Viral Video: ಮೊದಲ ಬಾರಿಗೆ ಭಾರತೀಯ ಭಕ್ಷ್ಯ ಸವಿದ ಕೊರಿಯನ್ ಚೆಲುವೆ; ಪ್ರತಿಕ್ರಿಯೆ ಹೇಗಿತ್ತು ನೋಡಿ

ಭಾರತೀಯ ಭಕ್ಷ್ಯಗಳೆಂದರೆ ಅದೆಷ್ಟೋ ವಿದೇಶಿಯರಿಗೆ ಪಂಚಪ್ರಾಣ. ಸಾಕಷ್ಟು ಮಂದಿ ನಮ್ಮ ಪಾಕ ಪದ್ಧತಿಗೆ ಫಿದಾ ಆಗಿದ್ದಾರೆ. ಹೀಗೆ ವಿದೇಶಿ ಪ್ರಜೆಗಳು ಭಾರತೀಯ ಭಕ್ಷ್ಯಗಳನ್ನು ಸವಿದು ಖುಷಿ ಪಟ್ಟಂತಹ ಹಲವಾರು ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದವು. ಇದೀಗ ಅದೇ ರೀತಿಯ ವಿಡಿಯೋವೊಂದು ವೈರಲ್ ಆಗಿದ್ದು, ಕೊರಿಯನ್ ಚೆಲುವೆಯೊಬ್ಬಳು ಮೊದಲ ಬಾರಿಗೆ ಸಾಂಪ್ರದಾಯಿಕ ಶೈಲಿಯ ಭಾರತೀಯ ಭಕ್ಷ್ಯವನ್ನು ಸವಿದು, ಆನಂದದಿಂದ ತೇಲಾಡಿದ್ದಾಳೆ.

Viral Video: ಮೊದಲ ಬಾರಿಗೆ ಭಾರತೀಯ ಭಕ್ಷ್ಯ ಸವಿದ ಕೊರಿಯನ್ ಚೆಲುವೆ; ಪ್ರತಿಕ್ರಿಯೆ ಹೇಗಿತ್ತು ನೋಡಿ
ಭಾರತೀಯ ಭಕ್ಷ್ಯ ಸವಿದ ಕೊರಿಯನ್ ಚೆಲುವೆImage Credit source: Pinterest
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷತಾ ವರ್ಕಾಡಿ

Updated on: Mar 03, 2024 | 5:42 PM

ಭಾರತೀಯ ಪಾಕ ಪದ್ಧತಿ ಬಹಳನೇ ವಿಶೇಷವಾದದ್ದು, ವಿವಿಧ ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗುವ ಭಾರತೀಯ ಭಕ್ಷ್ಯಗಳು ಬೇರೆ ದೇಶಗಳ ಆಹಾರಗಳಿಗಿಂತ ಭಿನ್ನವಾಗಿರುತ್ತದೆ. ರುಚಿಕರವಾದ ಭಾರತೀಯ ಭಕ್ಷ್ಯಗಳೆಂದರೆ ವಿದೇಶಿಯರಿಗೂ ಬಲು ಇಷ್ಟ. ಹೀಗೆ ಸಾಕಷ್ಟು ಮಂದಿ ನಮ್ಮ ದೇಶದ ಪಾಕ ಪದ್ಧತಿಗೆ ಫಿದಾ ಆಗಿದ್ದಾರೆ. ಇದಕ್ಕೆ ನಿದರ್ಶನದಂತಿರುವ ಹಲವಾರು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇಂತಹ ದೃಶ್ಯಗಳು ಸಖತ್ ವೈರಲ್ ಆಗುವುದರ ಜೊತೆಗೆ ಭಾರತೀಯರಾದ ನಮ್ಮ ಮನಸ್ಸಿಗೂ ಖುಷಿಯನ್ನು ಕೊಡುತ್ತದೆ. ಸದ್ಯ ಅಂತಹದ್ದೊಂದು ವಿಡಿಯೋ ಇದೀಗ ವೈರಲ್ ಆಗಿದ್ದು, ಕೊರಿಯನ್ ಚೆಲುವೆಯೊಬ್ಬಳು ಮೊದಲ ಬಾರಿಗೆ ಭಾರತೀಯ ಭಕ್ಷ್ಯವನ್ನು ಸವಿದು, ಖುಷಿಯಲ್ಲಿ ತೇಲಾಡಿದ್ದಾಳೆ.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ವಿಡಿಯೋದಲ್ಲಿ ಕೊರಿಯನ್ ಚೆಲುವೆಯೊಬ್ಬಳು ಮಲೇಷ್ಯಾದಲ್ಲಿರುವ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ಅನ್ನ ಸಾಂಬರ್, ಪಲ್ಯ, ಲಸ್ಸಿ ಇತ್ಯಾದಿ ಭಾರತೀಯ ಭಕ್ಷ್ಯಗಳನ್ನು ಬಹಳ ಆನಂದದಿಂದ ಸವಿಯುವ ದೃಶ್ಯವನ್ನು ಕಾಣಬಹುದು. ಈ ವಿಡಿಯೋವನ್ನು @spiz_edits ಎಂಬ ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಮಲೇಷ್ಯಾದಲ್ಲಿ ಭಾರತೀಯ ಭಕ್ಷ್ಯವನ್ನು ಸವಿದ ಕೊರಿಯನ್ ಯುವತಿ, ಭಾರತೀಯ ಆಹಾರದ ರುಚಿಗೆ ಮನಸೋತಿದ್ದಾಳೆ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

View this post on Instagram

A post shared by Diksha Sharma (@spiz_edits)

ವೈರಲ್ ವಿಡಿಯೋದಲ್ಲಿ ಮಲೇಷ್ಯಾದ ಭಾರತೀಯ ರೆಸ್ಟೋರೆಂಟ್ ಒಂದರಲ್ಲಿ ಕೊರಿಯಾ ದೇಶದ ಯುವತಿಯೊಬ್ಬಳು ಬಹಳ ಎಂಜಾಯ್ ಮಾಡುತ್ತಾ ಭಾರತೀಯ ಭಕ್ಷ್ಯಗಳನ್ನು ಸವಿಯುತ್ತಿರುವ ದೃಶ್ಯವನ್ನು ಕಾಣಬಹುದು. ಆಕೆಗೆ ಬಾಳೆ ಎಲೆಯಲ್ಲಿ ಅನ್ನ ಸಾಂಬಾರ್, ಪಲ್ಯ, ಹಪ್ಪಳವನ್ನು ಬಡಿಸಲಾಗಿತ್ತು, ಅನ್ನ ಸಾಂಬಾರ್ ಸವಿದ ಆಕೆ ಇದರ ಟೇಸ್ಟ್ ಅಂತೂ ತುಂಬಾನೇ ಅದ್ಭುತವಾಗಿದೆ ಎಂದು ಹೇಳುತ್ತಾಳೆ. ನಂತರ ಹಪ್ಪಳವನ್ನು ಹೇಗೆ ತಿನ್ನೋದು ಎಂದು ಅಲ್ಲಿರುವವರ ಬಳಿ ಕೇಳಿ ನಂತರ ಕರುಮ್ ಕುರುಮ್ ಎಂದು ಹಪ್ಪಳವನ್ನು ತಿನ್ನುತ್ತಾ ಇದಂತೂ ನನ್ನ ಫೇವೆರಟ್ ಎಂದು ಹೇಳುತ್ತಾಳೆ. ಕೊನೆಯಲ್ಲಿ ಭಾರತೀಯ ಭಕ್ಷ್ಯಗಳಂತೂ ತುಂಬಾನೇ ಅದ್ಭುತವಾಗಿದೆ ಎನ್ನುತ್ತಾ, ಆಕೆ ಖುಷಿಯಲ್ಲಿ ತೇಲಾಡುವ ದೃಶ್ಯವನ್ನು ಕಾಣಬಹುದು.

ಇದನ್ನೂ ಓದಿ: ಈ ಹೆಡ್​​ ಪೋನ್​​ ಬೆಲೆ ಕೇಳಿದ್ರೆ ನೀವು ಶಾಕ್​​ ಆಗುವುದಂತೂ ಖಂಡಿತಾ

ಫೆಬ್ರವರಿ 10 ರಂದು ಹಂಚಿಕೊಳ್ಳಲಾದ ಈ ವಿಡಿಯೋ 4.1 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ನಾಲ್ಕುವರೆ ಲಕ್ಷಕ್ಕೂ ಅಧಿಕ ಲೈಕ್ಸ್ಗಳನ್ನು ಪಡೆದುಕೊಂಡಿದೆ. ತರಹೇವಾರಿ ಕಾಮೆಂಟ್ಸ್ಗಳೂ ಹರಿದುಬಂದಿವೆ. ಒಬ್ಬ ಬಳಕೆದಾರರು ʼನಾನು ಮಾಲೇಷಿಯಾದವಳು. ನನಗೂ ಭಾರತೀಯಾ ಭಕ್ಷ್ಯಗಳೆಂದರೆ ತುಂಬಾನೇ ಇಷ್ಟʼ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼನಮ್ಮ ಭಾರತ ನಿಜಕ್ಕೂ ಅದ್ಭುತವಲ್ಲವೇʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಆ ಹುಡುಗಿಯ ಪ್ರತಿಕ್ರಿಯೆ ತುಂಬಾನೇ ಮುದ್ದಾಗಿದೆʼ ಎಂದು ಹೇಳಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್