Viral Video: ರಸ್ತೆಬದಿ ತರಕಾರಿ ಮಾರಲು ಔಡಿ ಎ4 ಕಾರಿನಲ್ಲಿ ಬರುವ ಕೇರಳದ ರೈತ

|

Updated on: Sep 30, 2023 | 3:34 PM

Farmer : ಈ ವಿಡಿಯೋ ನೋಡಿದ ನೆಟ್ಟಿಗರು ಅಚ್ಚರಿ ಮತ್ತು ಖುಷಿಯಿಂದ ಪ್ರತಿಕ್ರಿಯಿಸುತ್ತಿದ್ದಾರೆ. ಶ್ರಮ ಮತ್ತು ಶ್ರದ್ಧೆಯಿಂದ ದುಡಿಯುತ್ತಿರುವ ನಮ್ಮ ದೇಶದ ಪ್ರತೀ ರೈತರೆಲ್ಲರನ್ನೂ ಹೀಗೆಯೇ ನೋಡುವ ಆಸೆ. ಸುಜಿತ್​ ಅನೇಕ ಯುವಕರಿಗೆ ಒಳ್ಳೆಯ ಮಾದರಿ ಎಂದು ಶ್ಲಾಘಿಸುತ್ತಿದ್ದಾರೆ ನೆಟ್ಟಿಗರು. ಔಡಿಯಿಂದ ಇಳಿದು ರಸ್ತೆಯಲ್ಲಿ ನಿಂತು ಸೊಪ್ಪನ್ನು ಮಾರುವ ಸುಜಿತ್ ವಿಡಿಯೋ ಅನ್ನು ನೀವು ನೋಡಲೇಬೇಕು.

Viral Video: ರಸ್ತೆಬದಿ ತರಕಾರಿ ಮಾರಲು ಔಡಿ ಎ4 ಕಾರಿನಲ್ಲಿ ಬರುವ ಕೇರಳದ ರೈತ
ಔಡಿ ಕಾರಿನಲ್ಲಿ ತರಕಾರಿ ಮಾರಲು ಬರುವ ಕೇರಳದ ರೈತ ಸುಜಿತ್​
Follow us on

Kerala: ರೈತರು ಮಾರುಕಟ್ಟೆಗೆ ತರಕಾರಿ ಸೊಪ್ಪು ಮಾರಲು ಬಸ್ಸಿನಲ್ಲಿ, ಸೈಕಲ್ಲಿನಲ್ಲಿ, ದ್ವಿಚಕ್ರವಾಹನದಲ್ಲಿ,  ರೈಲಿನಲ್ಲಿ, ಟೆಂಪೋದಲ್ಲಿ ಬರುವುದನ್ನು ನೋಡಿದ್ದೀರಿ. ಆದರೆ ಕಾರಿನಲ್ಲಿ? ಅದೂ ಔಡಿ ಎ4 ( Audi A4 Luxury Sedan) ನಲ್ಲಿ ಬಂದಿದ್ದನ್ನು ನೋಡಿದ್ದೀರೇ? ಕೇರಳದ ರೈತನೊಬ್ಬ ತನ್ನ ಔಡಿ ಕಾರಿನಲ್ಲಿ ಮಾರುಕಟ್ಟೆಗೆ ಬರುತ್ತಾನೆ. ಇನ್ನೊಂದು ಟೆಂಪೋದಲ್ಲಿ ಅವನು ಬೆಳೆದ ಸೊಪ್ಪೂ ಬರುತ್ತದೆ. ಚಪ್ಪಲಿ ಕಳಚಿ, ಭರಭರನೆ  ಉಟ್ಟ ಪಂಚೆಯನ್ನು ಬಿಚ್ಚಿ ಕಾರಿನಲ್ಲಿಟ್ಟು ಬರ್ಮುಡಾ ಮೇಲೆ ಸೊಪ್ಪು ಮಾರಲು ರಸ್ತೆ ಬದಿ ನಿಲ್ಲುತ್ತಾನೆ. ರೈತನ ಕಠಿಣ ಪರಿಶ್ರಮ ಮತ್ತು ಶ್ರದ್ಧೆಯೇ ಅವನ ಯಶಸ್ಸಿಗೇ ಕಾರಣ ಎಂದು ನೆಟ್ಟಿಗರು ಮನದುಂಬಿ ಇವನನ್ನು ಶ್ಲಾಘಿಸುತ್ತಿದ್ದಾರೆ.

ಇದನ್ನೂ ಓದಿ: Viral Video: ‘ರೋಸಿ’ಯ ಸಿಮಂತದ ವಿಡಿಯೋ ವೈರಲ್; ಇದು ಬಹಳ ಆಪ್ತ, ಸುಂದರವೆಂದ ನೆಟ್ಟಿಗರು

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ರೈತ ಸುಜಿತ್​ ಎಸ್​ ಪಿ variety_farmer ಎಂಬ ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನಾಲ್ಕು ದಿನಗಳ ಹಿಂದೆ ಹಂಚಿಕೊಂಡ ಈ ವಿಡಿಯೋ ಅನ್ನು ಈತನಕ 4.5 ಲಕ್ಷ ಜನರು ಲೈಕ್ ಮಾಡಿದ್ಧಾರೆ. ಅನೇಕರು ಪ್ರತಿಕ್ರಿಯಿಸಿ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಔಡಿ ಕಾರಿನಲ್ಲಿ ತರಕಾರಿ ಮಾರಲು ಬರುವ ಕೇರಳದ ಸುಜಿತ್​

ಕೃಷಿಯಲ್ಲಿ ತೊಡಗಿಕೊಳ್ಳುವ ಯುವಕರಿಗೆ ನೀವು ಉತ್ತಮ ಸ್ಫೂರ್ತಿ ಎಂದಿದ್ದಾರೆ ಒಬ್ಬರು. ಪದಗಳೇ ಇಲ್ಲ, ನೀವು ಆದರ್ಶ ವ್ಯಕ್ತಿ ಎಂದಿದ್ದಾರೆ ಇನ್ನೊಬ್ಬರು. ಇದಕ್ಕಿಂತ ಪ್ರೇರಣೆ ಬೇಕೆ? ಎಂದಿದ್ದಾರೆ ಮತ್ತೊಬ್ಬರು. ಕೃಷಿಗೆ ಸಂಬಂಧಿಸಿದ ಅನೇಕ ತಂತ್ರಗಳನ್ನು ಅನುಸರಿಸುತ್ತ ಮಾದರಿ ರೈತ ಎನ್ನಿಸಿಕೊಂಡಿರುವ ಸುಜಿತ್​ ಇನ್​ಸ್ಟಾಗ್ರಾಂನಲ್ಲಿ 2 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಇದನ್ನೂ ಓದಿ : Viral Video: ‘ನನಗೆ ಡಿಸ್ಕೌಂಟ್ ಕೊಡಬಹುದೆ?’;​ ಕ್ಯಾಬ್​ ಡ್ರೈವರ್​ ಲೆನ್ಸ್​ಕಾರ್ಟ್ ಉದ್ಯೋಗಿಗೆ ಕೇಳುತ್ತಾನೆ, ಮುಂದೇನಾಗುತ್ತದೆ ನೋಡಿ

ಇಂಡಿಯಾದ ಅತ್ಯಂತ ಶ್ರೀಮಂತ ರೈತ ಎಂದಿದ್ದಾರೆ ಒಬ್ಬರು. ಹಾಗಾದರೆ ಮೊದಲು ನಾನು ಔಡಿ ಕಾರು ಖರೀದಿಸಿ ನಂತರ ತರಕಾರಿ ಮಾರಬೇಕು ಎನ್ನುವುದು ತಿಳಿಯಿತು ಎಂದಿದ್ದಾರೆ ಇನ್ನೊಬ್ಬರು. ಭಾರತದ ಎಲ್ಲಾ ರೈತರು ಈ ಮಟ್ಟಕ್ಕೆ ಬೆಳೆಯಬೇಕು ಎಂದು ಆಶಿಸುತ್ತೇನೆ ಎಂದಿದ್ದಾರೆ ಹಲವಾರು ಜನರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ನ್ಯೂಸ್​​ಗಾಗಿ ಕ್ಲಿಕ್ ಮಾಡಿ

Published On - 3:33 pm, Sat, 30 September 23