Viral Video : ‘ರೋಬೋಟ್ ಕುಟ್ಟಿ’ ಕೇರಳದ ಬ್ಯಾಂಕಿನಲ್ಲಿ ಇವರಿಗೆ ಏನು ಕೆಲಸವಿತ್ತೋ?

| Updated By: ಶ್ರೀದೇವಿ ಕಳಸದ

Updated on: Sep 13, 2022 | 11:02 AM

Kerala Woman Robot : ಕೇರಳದ ಸ್ಟಾರ್ಟ್​ ಅಪ್​ ಕಂಪೆನಿಗೆ ಬ್ಯಾಂಕೊಂದು ನೀಡಿದ ಸಾಲ ಮಂಜೂರಾತಿ ಪತ್ರವನ್ನು ಮಹಿಳಾ ರೋಬೋಟ್​ ಸ್ವೀಕರಿಸಿದ ವಿಡಿಯೋ ವೈರಲ್ ಆಗಿದೆ.

Viral Video : ‘ರೋಬೋಟ್ ಕುಟ್ಟಿ’ ಕೇರಳದ ಬ್ಯಾಂಕಿನಲ್ಲಿ ಇವರಿಗೆ ಏನು ಕೆಲಸವಿತ್ತೋ?
ಸಾಲ ಮಂಜೂರು ಮಾಡಿದ್ದಕ್ಕೆ ಧನ್ಯವಾದ ನಿಮಗೆ
Follow us on

Viral Video : ಈಗೀಗಲಂತೂ ಹೆಚ್ಚಿದ ಸ್ಪರ್ಧೆಯಿಂದಾಗಿ ಹೊಸ ಉದ್ಯಮಕ್ಕೆ ಬ್ಯಾಂಕ್​ನಿಂದ ಆರ್ಥಿಕ ಸಹಾಯ ಪಡೆಯಬೇಕೆಂದರೆ ಸಾಕಷ್ಟು ಪ್ರಯತ್ನ ಪಡಬೇಕಾಗುತ್ತದೆ. ಅದರಲ್ಲೂ ತಂತ್ರಜ್ಞಾನ ಮತ್ತು ಆವಿಷ್ಕಾರಕ್ಕೆ ಹಣ ತೊಡಗಿಸಲು ಸಾಲ ತೆಗೆದುಕೊಳ್ಳುವುದೆಂದರೆ ಅದೊಂದು ಸಾಹಸವೇ ಸರಿ. ಕೆಲ ದಿನಗಳ ಹಿಂದೆ ಕೇರಳ ಮೂಲದ ಸ್ಟಾರ್ಟ್‌ಅಪ್‌ ಕಂಪೆನಿಗೆ ಬ್ಯಾಂಕ್​ವೊಂದು ಸಾಲ ನೀಡುವುದಾಗಿ ದೃಢಪಡಿಸಿತು. ಆಗ ಈ ಕಂಪೆನಿ ಸಾಲ ಮಂಜೂರಾತಿ ಪತ್ರವನ್ನು ಸ್ವೀಕರಿಸುವ ಸಂದರ್ಭವನ್ನು ಬ್ಯಾಂಕ್​ ಸಿಬ್ಬಂದಿಯ ನೆನಪಿನಲ್ಲುಳಿಯುವಂತೆ ಮಾಡಬೇಕು, ಆ ಸಂದರ್ಭ ವಿಭಿನ್ನವಾಗಿರಬೇಕು ಎಂದು ಆಲೋಚಿಸಿತು. ಸಾಮಾನ್ಯವಾಗಿ ಇಂಥ ಪ್ರಮುಖ ದಾಖಲೆ ಪತ್ರಗಳನ್ನು ಕಂಪೆನಿಯ ಹಿರಿಯ ವ್ಯಕ್ತಿಗಳು ಸ್ವೀಕರಿಸುತ್ತಾರೆ. ಆದರೆ ರೋಬೋಟ್​ ತಯಾರಿಸುವ ಈ ಕಂಪೆನಿ, ತಾನು ತಯಾರಿಸಿದ ಮಹಿಳಾ ವೇಷಧಾರಿ ರೋಬೋಟ್​ ಮೂಲಕ ಸಾಲ ಮಂಜೂರಾತಿ ಪತ್ರವನ್ನು ಸ್ವೀಕರಿಸುವ ಸನ್ನಿವೇಶವನ್ನು ಸೃಷ್ಟಿಸಿತು. ಈ ವಿಡಿಯೋ ವೈರಲ್ ಆಗಿದ್ದು ನೆಟ್ಟಿಗರ ಕುತೂಹಲಕ್ಕೆ ಕಾರಣವಾಗಿದೆ.

ಆ ದಿನ ಕೇರಳದ ಸಾಂಪ್ರದಾಯಿಕ ಶೈಲಿಯಲ್ಲಿ ಸೀರೆಯುಟ್ಟು, ಅಲಂಕರಿಸಿಕೊಂಡ ಮಹಿಳಾ ವೇಷಧಾರಿ ರೋಬೋಟನ್ನು ಕಂಪೆನಿಯ ಪರವಾಗಿ ಬ್ಯಾಂಕಿಗೆ ಕರೆದೊಯ್ಯಲಾಯಿತು. ನಂತರ ಬ್ಯಾಂಕ್​ ಅಧಿಕಾರಿಗಳು ಸಾಲ ಮಂಜೂರಾತಿ ಪತ್ರದ ದಾಖಲೆಗಳನ್ನು ಅದಕ್ಕೆ ನೀಡಿದರು. ದಾಖಲೆಪತ್ರಗಳನ್ನು ಸ್ವೀಕರಿಸಿದ ನಂತರ ಬ್ಯಾಂಕ್ ಅಧಿಕಾರಿಗಳಿಗೆ ರೋಬೋಟ್​ ಧನ್ಯವಾದ ತಿಳಿಸಿ ಭಾಷಣವನ್ನೂ ಮಾಡಿತು.

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

‘ಫೆಡರಲ್ ಬ್ಯಾಂಕ್​ ಎಸಿಮೋವ್ ರೋಬೊಟಿಕ್ಸ್​ ಕಂಪೆನಿಗೆ ಆರ್ಥಿಕ ಸಹಾಯ ಮಾಡುತ್ತಿರುವುದಕ್ಕೆ ಧನ್ಯವಾದ. ಇದರಿಂದ ಕಂಪೆನಿಗೆ ಬಹಳ ಅನುಕೂಲವಾಗುತ್ತಿದೆ. ದೇಶಿ ತಂತ್ರಜ್ಞಾನ ಅಭಿವೃದ್ಧಿಗೆ ಈ ಬ್ಯಾಂಕ್​ ಸದಾ ಬೆಂಬಲಿಸುತ್ತದೆ ಎನ್ನುವುದನ್ನು ಈ ಮೂಲಕ ಸಾಬೀತುಪಡಿಸಿದೆ’ ಎನ್ನುವುದು Sayabot (Robot) ಭಾಷಣದ ಸಾರಾಂಶವಾಗಿತ್ತು. ನಂತರ ಎಲ್ಲರಿಗೂ ಈ ಮಹಿಳಾ ರೋಬೋಟ್ ಓಣಂ ಶುಭಾಶಯಗಳನ್ನು ಕೋರಿತು.

 

ಟ್ವಿಟರ್​ನಲ್ಲಿರುವ ಈ ವಿಡಿಯೋಗೆ, ಎಸಿಮೋವ್​ ರೋಬೋಟಿಕ್ಸ್​ನ ಸಂಸ್ಥಾಪಕ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜಯಕೃಷ್ಣನ್ ಟಿ, ಕೇರಳದ ಸಾಂಪ್ರದಾಯಿಕ ದೋಣಿಹಾಡು ಹಾಡುತ್ತಿರುವ ಈ ರೋಬೋಟ್​ನ ವಿಡಿಯೋ ತುಣುಕನ್ನು ಟ್ವೀಟ್ ಮಾಡಿದ್ದಾರೆ.

ಎಲ್ಲ ದಾಖಲೆ, ಪುರಾವೆಗಳಿದ್ದರೂ ದೊಡ್ಡಮಟ್ಟದ ಸಾಲ ನೀಡಲು ಬ್ಯಾಂಕ್​ಗಳು ಹಿಂದೆಮುಂದೆ ನೋಡುತ್ತವೆ. ಆಗ ಭರವಸೆ ಮೂಡಿಸಲು ಮತ್ತು ವಿಶ್ವಾಸಾತ್ಮಕ ಸಂಬಂಧ ಕಾಯ್ದುಕೊಳ್ಳಲು ಸಾಲ ಪಡೆಯುವ ಕಂಪೆನಿಗಳು ಭರವಸೆ ಮೂಡಿಸಬೇಕಾಗುತ್ತದೆ. ತಮ್ಮ ಕಾರ್ಯಯೋಜನೆಗಳ ಬಗ್ಗೆ ಬ್ಯಾಂಕ್​ ಅಧಿಕಾರಿಗಳಲ್ಲಿ ವಿಶ್ವಾಸ ಮೂಡಿಸಲು ಹೀಗೆ ರಚನಾತ್ಮಕವಾಗಿ ಯೋಚಿಸಿ ಹೆಜ್ಜೆ ಇಡಬೇಕಾಗುತ್ತದೆ. ಆಧುನಿಕ ಜಗತ್ತಿನಲ್ಲಿ ನಿಮ್ಮ ಸಾಮರ್ಥ್ಯ ಸಾಬೀತುಪಡಿಸಲು ವ್ಯವಹಾರ ಕೌಶಲ ಬಹಳೇ ಮುಖ್ಯ!

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 5:09 pm, Mon, 12 September 22