್ಛವಾದ ಪರಿಸರ, ಗ್ರಾಮೀಣ ಜೀವನ ಮತ್ತು ನೈಸರ್ಗಿಕ ಸೌಂದರ್ಯದ ಪರಿಪೂರ್ಣ ಸಮತೋಲನದಿಂದ ಈ ಸ್ಥಳವು ಆಕರ್ಷಣೀಯವಾಗಿದ್ದು ಕೈಗಾರಿಕೋದ್ಯಮಿ ಆನಂದ್ ಮಹಿಂದ್ರಾರವರ (Anand Mahindra) ಗಮನ ಸೆಳೆಯಲು ಇದುವೇ ಮುಖ್ಯ ಕಾರಣವಾಗಿದೆ. ತಾವು ಅಂದುಕೊಂಡಂತೆ ಈ ಹಳ್ಳಿಗೆ ಭೇಟಿ ನೀಡಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿದಿದ್ದಾರೆ. ಈ ಕುರಿತಾಗಿ ತಮ್ಮ ಎಕ್ಸ್ ಖಾತೆಯಲ್ಲಿ ಬರೆದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಆನಂದ್ ಮಹಿಂದ್ರಾ (Anand Mahindra) ತಮ್ಮ ಎಕ್ಸ್ ಖಾತೆಯಲ್ಲಿ ಕೇರಳದ ಕಡಮಕ್ಕುಡಿ ದ್ವೀಪಗಳ ಸುಂದರ ನೋಟಗಳನ್ನೊಳಗೊಂಡ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕಡಮಕ್ಕುಡಿದಲ್ಲಿ ಹಚ್ಚ ಹಸಿರಿನ ಪರಿಸರದ ಜೊತೆಗೆ ವಿಶಾಲವಾದ ಸ್ವಚ್ಛಂದವಾಗಿ ಹರಿಯುತ್ತಿರುವ ಹಿನ್ನೀರಿನ ದೃಶ್ಯವನ್ನು ಕಾಣಬಹುದು.
I lived up to a promise I had made to myself…
After our Group’s M101 annual leadership conference in Kochi last week, on Friday I drove to Kadamakkudy to see if it truly deserves its reputation as one of the most beautiful villages on earth.
Clean and pristine.
Tranquil… https://t.co/oMk0Q9YDHW pic.twitter.com/kD6YBm0hJr
— anand mahindra (@anandmahindra) December 7, 2025
ಈ ಪೋಸ್ಟ್‌ಗೆ ನಾನು ನನಗೆ ನೀಡಿದ್ದ ಭರವಸೆಯನ್ನು ಈಡೇರಿಸಿದ್ದೇನೆ… ಕಳೆದ ವಾರ ಕೊಚ್ಚಿಯಲ್ಲಿ ನಮ್ಮ ಗುಂಪಿನ M101 ವಾರ್ಷಿಕ ನಾಯಕತ್ವ ಸಮ್ಮೇಳನದ ನಂತರ, ಶುಕ್ರವಾರ ನಾನು ಕಡಮಕ್ಕುಡಿ ಭೂಮಿಯ ಮೇಲಿನ ಅತ್ಯಂತ ಸುಂದರವಾದ ಹಳ್ಳಿಗಳಲ್ಲಿ ಒಂದಾಗಿ ಖ್ಯಾತಿಗೆ ಅರ್ಹವಾಗಿದೆಯೇ ಎಂದು ನೋಡಲು ಅಲ್ಲಿಗೆ ಕಾರಿನಲ್ಲಿ ಹೋದೆ. ಸ್ವಚ್ಛ ಮತ್ತು ನಿರ್ಮಲ. ಕಣ್ಣಿಗೆ ಕಾಣುವಷ್ಟು ದೂರ ಚಾಚಿಕೊಂಡಿರುವ ಹಿನ್ನೀರು. ಸಣ್ಣ ದೋಣಿಗಳು ನಿಧಾನವಾಗಿ ಕಾಲುವೆಗಳ ಮೂಲಕ ಸಾಗುತ್ತಿದೆ. ಬೆಳ್ಳಕ್ಕಿಗಳು ಮತ್ತು ಕಪ್ಪು ನೀರುಕಾಗೆಗಳು, ಬಿಸಿಲಿನಲ್ಲಿ ತಮ್ಮನ್ನು ತಾವು ಒಣಗಿಸಿಕೊಂಡು, ಮುದ್ದಾಡುತ್ತಿವೆ, ಮೋಡಿ ಮಾಡುವಂತಿವೆ. ಕೆಲವು ಭೂದೃಶ್ಯಗಳು ಕೇವಲ ಪ್ರಭಾವ ಬೀರುವುದಿಲ್ಲ; ಅವು ನಿಮ್ಮನ್ನು ಮರು ಮಾಪನಾಂಕ ಮಾಡುತ್ತವೆ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ:ನೀತಾ ಅಂಬಾನಿ ಜತೆ ಹುಟ್ಟುಹಬ್ಬ ಆಚರಿಸಿಕೊಂಡ ಸಿಬ್ಬಂದಿ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ 1.1 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿವೆ. ಒಬ್ಬ ಬಳಕೆದಾರ ಕೇರಳ ಸ್ವಚ್ಛತೆಯನ್ನು ಗಂಭೀರವಾಗಿ ಪರಿಗಣಿಸುವುದರಿಂದ ಇದು ಸುಂದರವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಕೊಚ್ಚಿಯ ಹಿನ್ನೀರಿನಲ್ಲಿ ನೆಲೆಸಿರುವ ಹದಿನಾಲ್ಕು ರಮಣೀಯ ದ್ವೀಪಗಳ ಸಮೂಹ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:13 pm, Mon, 8 December 25