Viral Video: ಗೋದ್ರೆಜ್ ಕಂಪನಿಯ ಮಾಲೀಕ ಇದನ್ನ ನೋಡಿದ್ರೆ ಕೋಮಕ್ಕೆ ಹೋಗೋದು ಗ್ಯಾರಂಟಿ
ಅನೇಕ ಜನರು ಯಾವುದಾದರೂ ಜುಗಾಡ್ ಐಡಿಯಾಗಳನ್ನು ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ತಮ್ಮ ಸಮಸ್ಯೆಗಳಿಗೆ ಥಟ್ಟನೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಇಂತಹ ಹಲವಾರು ಇಂಟರೆಸ್ಟಿಂಗ್ ವಿಷಯಗಳ ಕುರಿತ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ದೇಸಿ ಐಡಿಯಾವನ್ನು ಉಪಯೋಗಿಸಿಕೊಂಡು, ಮನೆಯೊಂದರಲ್ಲಿ ಗೋದ್ರೇಜ್ ಕಪಾಟನ್ನು ಬಳಸಿ ವಿಭಿನ್ನ ಶೈಲಿಯ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗಿದ್ದು, ಇಂತಹ ಪ್ರತಿಭೆಗಳು ನಮ್ಮ ದೇಶ ಬಿಟ್ಟು ಹೋಗಬಾರದು ಎಂದು ನೆಟ್ಟಿಗರು ಕಾಲೆಳೆದಿದ್ದಾರೆ.
ನಮ್ಮಲ್ಲಿ ಜುಗಾಡ್ ಐಡಿಯಾಗಳಿಗೇನೂ ಕೊರತೆಯಿಲ್ಲ. ಮನೆಯಲ್ಲಿ ಯಾವುದಾದರೂ ವಸ್ತುಗಳು ಕೆಟ್ಟು ಹೋದರೆ, ಅವುಗಳನ್ನು ಕಸದ ಬುಟ್ಟಿಗೆ ಬಿಸಾಡದೆ, ಬದಲಿಗೆ ಅವುಗಳನ್ನು ಉಪಯೋಗಿಸಿಕೊಂಡು, ಅದ್ರಲ್ಲಿ ಇನ್ನೇನಾದರೂ ಹೊಸ ವಸ್ತುಗಳನ್ನು ತಯಾರಿಸುತ್ತಾರೆ. ಹೌದು ಹಲವರು ತಮ್ಮ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ವಿಬಿನ್ನ ಶೈಲಿಯ ದೇಸಿ ಐಡಿಯಾಗಳನ್ನು ಉಪಯೋಗಿಸಿಕೊಂಡು, ಮನೆಯಲ್ಲಿ ಕೆಟ್ಟು ಹೋದ ಅಥವಾ ಹಳೆಯ ವಸ್ತುಗಳನ್ನು ಉಪಯೋಗಿಸಿಕೊಂಡು ಅದ್ರಲ್ಲಿ ಇನ್ನೇನಾದರೂ ಹೊಸ ವಸ್ತುಗಳನ್ನು ತಯಾರಿಸುತ್ತಾರೆ. ಇಂತಹ ಜುಗಾಡ್ ಐಡಿಯಾಗಳ ಕುರಿತ ವಿಡಿಯೋಗಳು ಆಗಾಗ್ಗೆ ವೈರಲ್ ಆಗುತ್ತಿರುತ್ತವೆ. ಈ ಹಿಂದೆ ವ್ಯಕ್ತಿಯೊಬ್ಬರು ಕೆಟ್ಟು ಹೋದ ನೀರಿನ ಟ್ಯಾಂಕ್ ಬಳಸಿಕೊಂಡು ಕಡಿಮೆ ಖರ್ಚಿನಲ್ಲಿ ಶೌಚಾಲಯ ನಿರ್ಮಿಸಿದ್ದರು. ಇದೀಗ ಅಂತಹದ್ದೇ ವಿಡಿಯೋವೊಂದು ಹರಿದಾಡುತ್ತಿದ್ದು, ಮನೆಯೊಂದರಲ್ಲಿ ಗೋದ್ರೇಜ್ ಕಪಾಟನ್ನು ಬಳಸಿ ವಿಭಿನ್ನ ಶೈಲಿಯ ಶೌಚಾಲಯವನ್ನು ನಿರ್ಮಾಣ ಮಾಡಿದ್ದಾರೆ. ಈ ವಿಡಿಯೋ ಇದೀಗ ಸಖತ್ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಈ ವಿಡಿಯೋವನ್ನು ರಾಜ್ (@raajcar) ಎಂಬವರು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, “ಗೋದ್ರೇಜ್ ಕಂಪೆನಿಯ ಮಾಲೀಕ ಇದನ್ನ ನೋಡಿ ಕೋಮಾ ಗೆ ಹೋಗಿದ್ದಾರಂತೆ” ಎಂಬ ತಮಾಷೆಯೆ ಕಮೆಂಟ್ ಬರೆದುಕೊಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
Khul ja sim sim 😂😂 ಗೋದ್ರೆಜ್ ಕಂಪನಿಯ ಮಾಲೀಕ ಇದನ್ನ ನೋಡಿ ಕೋಮ ಕ್ಕೇ ಹೋಗಿದ್ದಾರಂತೆ🥴 pic.twitter.com/spVNyLHzQT
— Raj (@raajcar) February 24, 2024
ವೈರಲ್ ವಿಡಿಯೋದಲ್ಲಿ ಗೋದ್ರೇಜ್ ಕಪಾಟಿನ್ನು ಬಳಸಿಕೊಂಡು ಅದ್ರಿಂದ ವಿಶಿಷ್ಟ ಬಗೆಯ ಶೌಚಾಲಯವನ್ನು ನಿರ್ಮಾಣ ಮಾಡಿರುವುದನ್ನು ಕಾಣಬಹುದು. ವ್ಯಕ್ತಿಯೊಬ್ಬರು ಕೈಯಲ್ಲಿ ಹಿಡಿದುಕೊಂಡು ವಿಡಿಯೋ ಮಾಡುತ್ತಾ ಕಪಾಟಿನ ಬಳಿ ಬರುತ್ತಾರೆ. ಬಹುಶಃ ಆ ಕಪಾಟಿನೊಳಗಿದ್ದ ಚಿನ್ನ, ಬಟ್ಟೆಬರೆಗಳನ್ನು ತೋರಿಸಲು ವಿಡಿಯೋ ಮಾಡಿರಬೇಕು ಅಂತ ಎಲ್ಲರೂ ಭಾವಿಸಿದ್ದರು. ಆದರೆ ಕಪಾಟಿನ ಡೋರ್ ಓಪನ್ ಮಾಡುತ್ತಿದ್ದಂತೆ, ಅದರ ಒಳಗೆ ಶೌಚಾಲಯ ಇರುವುದನ್ನು ಕಾಣಬಹುದು. ಬಹುಶಃ ಮನೆಯಲ್ಲಿ ಸ್ಥಳದ ಅಭಾವ ಇದ್ದ ಕಾರಣ ದೇಸಿ ಐಡಿಯಾವನ್ನು ಉಪಯೋಗಿಸಿಕೊಂಡು ಇಂತಹ ಪುಟ್ಟ ಟಾಯ್ಲೆಟ್ ನಿರ್ಮಾಣ ಮಾಡಿರಬಹುದು. ಅಬ್ಬಬ್ಬಾ ಇದು ಟಾಯ್ಲೆಟ್ ಬಾಗಿಲೇ ಅಂತ ಈ ವಿಡಿಯೋವನ್ನು ಕಂಡು ನೆಟ್ಟಿಗರು ಫುಲ್ ಶಾಕ್ ಆಗಿದ್ದಾರೆ.
ಇದನ್ನೂ ಓದಿ: ಹಾಟ್ ಆಗಿ ಕಾಣಲು ತನ್ನ ರಕ್ತವನ್ನು ತಾನೇ ಕುಡಿಯುತ್ತಾಳೆ ಈ ಯುವತಿ
ಫೆಬ್ರವರಿ 24 ರಂದು ಹಂಚಿಕೊಳ್ಳಲಾದ ಈ ವಿಡಿಯೋ 23 ಸಾವಿರಕ್ಕೂ ಹೆಚ್ಚು ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼಈ ಮನೆಗೆ ಕಳ್ಳರು ಏನಾದ್ರೂ ನುಗ್ಗಿದ್ರೆ, ಈ ಗೋದ್ರೇಜ್ ಟಾಯ್ಲೆಟ್ ಕಂಡು ತಲೆ ಸುತ್ತಿ ಬಿಳುವುದಂತೂ ಗ್ಯಾರಂಟಿʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ʼಈ ಇತರಹದ ಟ್ಯಾಲೆಂಟ್ ಇಂಡಿಯಾದಲ್ಲಿ ಮಾತ್ರ ಕಾಣಸಿಗೋದು ಅನ್ಸುತ್ತೆʼ ಅಂತ ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಾನು ಈ ಕಪಾಟಿನ ಒಳಗೆ ಬ್ಲಾಕ್ ಮನಿ ಇರ್ಬೋದು ಅಂತ ಭಾವಿಸಿದ್ದೆʼ ಎಂದು ತಮಾಷೆಯ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೂ ಅನೇಕರು ಈ ಒಂದು ವಿಚಿತ್ರ ಶೌಚಾಲಯ ಕಂಡು ನಕ್ಕು ನಕ್ಕು ಸುಸ್ತಾಯ್ತು ಅಂತ ಹೇಳಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ