ಭಾರತವು ವಿದೇಶಿಯರ ಆಕರ್ಷಣೆಯ ತಾಣವಾಗಿದೆ. ಇಲ್ಲಿನ ಧಾರ್ಮಿಕ, ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳ ಸೌಂದರ್ಯವನ್ನು ಸವಿಯಲು ಪ್ರಪಂಚದ ಮೂಲೆ ಮೂಲೆಗಳಲ್ಲಿನ ಜನರು ನಮ್ಮ ದೇಶಕ್ಕೆ ಭೇಟಿ ನೀಡುತ್ತಾರೆ. ಅಷ್ಟು ಮಾತ್ರವಲ್ಲದೆ ನಮ್ಮ ದೇಶದ ಒಂದು ವಿಶೇಷ ಹಳ್ಳಿಗೆ ಇಲ್ಲಿನ ಪುರುಷರಿಂದ ಗರ್ಭಿಣಿಯಾಗಲು ಯುರೋಪಿನ ಮಹಿಳೆಯರು ಇಲ್ಲಿಗೆ ಪ್ರವಾಸ ಬರುತ್ತಾರೆ. ಅಷ್ಟಕ್ಕೂ ಈ ಹಳ್ಳಿ ಎಲ್ಲಿದೆ, ಗರ್ಭ ಧರಿಸಲು ಇಲ್ಲಿಗೆಯೇ ಬರಲು ಕಾರಣವೇನು? ಈ ಎಲ್ಲದರ ಮಾಹಿತಿ ಇಲ್ಲಿದೆ.
ಕಾರ್ಗಿಲ್‌ನಿಂದ ಸುಮಾರು 70 ಕಿಮೀ ದೂರದಲ್ಲಿ ಲಡಾಖ್‌ನಲ್ಲಿ ಒಂದು ಗ್ರಾಮವಿದೆ. ಈ ಗ್ರಾಮವನ್ನು ಆರ್ಯ ಕಣಿವೆ ಎಂದು ಕರೆಯಲಾಗುತ್ತದೆ. ಇಲ್ಲಿ ವಾಸಿಸುವ ಪುರುಷರಿಂದ ಗರ್ಭಿಣಿಯಾಗಲು ವಿದೇಶದಲ್ಲಿನ ಮಹಿಳೆಯರು ಇಲ್ಲಿಗೆ ಪ್ರವಾಸ ಬರುತ್ತಾರೆ. ಬ್ರೋಕ್ಪಾ ಎಂಬ ಬುಡಕಟ್ಟು ಜನಾಂಗದವರು ಲಡಾಖ್‌ನ ಆರ್ಯ ಕಣಿವೆಯಲ್ಲಿ ವಾಸಿಸುತ್ತಿದ್ದಾರೆ. ಈ ಬುಡಕಟ್ಟು ಜನಾಂಗದವರು ಅಲೆಕ್ಸಾಂಡರ್ ದಿ ಗ್ರೇಟ್ ಸೈನ್ಯದ ವಂಶಸ್ಥರು ಎಂದು ಹೇಳಲಾಗುತ್ತದೆ. ಅಲ್ಲದೆ ಅಲೆಕ್ಸಾಂಡರ್ ದಿ ಗ್ರೇಟ್ ಭಾರತವನ್ನು ತೊರೆದಾಗ ಆತನ ಕೆಲ ಸೈನ್ಯವು ಭಾರತದಲ್ಲಿ ಉಳಿದಿತ್ತು. ಮತ್ತು ಅವರ ವಂಶಸ್ಥರು ಇನ್ನೂ ಭಾರತದಲ್ಲಿದ್ದಾರೆ ಎಂದು ಹೇಳಲಾಗುತ್ತದೆ. ಈ ಜನಾಂಗದ ಪುರುಷರಿಂದ ಗರ್ಭ ಧರಿಸಿದರೆ ಉತ್ತಮ ಮೈಕಟ್ಟು ಹಾಗೂ ಶಾರೀರಿಕ ರಚನೆ, ನೀಲಿ ಕಣ್ಣುಗಳು ಹಾಗೂ ಸದೃಢ ದೇಹದಿಂದ ಮಗು ಜನಿಸುತ್ತದೆ ಎಂಬುದು ಯುರೋಪ್ ಮಹಿಳೆಯರ ನಂಬಿಕೆ. ಇದೇ ಕಾರಣಕ್ಕೆ ಯುರೋಪಿನ ಮಹಿಳೆಯರು ಇಲ್ಲಿಗೆ ಬರುತ್ತಾರೆ. ಗರ್ಭಿಣಿಯಾದ ನಂತರ, ವಿದೇಶಿ ಮಹಿಳೆಯರು ತಮ್ಮ ದೇಶಕ್ಕೆ ಮರಳುತ್ತಾರೆ. ಇದಕ್ಕಾಗಿ ವಿದೇಶಿ ಮಹಿಳೆಯರು ಈ ಪುರುಷರಿಗೆ ಹಣವನ್ನು ಕೂಡಾ ಪಾವತಿಸುತ್ತಾರೆ ಎಂದು ಹೇಳಲಾಗುತ್ತದೆ.
What? Pregnancy tourism in Ladakh, India 🙄🙄🙄🙄#pregnancy #women #Ladakh #indiapic.twitter.com/B1OanMOmOY
— Devendra Kumar Saini (@dks6720) August 12, 2023
ಈ ಕುರಿತ ಪೋಸ್ಟ್ ಒಂದನ್ನು ದೇವೇಂದ್ರ ಕುಮಾರ್ ಸೈನಿ(Devendra Kumar Saini) ಎಂಬವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಭಾರತದ ಲಡಾಖ್‌ನಲ್ಲಿ ಗರ್ಭಧಾರಣೆಯ ಪ್ರವಾಸೋದ್ಯಮ ಇದೆ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ. ವೈರಲ್ ವಿಡಿಯೋದಲ್ಲಿ ವ್ಯಕಿಯೊಬ್ಬರು ಲಡಾಖ್ ನಲ್ಲಿರುವ ಗರ್ಭಧಾರಣೆಯ ಪ್ರವಾಸೋದ್ಯಮ ಬಗ್ಗೆ ವಿವರಿಸುತ್ತಿರುವ ದೃಶ್ಯವನ್ನು ಕಾಣಬಹುದು.
ಇದನ್ನೂ ಓದಿ: ಪೊಲೀಸ್ ಪರೀಕ್ಷೆ ಬರೆಯಲು ಹೋದ ಗಂಡ, ಬಾಯ್‌ಫ್ರೆಂಡನ್ನು ಬೆಡ್‌ರೂಮ್‌ಗೆ ಕರೆಸಿದ ಹೆಂಡ್ತಿ, ಮುಂದೇನಾಯ್ತು
ಆಗಸ್ಟ್ 23 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಇದು ನಿಜವೇ’ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಇನ್ನೊಬ್ಬ ಬಳಕೆದಾರರು ‘ ಅರೇ ಇದೇನಿದು ಎಂದು ಹೇಳಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ