Video: ತಮಟೆ ಏಟಿಗೆ ಕಿವಿ ಕೇಳದ ಬಾಲಕನ ಡಾನ್ಸ್, ತಾಯಿಯ ಖುಷಿಯನ್ನೊಮ್ಮೆ ನೋಡಿ

ತಾಯಿ ಪ್ರೀತಿಯೇ ಹಾಗೇ, ಈ ಪರಿಶುದ್ಧವಾದ ಪ್ರೀತಿಗೆ ಬೆಲೆಕಟ್ಟಲು ಸಾಧ್ಯ ವೇ ಇಲ್ಲ. ಮಕ್ಕಳ ಸಂತೋಷದಲ್ಲೇ ತನ್ನ ಖುಷಿಯನ್ನು ಕಾಣುತ್ತಾಳೆ. ಇದೀಗ ಇಂತಹದೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಕಿವುಡತನ ಹೊಂದಿರುವ ಬಾಲಕನು ತಮಟೆಗೆ ಸೌಂಡ್ ಗೆ ಸ್ಟೆಪ್ ಹಾಕುವ ವೇಳೆಯಲ್ಲಿ ಶ್ರವಣ ಸಾಧನವೊಂದು ಕೆಳಗೆ ಬಿದ್ದಿದೆ. ಓಡಿ ಬಂದ ತಾಯಿಯೂ ಮಗನ ಕಿವಿಗೆ ಈ ಸಾಧನವನ್ನು ಸಿಕ್ಕಿಸಿ ಮಗನ ಡಾನ್ಸ್ ನೋಡಿ ಖುಷಿ ಪಡುತ್ತಿರುವ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.

Video: ತಮಟೆ ಏಟಿಗೆ ಕಿವಿ ಕೇಳದ ಬಾಲಕನ ಡಾನ್ಸ್, ತಾಯಿಯ ಖುಷಿಯನ್ನೊಮ್ಮೆ ನೋಡಿ
ವೈರಲ್​​ ವಿಡಿಯೋ
Follow us
ಸಾಯಿನಂದಾ
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 07, 2024 | 12:10 PM

ಕಣ್ಣಿಗೆ ಕಾಣುವ ದೇವರೆಂದರೆ ಅದುವೇ ಅಮ್ಮ. ತನ್ನ ಕುಟುಂಬ, ಮಕ್ಕಳಿಗಾಗಿ ಬದುಕನ್ನೇ ಮುಡಿಪಾಗಿಟ್ಟವಳು ಈ ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತನ್ನ ಮಕ್ಕಳಿಗಾಗಿ ಎಂತಹ ಕಷ್ಟವನ್ನೂ ಎದುರಿಸಿ ನಿಲ್ಲುವ ವಾತ್ಸಲ್ಯ ಮೂರ್ತಿ ಈ ಅಮ್ಮ. ಮಕ್ಕಳು ಎಷ್ಟೇ ದೊಡ್ಡವರಾಗಲಿ, ಕುಂಟ ಆಗಿರಲಿ ಕಿವುಡ ಆಗಿರಲಿ ತಾಯಿಯ ಪ್ರೀತಿ ಮಾತ್ರ ಸ್ವಲ್ಪವು ಕಡಿಮೆಯಾಗುವುದಿಲ್ಲ. ತಾಯಿಯ ಪ್ರೀತಿ, ವಾತ್ಸಲ್ಯ, ತ್ಯಾಗಕ್ಕೆ ಸಂಬಂಧಿಸಿದ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಕಿವುಡತನ ಹೊಂದಿರುವ ಮಗನು ಖುಷಿಯಿಂದ ಸ್ಟೆಪ್ ಹಾಕುತ್ತಿದ್ದರೆ ಇತ್ತ ತಾಯಿಯ ಖುಷಿಗೆ ಪಾರಾವೇ ಇಲ್ಲದಂತಾಗಿದೆ.

ನಾಗೇಶ್ ಪ್ರೀತಮ್ ಹೆಸರಿನ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದ್ದು, ಕಿವುಡುತನ ಹೊಂದಿರುವ ತನ್ನ ಕಂದನು ತಮಟೆ ಏಟಿಗೆ ಸ್ಟೆಪ್ ಹಾಕುವುದನ್ನು ನೋಡಿ ತಾಯಿಯು ಖುಷಿ ಪಟ್ಟಿದ್ದಾಳೆ. ಈ ವಿಡಿಯೋದಲ್ಲಿ ತಮಟೆಯ ಬಾರಿಸುವುದನ್ನು ನೋಡಿ ಓಡಿ ಬಂದ ಬಾಲಕನು ರಸ್ತೆಯಲ್ಲಿಯೇ ಡಾನ್ಸ್ ಮಾಡುತ್ತಿದ್ದಾನೆ. ಈ ವೇಳೆಯಲ್ಲಿ ಕಿವಿಗೆ ಹಾಕಿದ ಶ್ರಾವಣ ಸಾಧನವೊಂದು ಕೆಳಗೆ ಬಿದ್ದಿದೆ.

ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಿಂದ ಆಯತಪ್ಪಿ ಬಿದ್ದ ವೃದ್ಧ, ತಕ್ಷಣ ರಕ್ಷಣೆಗೆ ಧಾವಿಸಿದ ರೀಲ್ಸ್‌ ಮಾಡುತ್ತಾ ನಿಂತಿದ್ದ ಯುವಕ

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ತಕ್ಷಣವೇ ಓಡಿ ಬಂದ ತಾಯಿಯೂ ಈ ಸಾಧನವನ್ನು ಹೆಕ್ಕಿಕೊಂಡು ಮಗನ ಕಿವಿಗೆ ಸಿಕ್ಕಿಸಿ ಕೇಳುತ್ತಿದೆಯೇ ಎಂದು ಕೇಳಿದ್ದಾಳೆ. ತಲೆ ಆಡಿಸಿದ ಹುಡುಗನು ಸ್ಟೆಪ್ ಹಾಕಿದ್ದಾನೆ. ಅಲ್ಲೇ ಇದ್ದ ತಾಯಿಯೂ ಮಗನ ಡಾನ್ಸ್ ನೋಡಿ ಚಪ್ಪಾಳೆ ತಟ್ಟುತ್ತಾ ಖುಷಿ ಪಟ್ಟಿದ್ದಾಳೆ. ಈ ವಿಡಿಯೋ ಒಂದು ಸಾವಿರಕ್ಕೂ ಅಧಿಕ ವ್ಯೂಸ್ ಕಂಡಿದೆ. ಈ ವಿಡಿಯೋ ನೋಡಿದ ನೆಟ್ಟಿಗರಿಂದ ಮೆಚ್ಚುಗೆಯ ಕಾಮೆಂಟ್ ಗಳು ವ್ಯಕ್ತವಾಗಿದೆ. ನೆಟ್ಟಿಗನೊಬ್ಬನು, ‘ತಾಯಿಯ ಋಣವನ್ನು ತೀರಿಸಲು ಆಗುವುದೇ ಇಲ್ಲ ‘ ಎಂದಿದ್ದಾನೆ. ಮತ್ತೊಬ್ಬನು, ಹಾಟ್ಸ್ ಆಫ್ ಅಮ್ಮ ಎಂದು ಬರೆದಿದ್ದಾನೆ.

ಮತ್ತಷ್ಟು ವೈರಲ್​​​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್