‘ರೆಡ್​ ರೆಡ್ ಆ್ಯಪಲ್’ ಹಾಡಿನಿಂದ ಸ್ಕೂಲ್​ ಟೀಚರ್​ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ

ಬಿಕ್ಕಿ ಶ್ರೀನಿವಾಸುಲು ಎಂಬುವವರು ಆರು ವರ್ಷಗಳ ಹಿಂದೆ ‘ಆ್ಯಪಲ್ ಆ್ಯಪಲ್ ರೆಡ್​ ರೆಡ್​ ಆ್ಯಪಲ್’ ಹಾಡನ್ನು ಮಾಡಿದ್ದರು. ಅವರು ಆಂಧ್ರ ಪ್ರದೇಶದ ಅನಂತಪುರದ ಕಲ್ಯಾಣ ದುರ್ಗ ಮಂಡಲದ ಎಂಪಿಪಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ‘ಆ್ಯಪಲ್ ಆ್ಯಪಲ್’ ಹಾಡಿನಿಂದ ಅವರಿಗೆ ಭರ್ಜರಿ ಹಣ ಸಿಕ್ಕಿದೆ.

‘ರೆಡ್​ ರೆಡ್ ಆ್ಯಪಲ್’ ಹಾಡಿನಿಂದ ಸ್ಕೂಲ್​ ಟೀಚರ್​ ಗಳಿಸಿದ್ದು ಎಷ್ಟು ಕೋಟಿ ಗೊತ್ತಾ? ಕೇಳಿದ್ರೆ ಶಾಕ್ ಆಗ್ತೀರಾ
ವೈರಲ್ ವಿಡಿಯೋ
Follow us
 ಶ್ರೀಲಕ್ಷ್ಮೀ ಎಚ್
| Updated By: ರಾಜೇಶ್ ದುಗ್ಗುಮನೆ

Updated on: Mar 05, 2024 | 1:05 PM

ಸೋಶಿಯಲ್ ಮೀಡಿಯಾ ಯುಗದಲ್ಲಿ ಯಾವುದು ವೈರಲ್ ಆಗುತ್ತದೆ ಎಂದು ಹೇಳೋಕೆ ಸಾಧ್ಯವಿಲ್ಲ. ಯಾವಾಗಲೋ ರಿಲೀಸ್ ಆದ ಹಾಡುಗಳು ಈಗ ವೈರಲ್ ಆದ ಉದಾಹರಣೆ ಇದೆ. ‘ಕರಿಮಣಿ ಮಾಲಿಕ’ ಹಾಡು ರಿಲೀಸ್ ಆಗಿ ಹಲವು ವರ್ಷಗಳು ಕಳೆದಿವೆ. ಅದು ಈಗ ಮತ್ತೆ ಮುನ್ನೆಲೆಗ ಬಂದಿದೆ. ಅದೇ ರೀತಿ ಆರು ವರ್ಷಗಳ ಹಿಂದೆ ಅಪ್​ಲೋಡ್ ಆದ ‘ಆ್ಯಪಲ್ ಆ್ಯಪಲ್..’ (Apple Apple ) ಹಾಡು ಈಗ ವೈರಲ್ ಆಗಿದೆ. ಈ ಒಂದೇ ಹಾಡಿನಿಂದ ಕೋಟಿ ಕೋಟಿ ಗಳಿಕೆ ಆಗಿದೆ.

ಬಿಕ್ಕಿ ಶ್ರೀನಿವಾಸುಲು ಎಂಬುವವರು ಆರು ವರ್ಷಗಳ ಹಿಂದೆ ‘ಆ್ಯಪಲ್ ಆ್ಯಪಲ್ ರೆಡ್​ ರೆಡ್​ ಆ್ಯಪಲ್’ ಹಾಡನ್ನು ಮಾಡಿದ್ದರು. ಅವರು ಆಂಧ್ರ ಪ್ರದೇಶದ ಅನಂತಪುರದ ಕಲ್ಯಾಣ ದುರ್ಗ ಮಂಡಲದ ಎಂಪಿಪಿ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೆ ವಿಶೇಷ ರೀತಿಯಲ್ಲಿ ಪಾಠ ಹೇಳಿಕೊಡುವ ಕೆಲಸವನ್ನು ಮಾಡುತ್ತಿದ್ದಾರೆ. ಹಾಡಿನ ಮೂಲಕ, ಅಭಿನಯದ ಮೂಲಕ ಮಕ್ಕಳಿಗೆ ಇಂಗ್ಲಿಷ್ ಕಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಈ ರೀತಿ ಹಾಡಿನ ಮೂಲಕ ಶಿಕ್ಷಣ ನೀಡುವುದರಿಂದ ಮಕ್ಕಳಿಗೆ ಭಾಷೆಯ ಬಗ್ಗೆ ಬೇಗ ಜ್ಞಾನ ಬೆಳೆಯುತ್ತದೆ ಹಾಗೂ ಮನರಂಜನೆ ಎರಡೂ ಸಿಗುತ್ತದೆ ಎಂಬುದು ಬಿಕ್ಕಿ ಶ್ರೀನಿವಾಸುಲು ಅವರ ಆಲೋಚನೆ.

ಈ ರೀತಿ ಮಾಡಿದ ಹಾಡುಗಳಲ್ಲಿ ‘ಆ್ಯಪಲ್ ಆ್ಯಪಲ್ ರೆಡ್​ ರೆಡ್​ ಆ್ಯಪಲ್..’ ಹಾಡು ಕೂಡ ಒಂದು. ಸೇಬು, ಬಾಳೆ ಹಣ್ಣು ಮೊದಲಾದ ಹಣ್ಣುಗಳ ವಿವರಣೆ, ಅವುಗಳ ಬಣ್ಣ, ರುಚಿಯನ್ನು ವಿವರಿಸುವ ರೀತಿಯಲ್ಲಿ ಈ ಹಾಡು ಮೂಡಿ ಬಂದಿತ್ತು. ಇದನ್ನು ಮಕ್ಕಳ ಬಳಿ ಹಾಡಿಸಿ, ವಿಡಿಯೋ ಮಾಡಿ ಯೂಟ್ಯೂಬ್​ನಲ್ಲಿ ಹಾಕಿದ್ದರು ಅವರು. ಈ ಹಾಡು ಸಖತ್ ವೈರಲ್ ಆಗಿದೆ. ಈ ಒಂದೇ ಹಾಡು ಹಾಡು ಯೂಟ್ಯೂಬ್​ನಿಂದ ಬರೋಬ್ಬರಿ 189 ಕೋಟಿ ಬಾರಿ ವೀಕ್ಷಣೆ ಕಂಡಿದೆ.

ಶ್ರೀನಿವಾಸಲು ಅವರಿಗೆ ಈ ಹಾಡಿನಿಂದ ಬರೋಬ್ಬರಿ 33 ಕೋಟಿ ರೂಪಾಯಿ ಬಂದಿದೆ ಎಂದು ಹೇಳಲಾಗುತ್ತಿದೆ. ಇದರ ಜೊತೆಗೆ ‘ಬಟರ್​ಫ್ಲೈ ಬಟರ್​ಫ್ಲೈ’ ಹಾಡು ಕೂಡ ವೈರಲ್ ಆಗಿದ್ದು, ಈ ಹಾಡು 1.1 ಕೋಟಿ ಬಾರಿ ವೀಕ್ಷಣೆ ಕಂಡಿದೆ. ಅವರಿಗೆ ಯೂಟ್ಯೂಬ್​ನಲ್ಲಿ ಬರೋಬ್ಬರಿ 50 ಲಕ್ಷಕ್ಕೂ ಅಧಿಕ ಸಬ್​ಸ್ಕ್ರೈಬರ್ಸ್ ಇದ್ದಾರೆ ಅನ್ನೋದು ಇಲ್ಲಿ ಗಮನಿಸಬೇಕಾದ ವಿಚಾರ.

ಇದನ್ನೂ ಓದಿ: ‘ಕರಿಮಣಿಗೆ ಈಗ ಮತ್ತೆ ಬೆಲೆ ಬಂದಿದೆ’: ವೈರಲ್​ ಹಾಡಿಗೆ ಗುರುಕಿರಣ್ ಪ್ರತಿಕ್ರಿಯೆ

ಬಿಕ್ಕಿ ಶ್ರೀನಿವಾಸುಲು ಅವರು ಇಷ್ಟೊಂದು ಹಣ ಬಂದರೂ ಸುಮ್ಮನೆ ಕುಳಿತಿಲ್ಲ. ತಮ್ಮ ಯೂಟ್ಯೂಬ್​ನಲ್ಲಿ ವಿವಿಧ ರೀತಿಯ ವಿಡಿಯೋಗಳನ್ನು ಮಾಡಿ ಪೋಸ್ಟ್ ಮಾಡುವ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಮಕ್ಕಳ ಶಿಕ್ಷಣಕ್ಕೆ ಸಹಕಾರಿ ಆಗುತ್ತಿದ್ದಾರೆ. ಅವರ ಕಾರ್ಯಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ಸಿಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ