Video: ವಿಚ್ಛೇದಿತ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುವ ವಿಶೇಷ ಡಿವೋರ್ಸ್ ಕ್ಯಾಂಪ್

ಇತ್ತೀಚೆಗಿನ ದಿನಗಳಲ್ಲಿ ವೈವಾಹಿಕ ಜೀವನದಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಜಗಳ ಮನಸ್ತಾಪಗಳು ಹೆಚ್ಚಾಗುತ್ತಿದೆ. ಹೀಗಾದಾಗ ದಂಪತಿಗಳ ಮುಂದಿನ ಆಯ್ಕೆಯೇ ಡಿವೋರ್ಸ್ ಆಗಿರುತ್ತದೆ. ದಿನದಿಂದ ದಿನಕ್ಕೆ ಡಿವೋರ್ಸ್ ಪಡೆಯುತ್ತಿರುವ ದಂಪತಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಡಿವೋರ್ಸ್ ಪಡೆದ ಮಹಿಳೆಯರಿಗಾಗಿಯೇ ವಿಶೇಷ ರಿಲ್ಯಾಕ್ಸ್ ಕ್ಯಾಂಪ್ ಆಯೋಜಿಸಲಾಗಿದ್ದು, ಈ ಕುರಿತಾದ ವಿಶೇಷ ವಿಡಿಯೋವೊಂದು ಸಖತ್ ವೈರಲ್ ಆಗಿದೆ. ಅಷ್ಟಕ್ಕೂ ಏನಿದು ಡಿವೋರ್ಸ್ ಕ್ಯಾಂಪ್? ಈ ಕುರಿತಾದ ಮಾಹಿತಿ ಇಲ್ಲಿದೆ.

Video: ವಿಚ್ಛೇದಿತ ಮಹಿಳೆಯರಿಗೆ ರಿಲ್ಯಾಕ್ಸ್ ನೀಡುವ ವಿಶೇಷ ಡಿವೋರ್ಸ್ ಕ್ಯಾಂಪ್
ಡಿವೋರ್ಸ್ ಕ್ಯಾಂಪ್
Image Credit source: Instagram

Updated on: Jul 21, 2025 | 2:20 PM

ಕೇರಳ,ಜುಲೈ 21: ಗಂಡ ಹೆಂಡತಿ ಜಗಳ ಉಂಡು ಮಲಗುವ ತನಕ ಅಂತಾರೆ, ಆದರೆ ಎಷ್ಟೋ ಜಗಳಗಳು ವಿಚ್ಛೇದನದ ತನಕ ಹೋಗುತ್ತಿದೆ. ಕ್ಷುಲ್ಲಕ ಕಾರಣಕ್ಕೆ ಡಿವೋರ್ಸ್ ಪಡೆದು, ತನಗೆ ಸ್ವಾತಂತ್ರ್ಯ ಸಿಕ್ಕಿತು ಎಂದು ಸಂಭ್ರಮಿಸಿರುವವರು ನಮ್ಮ ಸುತ್ತಮುತ್ತಲಿನಲ್ಲಿ ಇದ್ದಾರೆ. ಹೌದು, ಇತ್ತೀಚೆಗಷ್ಟೇ ಡಿವೋರ್ಸ್ ಸಿಗ್ತಿದ್ದಂತೆ ಪಾರ್ಟಿ ಮಾಡಿದ್ದ ಮಹಿಳೆಯರ ಸುದ್ದಿಯನ್ನು ನೀವು ಓದಿರಬಹುದು. ಆದರೆ, ಇತ್ತೀಚೆಗಷ್ಟೇ ಕೇರಳದಲ್ಲಿ (Kerala) ಮೊದಲ ಬಾರಿ ಆಯೋಜಿಸಲಾಗಿದ್ದ ಮಹಿಳೆಯರ ಡಿವೋರ್ಸ್ ಕ್ಯಾಂಪ್ (divorce camp) ಸಖತ್ ಸುದ್ದಿಯಾಗುತ್ತಿದೆ. ಈ ಕ್ಯಾಂಪ್ ಆಯೋಜನೆ ಮಾಡಿದ್ದು ಕ್ಯಾಲಿಕಟ್ನ ಕಂಟೆಂಟ್ ಕ್ರಿಯೇಟರ್ ರಫಿಯಾ ಅಫಿ (Rafia Afi) ಆಗಿದ್ದು, ಮೊದಲ ಪ್ರಯತ್ನದಲ್ಲೇ ಯಶಸ್ವಿಯಾಗಿದ್ದಾರೆ. ಈ ಕುರಿತಾದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಗಮನ ಸೆಳೆಯುತ್ತಿದೆ.

cookeatburn and breakfree stories ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ನಾವು ಮಕ್ಕಳಂತೆ ನಕ್ಕಿದ್ದೇವೆ. ನಾವು ಯೋಧರಂತೆ ಅತ್ತಿದ್ದೇವೆ. ನಾವು ಪರ್ವತಗಳಲ್ಲಿ ಕಿರುಚಿದ್ದೇವೆ. ನಕ್ಷತ್ರಗಳ ಕೆಳಗೆ ನಾವೆಲ್ಲರೂ ಡಾನ್ಸ್ ಮಾಡಿದ್ದೇವೆ. ಬೇರೆ ಯಾರಿಗೂ ಅರ್ಥವಾಗದ ನಮ್ಮೊಳಗಿನ ಕಥೆಗಳನ್ನು ಹಂಚಿಕೊಂಡಿದ್ದೇವೆ. ಅಪರಿಚಿತರು ಸಹೋದರಿಯರಾಗಿದ್ದಾರೆ ಎಂದು ಶೀರ್ಷಿಕೆಯಲ್ಲಿ ಬರೆಯಲಾಗಿದೆ.

ಇದನ್ನೂ ಓದಿ
ತನ್ನ ದುಬಾರಿ ಜೀವನಶೈಲಿಗೆ ಕಂಪನಿಯ ಕೋಟಿ ಕೋಟಿ ಹಣ ಬಳಸಿದ ಮಹಿಳೆ
ಹನಿಮೂನ್​​​ ಹೋಗಲು ಮದುವೆ ಊಟವನ್ನು ಹರಾಜಿಗಿಟ್ಟ ಜೋಡಿ
ಚುಡಾಯಿಸಲು ಬಂದ ವ್ಯಕ್ತಿಗೆ ನಡು ರಸ್ತೆಯಲ್ಲೇ ಚಪ್ಪಿಲಿ ಏಟು ಕೊಟ್ಟ ಹುಡುಗಿ
4.5 ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ ಅಂತಿಮ ವರ್ಷದ ವಿದ್ಯಾರ್ಥಿನಿ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಈ ಡಿವೋರ್ಸ್ ಕ್ಯಾಂಪ್ ವಿಶೇಷತೆಯೇನು?

ಡಿವೋರ್ಸ್ ಕ್ಯಾಂಪ್ ಹೆಸರೇ ಹೇಳುವಂತೆ ವಿಚ್ಛೇದಿತ ಮಹಿಳೆಯರಿಗಾಗಿ ಆಯೋಜಿಸಲಾಗಿದ್ದ ಕ್ಯಾಂಪ್. ವಿಚ್ಛೇದಿತ ಹಾಗೂ ವಿಧವೆ ಮಹಿಳೆಯರ ನೋವನ್ನು ಮರೆಸುವ ಸಣ್ಣ ಪ್ರವಾಸ. ಹೊಸ ಮುಖಗಳ ಭೇಟಿ, ಸ್ನೇಹ, ಮಾತುಕತೆ, ತಮ್ಮ ನೋವನ್ನು ಹಂಚಿಕೊಂಡು ಬದುಕು ಕಟ್ಟಿಕೊಳ್ಳುವ ಹೊಸ ಪ್ರಯತ್ನ, ಹಾಡು ಕುಣಿತ, ಪ್ರಕೃತಿಯ ಸವಿಯುವುದು ಹೀಗೆ ಬದುಕಿನಲ್ಲಿ ನೋವು ಉಂಡ ಮಹಿಳೆಯರಿಗೆ ರಿಲ್ಯಾಕ್ಸ್ ಕೊಡುವ ಕ್ಯಾಂಪ್.

ಇದನ್ನೂ ಓದಿ :Viral: ಇಲ್ಲಿ ಯಾವ ಪೇನು ಇಲ್ಲ, ದುಡ್ಡು ಕೊಡು ಬೋಂಡಾ ತಿನ್ನು, ದುಡ್ಡು ಕೊಡು ಟೀ ಕುಡಿ, ಗ್ರಾಹಕರಿಗೆ ವಿಶೇಷ ಸೂಚನೆ

ಈ ವಿಡಿಯೋ ಹನ್ನೊಂದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೂ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಬಳಕೆದಾರರೊಬ್ಬರು, ವೈವಾಹಿಕ ಜೀವನದಿಂದ ನೊಂದ ಮಹಿಳೆಯರಿಗೆ ಇಂತಹ ಕ್ಯಾಂಪ್ ಗಳು ಧೈರ್ಯದೊಂದಿಗೆ ಬದುಕುವ ಸಂಭ್ರಮಿಸುವುದನ್ನು ಹೇಳಿಕೊಡುತ್ತದೆ ಎಂದಿದ್ದಾರೆ. ಇನ್ನೊಬ್ಬರು, ರಾಜ್ಯದ ಮೂಲೆ ಮೂಲೆಗಳಲ್ಲಿನ ಮಹಿಳೆಯರು ಭಾಗಿಯಾಗಿರುವುದು ನಿಜಕ್ಕೂ ಖುಷಿಯಾದ ವಿಚಾರ. ಇಂತಹ ಕ್ಯಾಂಪ್ ಗಳು ಮಹಿಳೆಯರ ಮಾನಸಿಕ ಆರೋಗ್ಯವನ್ನು ಗಟ್ಟಿಗೊಳಿಸುತ್ತದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರ, ಇದು ನಿಜಕ್ಕೂ ಒಳ್ಳೆಯ ಪ್ರಯತ್ನ, ನೊಂದ ಮಹಿಳೆಯರ ಜೊತೆಗೆ ನಿಂತು ಅವರ ಬದುಕಿಗೆ ಧೈರ್ಯ ನೀಡುವ ಇಂತಹ ಕೆಲಸಗಳು ಹೀಗೆಯೇ ಮುಂದುವರೆಯಲಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:38 pm, Mon, 21 July 25