Viral: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ವೃದ್ಧ, ತಕ್ಷಣ ರಕ್ಷಣೆಗೆ ಧಾವಿಸಿದ ರೀಲ್ಸ್‌ ಮಾಡುತ್ತಾ ನಿಂತಿದ್ದ ಯುವಕ

ಇತ್ತೀಚಿನ ದಿನಗಳಲ್ಲಿ ರೀಲ್ಸ್‌ ಹುಚ್ಚು ಬಹಳನೇ ಹೆಚ್ಚಾಗಿದೆ. ಕೆಲವರು ಎಲ್ಲೆಂದರಲ್ಲಿ ರೀಲ್ಸ್‌ ಮಾಡುತ್ತಾ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುತ್ತಾರೆ. ಆದ್ರೆ ಇಲ್ಲೊಬ್ಬ ಯುವಕ ರೀಲ್ಸ್‌ ಮಾಡುತ್ತಾ ಒಂದು ಅಮೂಲ್ಯ ಜೀವವನ್ನೇ ಉಳಿಸಿದ್ದಾನೆ. ಹೌದು ರೈಲ್ವೆ ಪ್ಲಾಟ್‌ಫಾರ್ಮ್‌ ಬಳಿ ಡಾನ್ಸ್‌ ರೀಲ್ಸ್‌ ಮಾಡುತ್ತಾ ನಿಂತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ರೈಲಿನಿಂದ ವೃದ್ಧರೊಬ್ಬರು ಕೇಳ ಬಿದ್ದಿದ್ದಾರೆ. ಆ ಯುವಕ ಡಾನ್ಸ್‌ ಮಾಡುವುದನ್ನೂ ಬಿಟ್ಟು ಆ ವ್ಯಕ್ತಿಯ ರಕ್ಷಣೆಗೆ ಧಾವಿಸಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

Viral: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ವೃದ್ಧ, ತಕ್ಷಣ ರಕ್ಷಣೆಗೆ ಧಾವಿಸಿದ ರೀಲ್ಸ್‌ ಮಾಡುತ್ತಾ ನಿಂತಿದ್ದ ಯುವಕ
ವೈರಲ್​​ ವಿಡಿಯೋ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 07, 2024 | 11:51 AM

ರೈಲಿನ ಫೂಟ್‌ಬೋರ್ಡ್‌ ಬಳಿ ನಿಂತು ಪ್ರಯಾಣಿಸುವಾಗ ಎಷ್ಟು ಜಾಗೃತೆ ವಹಿಸಿದರೂ ಕಮ್ಮಿಯೇ. ಏಕೆಂದರೆ ಕೆಲವೊಮ್ಮೆ ಆಯತಪ್ಪಿ ಬಿದ್ದು ಪ್ರಾಣಕ್ಕೆ ಕುತ್ತು ಬರುವ ಸಾಧ್ಯತೆ ಇರುತ್ತದೆ. ಈ ಮೊದಲು ಕೂಡಾ ಚಲಿಸುತ್ತಿರುವ ರೈಲನ್ನು ಹತ್ತಲು ಹೋಗಿ, ವೇಗವಾಗಿ ಚಲಿಸುತ್ತಿರುವ ರೈಲನ್ನು ಇಳಿಯಲು ಹೋಗಿ ಕಾಲುಗಳನ್ನು ಕಳೆದುಕೊಂಡವರ, ಪ್ರಾಣವನ್ನು ಕಳೆದುಕೊಂಡವರ ಸುದ್ದಿಗಳನ್ನು ಕೇಳಿರುತ್ತೇವೆ. ಇಂತಹ ಸಂದರ್ಭದಲ್ಲಿ ತಕ್ಷಣಕ್ಕೆ ಸಹಾಯಕ್ಕೆ ಧಾವಿಸಿ ಮಾನವೀಯತೆಯನ್ನೂ ಮೆರೆದವರಿದ್ದಾರೆ. ಇದೀಗ ಅಂತಹದ್ದೇ ಘಟನೆಯೊಂದು ನಡೆದಿದ್ದು, ವೃದ್ಧರೊಬ್ಬರು ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ರೈಲಿನಿಂದ ಪ್ಲಾಟ್‌ಫಾರ್ಮ್‌ ಮೇಲೆ ಬಿದ್ದಿದ್ದು, ಅಲ್ಲೇ ರೀಲ್ಸ್‌ ಮಾಡುತ್ತ ನಿಂತಿದ್ದ ಯುವಕನೊಬ್ಬ ತಕ್ಷಣ ಸಹಾಯಕ್ಕೆ ಧಾವಿಸಿ ಆ ವ್ಯಕ್ತಿಯ ಪ್ರಾಣ ರಕ್ಷಿಸಿದ್ದಾನೆ. ಈ ವಿಡಿಯೋ ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಈ ಕುರಿತ ವಿಡಿಯೋವನ್ನು ಪೂಜಾ ಭಿಂಚಾರ್‌ (Bincharpooja) ಸೋಷಿಯಲ್‌ ಮೀಡಿಯಾದ ಪ್ಲಾಟ್‌ಫಾರ್ಮ್‌ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ವೈರಲ್‌ ಆಗಿರುವ ವಿಡಿಯೋದಲ್ಲಿ ರೈಲು ಬರುತ್ತಿದ್ದಂತೆ ರೈಲ್ವೆ ಪ್ಲಾಟ್‌ಫಾರ್ಮ್‌ ಬಳಿ ಯುವಕನೊಬ್ಬ ಡಾನ್ಸ್‌ ರೀಲ್ಸ್‌ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ರೀಲ್ಸ್‌ ಮಾಡುತ್ತಿದ್ದ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಚಲಿಸುತ್ತಿದ್ದ ರೈಲಿನಿಂದ ಹಿರಿಯ ವ್ಯಕ್ತಿಯೊಬ್ಬರು ಆಯ ತಪ್ಪಿ ಬೀಳುತ್ತಾರೆ. ಆ ತಕ್ಷಣ ಯುವಕ ಆ ಹಿರಿ ಜೀವಕ್ಕೆ ಯಾವುದೇ ತೊಂದರೆಯಾಗದಂತೆ ರಕ್ಷಣೆ ಮಾಡಿದ್ದಾನೆ.

ಇದನ್ನೂ ಓದಿ: ಇದ್ಯಾವ ಭಾಷೆ ಸ್ವಾಮಿ, ವೈದ್ಯರು ಕೊಟ್ಟ ಪ್ರಿಸ್ಕ್ರಿಪ್ಷನ್‌ ಕಂಡು ದಂಗಾದ ಮೆಡಿಕಲ್‌ ಶಾಪ್‌ ಸಿಬ್ಬಂದಿ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಸೆಪ್ಟೆಂಬರ್‌ 05 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್‌ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼತಕ್ಷಣ ಹಿರಿ ಜೀವದ ರಕ್ಷಣೆಗೆ ಧಾವಿಸಿದ ಆ ಯುವಕನಿಗೆ ಧನ್ಯವಾದಗಳುʼ ಎಂಬ ಕಾಮೆಂಟ್‌ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼರೀಲ್ಸ್‌ ಮಾಡುವ ನಡುವೆಯೂ ಆತ ಮಾನವೀಯತೆಯನ್ನು ಮರೆಯಲಿಲ್ಲ, ಅದುವೇ ಸಂತಸದ ವಿಚಾರʼ ಎಂದು ಕಾಮೆಂಟ್‌ ಮಾಡಿದ್ದಾರೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ