ಅದೃಷ್ಟ ಕೈ ಕೊಟ್ಟಾಗ ಬೆನ್ನಿಗೆ ಬಿದ್ದ ಬೇತಾಳನಂತೆ ಸಮಸ್ಯೆಗಳು ಒಂದರ ಹಿಂದೆ ಒಂದರಂತೆ ಬರುವ ಹಾಗೆ ಅದೃಷ್ಟ ಕೈ ಹಿಡಿದಾಗ ಯಾವುದೇ ಗಂಡಾಂತರ ಬಂದರೂ ಅದರಿಂದ ಪಾರಾಗಿ ಸಾವನ್ನೇ ಗೆದ್ದು ಬರಬಹುದು ಎಂದು ಹೇಳ್ತಾರೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಯುವಕನೊಬ್ಬ ತನ್ನ ಅದೃಷ್ಟದಿಂದಲೇ ಸಾವಿನ ದವಡೆಯಿಂದ ಪಾರಾಗಿದ್ದಾನೆ. ಹೌದು ನಿಯಂತ್ರಣ ತಪ್ಪಿದ ಬಸ್ಸೊಂದು ನಿಲ್ದಾಣದಲ್ಲಿ ಕುಳಿತಿದ್ದ ಆ ಯುವಕನ ಮೇಲೆಯೇ ನುಗ್ಗಿದ್ದು, ಈ ಭೀಕರ ಅಪಘಾತದಲ್ಲಿ ಯುವಕ ಪವಾಡ ಸದೃಶ ರೀತಿಯಲ್ಲಿ ಪಾರಾಗಿದ್ದಾನೆ. ಈ ಶಾಕಿಂಗ್ ದೃಶ್ಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗುತ್ತಿದೆ.
ಈ ಘಟನೆ ಡಿಸೆಂಬರ್ 1 ಭಾನುವಾರದಂದು ಕೇರಳದ ಇಡುಕ್ಕಿ ಜಿಲ್ಲೆಯ ಕಟ್ಟಪ್ಪನ್ ಬಸ್ ನಿಲ್ದಾಣದಲ್ಲಿ ನಡೆದಿದ್ದು, ಯುವಕನೊಬ್ಬ ಭೀಕರ ಅಪಘಾತದಿಂದ ಪವಾಡ ಸದೃಶವಾಗಿ ಪಾರಾಗಿದ್ದಾನೆ. ಈ ಯುವಕ ಬಸ್‌ಸ್ಟ್ಯಾಂಡ್‌ನಲ್ಲಿ ಕುಳಿತು ಮೊಬೈಲ್ ನೋಡುತ್ತಿದ್ದಂತಹ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಬಂದ ಬಸ್ಸೊಂದು ಆತನ ಮೇಲೆಯೇ ನುಗ್ಗಿದೆ.
ವರದಿಗಳ ಪ್ರಕಾರ ಚಾಲಕ ಬಸ್ಸನ್ನು ರಿವರ್ಸ್ ತೆಗೆಯಲು ಯತ್ನಿಸಿದಾಗ ನಿಯಂತ್ರಣ ತಪ್ಪಿ, ಬಸ್ ಸೀದಾ ಬಂದು ಬಸ್‌ಸ್ಟಾಂಡ್‌ನಲ್ಲಿ ಕುಳಿತಿದ್ದ ಯುವಕನ ಮೇಲೆ ನುಗ್ಗಿದೆ. ಅದೃಷ್ಟವಶಾತ್ ಯುವಕ ಅಪಾಯದಿಂದ ಪಾರಾಗಿದ್ದು, ಆತನ ಮೊಣಕಾಲಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಇದನ್ನೂ ಓದಿ: ಮದುವೆ ಮಂಟಪದಿಂದ ಹತ್ತಾರು ಬಾರಿ ಹೋಗ್ತಿದ್ದ ವರ, ಅನುಮಾನ ಬಂದು ಹಿಂದೆ ಹೋದಾಗ ಕಂಡಿದ್ದೇನು?
TheSiasatDaily ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋದಲ್ಲಿ ಯುವಕನೊಬ್ಬ ಬಸ್‌ಸ್ಟ್ಯಾಂಡ್‌ನಲ್ಲಿ ಮೊಬೈಲ್ ನೋಡುತ್ತಾ ತನ್ನ ಪಾಡಿಗೆ ಕುಳಿತಿರುವ ದೃಶ್ಯವನ್ನು ಕಾಣಬಹುದು. ಇದೇ ಸಂದರ್ಭದಲ್ಲಿ ಏಕಾಏಕಿ ಬಂದಂತಹ ಬಸ್ಸೊಂದು ನಿಯಂತ್ರಣ ತಪ್ಪಿ ಆ ಯುವಕನ ಮೇಲೆಯೇ ನುಗ್ಗಿದೆ. ತಕ್ಷಣ ಅಲ್ಲಿದ್ದ ಜನರೆಲ್ಲಾ ಯುವಕನ ರಕ್ಷಣೆಗೆ ಧಾವಿಸಿದ್ದಾರೆ. ಈ ಭೀಕರ ಅಪಘಾತದ ದೃಶ್ಯವನ್ನು ಕಂಡು ನೋಡುಗರು ಬೆಚ್ಚಿ ಬಿದ್ದಿದ್ದಾರೆ.
ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ