Viral Video: ನಮ್ಮ ಜೀವನ ಕಂಪ್ಲೀಟ್ ಮತ್ತು ಫಿನೀಶ್ ಆಗುವುದು ಪತ್ನಿಯಿಂದ, ಅದು ಹೇಗೆ? ಇಲ್ಲಿದೆ ನೋಡಿ
ಜೋರಿನ ಹೆಂಡತಿ-ಪಾಪದ ಗಂಡ, ಗಂಡನಿಗೆ ರೋಧನೆ ಕೊಡುವಂತಹ ಹೆಂಡತಿ ಹೀಗೆ ಪತಿಯ ಮೇಲೆ ಅಧಿಕಾರ ಚಲಾಯಿಸುವಂತಹ ಪತ್ನಿಯರಿಗೆ ಸಂಬಂಧಿಸಿದ ಫನ್ನಿ ಟ್ರೋಲ್, ಮೀಮ್ಸ್ ಗಳು ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತದೆ. ಇಂತಹ ಕೆಲವೊಂದು ವಿಡಿಯೋಗಳು ನಮ್ಮನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸುತ್ತದೆ. ಸದ್ಯ ಅಂತಹದ್ದೊಂದು ವಿಡಯೋ ವೈರಲ್ ಆಗಿದ್ದು, ಪ್ರೊಫೆಸರ್ ಒಬ್ಬರು ʼಕಂಪ್ಲೀಟ್ ಮತ್ತು ಫಿನೀಶ್ʼ ಪದದ ಅರ್ಥವನ್ನು ಬಹಳ ಸೊಗಸಾಗಿ ವಿವರಿಸಿದ್ದಾರೆ. ಈ ಕುರಿತ ವಿಡಿಯೋ ಇಲ್ಲಿದೆ ನೋಡಿ.
ಹಿಂದಿನ ಕಾಲದಲ್ಲಿ ಗಂಡಂದಿರು ಹೆಂಡತಿಯರಿಗೆ ಕಿರುಕುಳವನ್ನು ನೀಡುತ್ತಿದ್ದರು. ಆದ್ರೆ ಇವಾಗಿನ ಕಾಲದಲ್ಲಿ ಎಲ್ಲವೂ ಉಲ್ಟಾ-ಪಲ್ಟಾವಾಗಿದೆ. ಎಲ್ಲಿ ನೋಡಿದ್ರೂ ಹೆಂಡತಿಯರೇ ಜೋರು ಎಂಬ ಮಾತು ಕೇಳಿ ಬರುತ್ತಿದೆ. ಸೇರಿಗೆ ಸವಾ ಸೇರು ಎಂಬಂತೆ ಗಂಡ ಏನಾದ್ರೂ ಪತ್ನಿಯ ಮೇಲೆ ಕೈ ಮಿಲಾಯಿಸಿದರೆ ಹೆಂಡತಿಯೂ ಗಂಡನಿಗೆ ತಿರುಗಿ ಎರಡು ಹೊಡೆತ ಕೊಟ್ಟೆ ಬಿಡುತ್ತಾಳೆ. ಹೀಗೆ ಗಂಡನ ಮೇಲೆ ಹೆಂಡತಿ ದರ್ಪ ತೋರಿಸಿದಂತಹ ಸುದ್ದಿಗಳು ಆಗಾಗ್ಗೆ ಕೇಳಿ ಬರುತ್ತಿರುತ್ತವೆ. ಅಷ್ಟೇ ಯಾಕೆ ಗಂಡನಿಗೆ ರೋಧನೆ ಕೊಡುವಂತಹ ಪತ್ನಿಯರು, ಗಂಡನ ಮೇಲೆ ಅಧಿಕಾರ ಚಲಾಯಿಸುವಂತ ಹೆಂಡತಿಯರ ಕುರಿತ ನಾಟಕಗಳು, ಫನ್ನಿ ಮೇಮ್ಸ್, ಟ್ರೋಲ್ ಗಳು ದಿನನಿತ್ಯ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಕಾಲೇಜು ಪ್ರೊಫೆಸರ್ ಒಬ್ಬರು ಗಂಡ ಹೆಂಡತಿ ಸಂಬಂಧದಲ್ಲಿ ಕಂಪ್ಲೀಟ್ ಮತ್ತು ಫಿನೀಶ್ ಪದದ ಅರ್ಥ ಏನು ಎಂಬುದನ್ನು ಬಹಳ ತಮಾಷೆಯ ರೀತಿಯಲ್ಲಿ ವಿವರಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಕಂಪ್ಲೀಟ್ ಮತ್ತು ಫಿನೀಶ್ ಈ ಎರಡು ಪದದ ಅರ್ಥವನ್ನು ತಮಾಷೆಯ ರೀತಿಯಲ್ಲಿ ವಿವರಿಸುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @allgoodnamesaregonee666 ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ಮೀನಿಂಗ್ ಆಫ್ ಕಂಪ್ಲೀಟ್ ಆಂಡ್ ಫಿನೀಶ್!!! ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
View this post on Instagram
ವೈರಲ್ ವಿಡಿಯೋದಲ್ಲಿ ಕಾಲೇಜು ಪ್ರೊಫೆಸರ್ ಒಬ್ಬರು ಕಾರ್ಯಕ್ರಮವೊಂದರಲ್ಲಿ ಕಂಪ್ಲೀಟ್ ಮತ್ತು ಫಿನೀಶ್ ಪದದ ಅರ್ಥವನ್ನು ವಿವರಿಸುತ್ತಿರುವ ದೃಶ್ಯವನ್ನು ಕಾಣಬಹುದು. ಅವರು ಹೇಳ್ತಾರೆ, ನೀವೇನಾದ್ರೂ ಒಳ್ಳೆಯ ಗುಣವಂತೆ ಹುಡುಗಿಯನ್ನು ವಿವಾಹವಾದರೆ ಅದು ಕಂಪ್ಲೀಟ್ ಅಂತ ಅರ್ಥ. ನೀವೇನಾದ್ರೂ ಕೆಟ್ಟ ಗುಣ (ಸಣ್ಣ ವಿಷಯಕ್ಕೂ ಜಗಳವಾಡುವ) ಹುಡುಗಿಯನ್ನು ವಿವಾಹವಾದರೆ ನಿಮ್ಮ ಲೈಫ್ ಫಿನೀಶ್ ಅಂದ್ರೆ ನಿಮ್ಮ ಜೀವನವೇ ಮುಗಿದು ಹೋಯಿತು ಅಂತ ಅರ್ಥ. ಇನ್ನೂ ನೀವೇನಾದ್ರೂ ಶಾಪಿಂಗ್ ಅನ್ನು ತುಂಬಾನೇ ಇಷ್ಟ ಪಡೋ ಹುಡುಗಿಯನ್ನು ಮದುವೆಯಾದ್ರೆ ನಿಮ್ಮ ಲೈಫ್ ಕಂಪ್ಲೀಟ್ಲಿ ಫಿನೀಶ್ ಅಂತಾನೆ ಅರ್ಥ ಎಂದು ಹಾಸ್ಯ ಮಾಡುತ್ತಾರೆ. ಇವರ ಈ ಮಾತಿಗೆ ನೆರೆದಿದ್ದ ಜನರೆಲ್ಲರೂ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.
ಇದನ್ನೂ ಓದಿ: ಇನ್ಸ್ಟೆಂಟ್ ಕರ್ಮ; ಶ್ವಾನಕ್ಕೆ ತೊಂದರೆ ಕೊಟ್ಟ ವ್ಯಕ್ತಿಗೆ ಸರಿಯಾಗಿ ಬುದ್ಧಿ ಕಲಿಸಿದ ಗೋಮಾತೆ
ಮೂರು ದಿನಗಳ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2.9 ಮಿಲಿಯನ್ ವೀಕ್ಷಣೆಗಳನ್ನು ಹಾಗೂ 29 ಸಾವಿರಕ್ಕೂ ಹೆಚ್ಚಿನ ಲೈಕ್ಸ್ ಗಳನ್ನು ಪಡೆದುಕೊಂಡಿದೆ. ಹಾಗೂ ತರಹೇವಾರಿ ಕಾಮೆಂಟ್ಸ್ಗಳೂ ಹರಿದು ಬಂದಿವೆ. ಒಬ್ಬ ಬಳಕೆದಾರರು ʼನಾನು ಕೂಡಾ ಮದುವೆಯಾಗಿ ಕಂಪ್ಲೀಟ್ಲಿ ಫಿನೀಶ್ ಆಗಿದ್ದೇನೆʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼವರ್ಷಗಳ ಹಿಂದೆ ನನ್ನ ಪ್ರಿನ್ಸಿಪಾಲ್ ಕೂಡಾ ಈ ಒಂದು ತಮಾಷೆಯ ಟಾಪಿಕ್ ಬಗ್ಗೆ ಮಾತನಾಡಿದ್ದರುʼ ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼಇವರ ಹಾಗೆ ಬೇರೆ ಶಿಕ್ಷಕರು ನಮಗೆ ಈ ನಿಜ ಜೀವನದ ಉದಾಹರಣೆಗಳನ್ನು ಏಕೆ ನೀಡುವುದಿಲ್ಲʼ ಎಂದು ತಮಾಷೆ ಮಾಡಿದ್ದಾರೆ. ಇನ್ನೂ ಅನೇಕರು ಸರ್ ಹೇಳಿದ ಹಾಗೆ ನಮ್ಮ ಜೀವನವೂ ಕಂಪ್ಲೀಟ್ ಫಿನೀಶ್ ಆಗಿದೆ ಎಂದು ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ