ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕ್ಕೆ ತುತ್ತಾಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆರೋಗ್ಯವಂತ ವ್ಯಕ್ತಿಗಳು ಏಕಾಏಕಿ ಹೃದಯಾಘಾತಕ್ಕೆ ಬಲಿಯಾಗುತ್ತಿರುವ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಹಾರ್ಟ್ ಅಟ್ಯಾಕ್ ಆದ ಸಂದರ್ಭದಲ್ಲಿ ತಕ್ಷಣಕ್ಕೆ ಸಿಪಿಆರ್ ನೀಡಿದ್ರೆ ಪ್ರಾಣ ಉಳಿಯುವ ಸಾಧ್ಯತೆ ಇರುತ್ತದೆ. ಕೆಲ ಸಮಯದ ಹಿಂದೆ ವಿಮಾನ ನಿಲ್ದಾಣದಲ್ಲಿ ಹೃದಯಾಘಾತಕ್ಕೆ ತುತ್ತಾದ ವ್ಯಕ್ತಿಗೆ ವೈದ್ಯೆಯೊಬ್ಬರು ಸಿಪಿಆರ್ ನೀಡುವ ಮೂಲಕ ಪ್ರಾಣ ಉಳಿಸಿದ್ದರು. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ಆಸ್ಪತ್ರೆಯಲ್ಲಿ ಕುಳಿತಿರುವಾಗಲೇ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೆ ತುತ್ತಾದ ವ್ಯಕ್ತಿಯೊಬ್ಬರಿಗೆ ದೇವರಂತೆ ಬಂದ ವೈದ್ಯರು ಸಿವಿಆರ್ ನೀಡುವ ಮೂಲಕ ಪ್ರಾಣ ರಕ್ಷಿಸಿದ್ದಾರೆ. ಈ ವಿಡಿಯೋ ಇದೀಗ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಕೇರಳದ ಆದಿಮಲ್ಲಿಯ ಮಾರ್ನಿಂಗ್ ಸ್ಟಾರ್ ಆಸ್ಪತ್ರೆಯಲ್ಲಿ ನಡೆದಿದ್ದು, ಆಸ್ಪತ್ರೆಯಲ್ಲಿ ಕುಳಿತಿರುವ ಸಂದರ್ಭದಲ್ಲಿಯೇ ಹೃದಯಾಘಾತಕ್ಕೆ ತುತ್ತಾತ ವ್ಯಕ್ತಿಗೆ ತಕ್ಷಣ ಸಿಪಿಆರ್ ನೀಡುವ ಮೂಲಕ ವೈದ್ಯರು ಒಂದು ಅಮೂಲ್ಯ ಜೀವವನ್ನು ರಕ್ಷಿಸಲು ಹೋರಾಟವನ್ನೇ ಮಾಡಿದ್ದಾರೆ. ಈ ದೃಶ್ಯ ಅಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಸೂರಿ ಸುರೇಶ್ (Soori Suresh) ಎಂಬವರು ಫೇಸ್‌ಬುಕ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವೈದ್ಯರೊಬ್ಬರು ಹೃದಯಾಘಾತಕ್ಕೊಳಗಾದ ವ್ಯಕ್ತಿಯ ಪ್ರಾಣ ರಕ್ಷಿಸಲು ಹೋರಾಟವನ್ನೇ ಮಾಡುವ ದೃಶ್ಯವನ್ನು ಕಾಣಬಹುದು. ಆಸ್ಪತ್ರೆಗೆ ಬಂದಿದ್ದಂತಹ ವ್ಯಕ್ತಿಯೊಬ್ಬರು ಹಾರ್ಟ್ ಅಟ್ಯಾಕ್‌ಗೆ ತುತ್ತಾಗಿ ಕುಳಿತಲ್ಲಿಯೇ ಕುಸಿದು ಬೀಳುತ್ತಾರೆ. ಈ ದೃಶ್ಯವನ್ನು ಕಂಡ ವೈದ್ಯರು ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ತಕ್ಷಣ ಅಲ್ಲಿಗೆ ಓಡಿ ಬರುತ್ತಾರೆ. ಅದರಲ್ಲಿ ಒಬ್ಬ ವೈದ್ಯ ಸಿ.ಪಿ.ಆರ್ ಕೊಟ್ಟು ಒಂದು ಜೀವ ಉಳಿಸಿಲು ಹೋರಾಟವನ್ನೇ ಮಾಡಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಸ್ಟ್ರೇಚರ್‌ನಲ್ಲೂ ಸಾಗಿಸುವಾಗಲೂ ಕೂಡಾ ಹೃದಯಾಘಾತಕ್ಕೆ ತುತ್ತಾತ ವ್ಯಕ್ತಿಗೆ ಪ್ರಜ್ಞೆ ಬರಲೆಂದು ಸಿ.ಪಿ.ಆರ್ ನೀಡಿದ್ದಾರೆ. ವೈದ್ಯರು ಮತ್ತು ಅವರ ತಂಡದ ಸಮಯ ಪ್ರಜ್ಞೆ ಮತ್ತು ತಕ್ಷಣದ ಸ್ಪಂದನೆಯಿಂದ ಆ ವ್ಯಕ್ತಿಯ ಪ್ರಾಣ ಉಳಿದಿದೆ.
ಇದನ್ನೂ ಓದಿ: ತಮಟೆ ಏಟಿಗೆ ಕಿವಿ ಕೇಳದ ಬಾಲಕನ ಡಾನ್ಸ್, ತಾಯಿಯ ಖುಷಿಯನ್ನೊಮ್ಮೆ ನೋಡಿ
ನಾಲ್ಕು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಜೀವ ಉಳಿಸಲು ಹೋರಾಡಿದ ವೈದ್ಯರಿಗೆ ನನ್ನದೊಂದು ಸಲಾಂʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼವೈದ್ಯರು ನಿಜವಾದ ಕಲಿಯುಗದ ದೇವರುಗಳುʼ ಎಂದು ಹೇಳಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ