Viral Video: ಇನ್ಸ್ಟೆಂಟ್ ಕರ್ಮ; ಶ್ವಾನಕ್ಕೆ ತೊಂದರೆ ಕೊಟ್ಟ ವ್ಯಕ್ತಿಗೆ ಸರಿಯಾಗಿ ಬುದ್ಧಿ ಕಲಿಸಿದ ಗೋಮಾತೆ
ಮನುಷ್ಯರಿಗಿಂತ ಪ್ರಾಣಿಗಳೇ ಗುಣದಲಿ ಮೇಲು ಎಂದು ಹೇಳುತ್ತಾರೆ. ಕೆಲವೊಂದು ನಿದರ್ಶನಗಳನ್ನು ನೋಡಿದಾಗ ಈ ಮಾತ ಅಕ್ಷರಶಃ ನಿಜವೆಂದು ಭಾಸವಾಗುತ್ತೆ ಅಲ್ವಾ. ಸದ್ಯ ಅಂತಹದ್ದೇ ಘಟನೆಯೊಂದು ನಡೆದಿದ್ದು, ನನ್ನ ಸ್ನೇಹಿತನಿಗೆ ತೊಂದರೆ ಕೊಡಲು ನಿನಗೆಷ್ಟು ಧೈರ್ಯ ಹುಲುಮಾನವನೇ ಎನ್ನುತ್ತಾ ಗೋಮಾತೆಯು ಶ್ವಾನಕ್ಕೆ ತೊಂದರೆ ಕೊಟ್ಟಂತಹ ವ್ಯಕ್ತಿಗೆ ಒದ್ದು, ತುಳಿದು ಸರಿಯಾಗಿ ಬುದ್ಧಿ ಕಲಿಸಿದೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.
ಪ್ರಾಣಿಗಳಿಗೆ ಹೋಲಿಸಿದರೆ ಮನುಷ್ಯರಲ್ಲಿ ಒಳ್ಳೆಯ ಗುಣ, ಮುಗ್ಧತೆ, ಮಾನವೀಯತೆ, ಸಹಾಯ ಮನೋಭಾವ ತುಸು ಕಡಿಮೆಯೇ ಇದೆ. ಹೀಗೆ ಪ್ರಾಣಿಗಳ ಒಳ್ಳೆಯತನ, ಮನುಷ್ಯರ ಕೆಟ್ಟತನವನ್ನು ನೋಡಿದಾದ ನಿಜಕ್ಕೂ ಗುಣದಲಿ ಪ್ರಾಣಿಗಳೇ ಮೇಲೂ ಅಂತ ಭಾಸವಾಗುತ್ತದೆ. ಸ್ವಾರ್ಥ ಮನೋಭಾವದ ಮನುಷ್ಯನು ಒಬ್ಬರಿಗೆ ತೊಂದರೆ ಕೊಡುತ್ತಾನೆಯೇ ವಿನಃ ಯಾರೊಬ್ಬರ ಸಹಾಯಕ್ಕೂ ಹೋಗಲಾರ. ಇದೇ ಕಾರಣಕ್ಕೆ ಅದೆಷ್ಟೋ ಜನರು ಮನುಷ್ಯರ ಜೊತೆ ಸ್ನೇಹ ಮಾಡುವ ಬದಲು ಪ್ರಾಣಿಗಳ ಜೊತೆ ಸ್ನೇಹ ಮಾಡುವುದು ಎಷ್ಟೋ ಲೇಸು ಎಂದು ಹೇಳುತ್ತಿರುತ್ತಾರೆ. ಹೌದು ಮೂಕ ಪ್ರಾಣಿಗಳಿಗೆ ನಮ್ಮಂತೆ ಮಾತು ಬಾರದಿರಬಹುದು, ಆದರೆ ಅವುಗಳು ನಮ್ಮ ಭಾವನೆಗಳನ್ನು ಅರ್ಥೈಸುತ್ತವೆ, ಕಷ್ಟಗಳಿಗೆ ಸ್ಪಂದಿಸುತ್ತವೆ. ಇದಕ್ಕೆ ನಿದರ್ಶನದಂತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಕಾಣಸಿಗುತ್ತಿರುತ್ತವೆ. ಸದ್ಯ ಅಂತಹದ್ದೇ ವಿಡಿಯೋವೊಂದು ಇದೀಗ ವೈರಲ್ ಆಗಿದ್ದು, ತನ್ನ ಸ್ನೇಹಿತನಿಗೆ ತೊಂದರೆಕೊಟ್ಟಂತಹ ವ್ಯಕ್ತಿಯನ್ನು ಒದ್ದು, ತುಳಿದು ಗೋಮಾತೆಯು ಆತನಿಗೆ ಸರಿಯಾಗಿ ಬುದ್ಧಿ ಕಲಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿ ಸಾಮ್ರಾಜ್ಯಕ್ಕೆ ಸಂಬಂಧಿಸಿದ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ವೈರಲ್ ಆಗಿದ್ದು, ಸ್ನೇಹಿತನ ಸಹಾಯಕ್ಕಾಗಿ ಧಾವಿಸಿದ ಹಸುವಿನ ಸಹಾಯ ಮನೋಭಾವವನ್ನು ಕಂಡು ನೆಟ್ಟಿಗರು ಮನಸೋತಿದ್ದಾರೆ. ಈ ಘಟನೆ ಕೆಲ ವರ್ಷಗಳ ಹಿಂದೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗಿದೆ. ವೈರಲ್ ವಿಡಿಯೋವನ್ನು @leonskee ಎಂಬ ಹೆಸರಿನ X ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Muslim abusing a dog and then…. His karma is coming to visit pic.twitter.com/a97DR9Qc41
— leonskee (@leeonskee) February 1, 2024
ವೈರಲ್ ವಿಡಿಯೋದಲ್ಲಿ ಕರುಣೆಯಿಲ್ಲದ ಮನುಷ್ಯನೊಬ್ಬ ಬೀದಿಯಲ್ಲಿ ನಿಂತು, ಅಲ್ಲಿದ್ದ ಬೀದಿನಾಯಿಯೊಂದರ ಕಿವಿಯನ್ನು ಗಟ್ಟಿಯಾಗಿ ಹಿಡಿದುಕೊಂಡು, ಅದಕ್ಕೆ ತೊಂದರೆ ಕೊಡುತ್ತಿರುವಂತಹ ದೃಶ್ಯವನ್ನು ಕಾಣಬಹುದು. ಶ್ವಾನ ನೋವಿನಿಂದ ಎಷ್ಟೇ ಕಿರುಚಿದರೂ ಆತ ಆ ಶ್ವಾನಕ್ಕೆ ತೊಂದರೆ ಕೊಡುತ್ತಲೇ ಇದ್ದ. ಇದನ್ನು ಕಂಡಂತಹ ಗೋಮಾತೆ, ʼನನ್ನ ಸ್ನೇಹಿತನಿಗೆ ತೊಂದರೆ ಕೊಡಲು ನಿನಗೆಷ್ಟು ಧೈರ್ಯ ಹುಲುಮಾನವನೇ ಎನ್ನುತ್ತಾ ಕೋಪದಿಂದ ಓಡಿ ಬಂದು ಆತನಿಗೆ ಒದ್ದು, ತುಳಿದು ಇನ್ನು ಮುಂದೆ ಮುಗ್ಧ ಪ್ರಾಣಿಗಳ ತಂಟೆಗೆ ಬಂದ್ರೆ ಹುಷಾರ್ ಎಂದು ಸರಿಯಾಗಿ ಪಾಠ ಕಲಿಸಿದೆ.
ಇದನ್ನೂ ಓದಿ: ಅಗಲಿದ ಸಂಗಾತಿಯನ್ನು ಬಿಗಿದಪ್ಪಿ ಅತ್ತ ಕೋಲಾ; ಎಂತಹ ಕಲ್ಲು ಹೃದಯವನ್ನೂ ಕರಗಿಸುವಂತಹ ಭಾವನಾತ್ಮಕ ದೃಶ್ಯವಿದು
ಫೆಬ್ರವರಿ 01 ರಂದು ಹಂಚಿಕೊಳ್ಳಲಾದ ಈ ವಿಡಿಯೋ ಎರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಆ ವ್ಯಕ್ತಿಗೆ ಸರಿಯಾಗಿ ಬುದ್ಧಿ ಕಲಿಸಿದ ಹಸುವಿಗೆ ಧನ್ಯವಾದಗಳುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼಪ್ರಾಣಿಗಳಿಗೆ ಹಿಂಸೆ ನೀಡುವವರನ್ನು ನಾನು ದ್ವೇಶಿಸುತ್ತೇನೆʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆತ ಮಾಡಿದ ತಪ್ಪಿಗೆ ಸರಿಯಾಗಿ ಶಿಕ್ಷೆಯಾಗಿದೆʼ ಅಂತ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ