ಪಾತ್ರೆಯೊಳಗೆ ತಲೆ ಸಿಲುಕಿ 5 ಗಂಟೆಗಳ ಕಾಲ ಚಿರತೆಯ ಪರದಾಟ; ಅರಣ್ಯಾಧಿಕಾರಿಗಳಿಂದ ರಕ್ಷಣೆ

|

Updated on: Mar 05, 2024 | 3:28 PM

ಘಟನೆಯ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆ ಗಂಟೆಗಟ್ಟಲೆ ಹರಸಾಹಸಪಟ್ಟು ಸಂಕಷ್ಟದಿಂದ ಪಾರಾಗಲು ಯತ್ನಿಸಿದೆ. ಆದರೆ, ಅರಣ್ಯಾಧಿಕಾರಿಗಳು ಮಧ್ಯಪ್ರವೇಶಿಸಿ, ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿ ನಂತರ ಎಚ್ಚರಿಕೆಯಿಂದ ಚಿರತೆಯನ್ನು ರಕ್ಷಿಸಿದ್ದಾರೆ.

ಪಾತ್ರೆಯೊಳಗೆ ತಲೆ ಸಿಲುಕಿ 5 ಗಂಟೆಗಳ ಕಾಲ ಚಿರತೆಯ ಪರದಾಟ; ಅರಣ್ಯಾಧಿಕಾರಿಗಳಿಂದ ರಕ್ಷಣೆ
ಪಾತ್ರೆಯೊಳಗೆ ತಲೆ ಸಿಲುಕಿ 5 ಗಂಟೆಗಳ ಕಾಲ ಚಿರತೆಯ ಪರದಾಟ
Image Credit source: Twitter
Follow us on

ಆಹಾರ ಹುಡುಕಿಕೊಂಡು ಬಂದ ಚಿರತೆಯೊಂದರ ತಲೆ ಪಾತ್ರೆಯೊಳಗೆ ಸಿಲುಕಿಕೊಂಡು ಒದ್ದಾಡಿರುವ ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ನಡೆದಿದೆ. ಕಾಡು ನಾಶವಾಗುತ್ತಿದ್ದಂತೆ ಆಹಾರ ಅರಸಿಕೊಂಡು ಪ್ರಾಣಿಗಳು ನಾಡಿನತ್ತ ಬರುವುದು ಸಾಮಾನ್ಯವಾಗಿದೆ. ಅದರಂತೆ ಈ ಚಿರತೆಯ ಧುಲೆ ಜಿಲ್ಲೆಯ ಹಳ್ಳಿಯೊಂದಕ್ಕೆ ಬಂದಿದೆ. ದನದ ಕೊಟ್ಟಿಗೆ ಪ್ರವೇಶಿಸುತ್ತಿದ್ದಂತೆ ಲೋಹದ ಪಾತ್ರೆಯೊಳಗೆ ತಲೆ ಹಾಕಿದೆ. ಪಾತ್ರೆಯೊಳಗೆ ತಲೆ ಸಿಲುಕಿ 5 ಗಂಟೆಗಳ ಕಾಲ ಚಿರತೆ ಒದ್ದಾಡಿದೆ. ಬಳಿಕ ಈ ಗಂಡು ಚಿರತೆಯನ್ನು ಅರಣ್ಯಾಧಿಕಾರಿಗಳು ಯಶಸ್ವಿಯಾಗಿ ರಕ್ಷಿಸಿದ್ದಾರೆ.

ಘಟನೆಯ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಚಿರತೆ ಗಂಟೆಗಟ್ಟಲೆ ಹರಸಾಹಸಪಟ್ಟು ಸಂಕಷ್ಟದಿಂದ ಪಾರಾಗಲು ಯತ್ನಿಸಿದೆ. ಆದರೆ, ಅರಣ್ಯಾಧಿಕಾರಿಗಳು ಮಧ್ಯಪ್ರವೇಶಿಸಿ, ಚಿರತೆಗೆ ಅರಿವಳಿಕೆ ಚುಚ್ಚುಮದ್ದು ನೀಡಿ, ಪ್ರಜ್ಞೆ ತಪ್ಪಿಸಿ ನಂತರ ಎಚ್ಚರಿಕೆಯಿಂದ ಚಿರತೆಯನ್ನು ರಕ್ಷಿಸಿದ್ದಾರೆ.

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಇದನ್ನೂ ಓದಿ: ಬೆಂಗಳೂರಿನಲ್ಲಿದೆ ಫೇಮಸ್ ಹೋಮ್ ಮೇಡ್ ಐಸ್ಕ್ರೀಮ್, ಇದು ಕಾಲೇಜು ಮಕ್ಕಳ ಫೇವರೇಟ್ ಸ್ಪಾಟ್

ಫೆಬ್ರವರಿ 29 ರಂದು ಕೇಂದ್ರ ಪರಿಸರ ಸಚಿವಾಲಯ ಬಿಡುಗಡೆ ಮಾಡಿದ ‘ಭಾರತದಲ್ಲಿ ಚಿರತೆಗಳ ಸ್ಥಿತಿ, 2022’ ವರದಿಯ ಪ್ರಕಾರ, ಭಾರತದಲ್ಲಿ ಅಂದಾಜು 1 3,874 ಚಿರತೆಗಳಿವೆ . ಮಧ್ಯಪ್ರದೇಶವು ದೇಶದಲ್ಲೇ ಅತಿ ಹೆಚ್ಚು ಚಿರತೆಗಳನ್ನು ಹೊಂದಿದೆ ಎಂದು ವರದಿಯಿಂದ ತಿಳಿದುಬಂದಿದೆ.

ಇನ್ನಷ್ಟು ವೈರಲ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ