ಪ್ರೀತಿ ಪಾತ್ರರ ಅಗಲಿಕೆಯ ನೋವು ಮನಸ್ಸಿಗೆ ಎಷ್ಟು ಘಾಸಿ ಮಾಡುತ್ತದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅದು ಪ್ರತಿ ಕ್ಷಣವೂ ಕಾಡುವ ನೋವು. ನಮ್ಮ ಮನಸ್ಸಿಗೆ ಹತ್ತಿರವಾದವರ ಅಗಲಿಕೆಯ ನೋವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ, ಅದು ಶಾಶ್ವತ ನೋವು ಅಂತಾನೇ ಹೇಳಬಹುದು. ಕೇವಲ ಮನುಷ್ಯರು ಮಾತ್ರವಲ್ಲ ಪ್ರಾಣಿ ಪಕ್ಷಿಗಳೂ ಕೂಡಾ ಇಂತಹ ನೋವುಗಳನ್ನು ಅನುಭವಿಸುತ್ತವೆ. ಬಹುತೇಕ ಹೆಚ್ಚಿನವರು ಅಂದುಕೊಂಡಿರೋದು ಏನಂದ್ರೆ, ಈ ದುಃಖ ದುಮ್ಮಾನ, ನೋವು ನಲಿವು ಮನುಷ್ಯರಿಗೆ ಮಾತ್ರ ಸೀಮಿತ. ಪ್ರಾಣಿ-ಪಕ್ಷಿಗಳಲ್ಲಿ ಇಂತಹ ಭಾವನೆಗಳು ಇಲ್ಲವೇ ಇಲ್ಲ ಎಂದು. ಆದರೆ ಏನು ಗೊತ್ತಾ, ಮನುಷ್ಯರಂತೆ ಪ್ರಾಣಿಗಳೂ ಕೂಡಾ ಭಾವನಾತ್ಮಕ ಜೀವಿಗಳು. ಅವುಗಳೂ ಕೂಡಾ ತಮ್ಮ ಪ್ರೀತಿ ಪಾತ್ರರೊಂದಿಗೆ ನೋವು ನಲಿವನ್ನು ಹಂಚಿಕೊಳ್ಳುತ್ತವೆ. ಅಷ್ಟೇ ಯಾಕೆ, ಭಾವನಾತ್ಮಕ ಜೀವಿಗಳಾಗಿರುವ ಪ್ರಾಣಿ ಪಕ್ಷಿಗಳು ಕೂಡಾ ಪ್ರೀತಿಪಾತ್ರರ ಅಗಲಿಕೆಗೆ ಕಣ್ಣೀರು ಹಾಕುತ್ತವೆ. ಸದ್ಯ ಅಂತಹದ್ದೊಂದು ಮನಮಿಡಿಯುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಗಾತಿಯನ್ನು ಕಳೆದುಕೊಂಡ ಕೋಲಾ ಪ್ರಾಣಿಯ ಅಸಹಾಯಕ ಪರಿಸ್ಥಿತಿ ಕಣ್ಣಂಚಲ್ಲಿ ನೀರು ತರಿಸುವಂತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಂಡು ಕೋಲಾ ಅಗಲಿದ ಸಂಗಾತಿಯನ್ನು ಬಿಗಿದಪ್ಪಿ ಅಳುವಂತಹ ಮನಮಿಡಿಯುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು ದಕ್ಷಿಣ ಆಸ್ಟ್ರೇಲಿಯಾದ ಕೋಲಾ ರೆಸ್ಕ್ಯೂ (@koala_rescue) ಎಂಬ ಪ್ರಾಣಿ ದತ್ತಿ ಸಂಸ್ಥೆ ತನ್ನ ಇನ್ಸ್ಟಾಗ್ರಾಮ್ ಪೇಜ್ ಅಲ್ಲಿ ಹಂಚಿಕೊಂಡಿದೆ.
ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಗಂಡು ಕೋಲಾ ಮರಣ ಹೊಂದಿರುವಂತಹ ತನ್ನ ಸಂಗಾತಿಯನ್ನು ಮಡಿಲಿನಲ್ಲಿ ಕೂರಿಸಿ, ʼಏಕೆ ನನ್ನನ್ನು ಒಂಟಿ ಮಾಡಿ ನೀನೊಬ್ಬಳೇ ಹೋದೆʼ ಎಂದು ದುಃಖಿಸುತ್ತಾ, ಕೊನೆಗೆ ದುಃಖವನ್ನು ತಡೆಯಲಾರದೆ ಸಂಗಾತಿಯನ್ನು ಬಿಗಿದಪ್ಪಿ ಅಳುವಂತಹ ಮನ ಮಿಡಿಯುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಹಾಟ್ ಆಗಿ ಕಾಣಲು ತನ್ನ ರಕ್ತವನ್ನು ತಾನೇ ಕುಡಿಯುತ್ತಾಳೆ ಈ ಯುವತಿ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 3.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಒಂದುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ಹಲವಾರು ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼಪ್ರಾಣಿಗಳು ಕೂಡಾ ಎಷ್ಟು ಭಾವನೆಗಳಿದೆಯಲ್ಲವೇʼ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಪ್ರಾಣಿಯ ನೋವು ಕಂಡು ನನ್ನ ಕಣ್ಣಂಚಲ್ಲಿ ನೀರು ಬಂದಿತುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇದು ನಿಜಕ್ಕೂ ಹೃದಯವಿದ್ರಾವಕ ಘಟನೆʼ ಎಂದು ಕಾಮೆಂಟ್ ಮಾಡಿದ್ದಾರೆ ಹಾಗೂ ಹಲವರು ಈ ಮನಕಲಕುವ ದೃಶ್ಯವನ್ನು ಕಂಡು ಮರುಕ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ