Viral Video : ಝೀಬ್ರಾ ಹಿಂಡಿನ ಕಾಲ್ತುಳಿತಕ್ಕೆ ಒಳಗಾದ ಸಿಂಹಿಣಿ, ಆಮೇಲೇನಾಯಿತು?

Zebra and Lioness : ಇದು ಸಿಂಹ-ಸಿಂಹಿಣಿ ಮತ್ತು ಝೀಬ್ರಾ ಗುಂಪುಗಳ ನಡುವೆ ನಡೆದ ಯುದ್ಧ. ಒಂದು ನಿಮಿಷದ ಈ ವಿಡಿಯೋ 60,000 ನೆಟ್ಟಿಗರನ್ನು ಸೆಳೆದಿದೆ. ನೋಡಿ ಈ ಕಾಳಗದಲ್ಲಿ ಮುಂದೇನಾಗುತ್ತದೆ ಎಂದು.

Viral Video : ಝೀಬ್ರಾ ಹಿಂಡಿನ ಕಾಲ್ತುಳಿತಕ್ಕೆ ಒಳಗಾದ ಸಿಂಹಿಣಿ, ಆಮೇಲೇನಾಯಿತು?
ಝೀಬ್ರಾ ದಾಳಿಗೆ ಒಳಗಾಗುವ ಮೊದಲು ಸಿಂಹಿಣಿ
Updated By: ಶ್ರೀದೇವಿ ಕಳಸದ

Updated on: Sep 09, 2022 | 11:59 AM

Viral Video : ಭಾನುವಾರದಂದು ಮಾಸಾಯ್ ಸೈಟಿಂಗ್ಸ್ ಎಂಬ ಯೂಟ್ಯೂಬ್​ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ತಾಂಜಾನಿಯಾದ ಸೆರೆಂಗೆಟಿ ರಾಷ್ಟ್ರೀಯ ಉದ್ಯಾನವನದಲ್ಲಿ ಸೆರೆಹಿಡಿದ ದೃಶ್ಯ ಇದಾಗಿದೆ. ಝೀಬ್ರಾಗಳು ಗುಂಪೊಂದು ಸಿಂಹಿಣಿಯ ಮೇಲೆ ದಾಳಿ ಮಾಡುವ ಈ ವಿಡಿಯೋ ನೋಡಿ ನೆಟ್ಟಿಗರು ಬೆರಗುಗೊಂಡಿದ್ದಾರೆ. ಸೆರೆಂಗೆಟಿಯಲ್ಲಿ ಸಿಂಹಗಳು ಝೀಬ್ರಾಗಳನ್ನು ಬೇಟೆಯಾಡುವಾಗ, ಸಿಂಹಿಣಿಯು ಅದಕ್ಕೆ ಅನುಕೂಲವಾಗುವ ರೀತಿಯಲ್ಲಿ ನಿಲ್ಲುತ್ತದೆ. ಇತ್ತ ಕಡೆಯಿಂದ ಓಡಿಬಂದ ಝೀಬ್ರಾಗಳ ದಾಳಿಗೆ ತಪ್ಪಿಸಿಕೊಳ್ಳಲಾಗದೆ ಅವುಗಳಿಂದ ಕಾಲ್ತುಳಿತಕ್ಕೆ ಒಳಗಾಗುತ್ತದೆ. ಈ ಇಡೀ ದೃಶ್ಯವನ್ನು ಒಂದು ನಿಮಿಷದ ಅವಧಿಯೊಳಗೆ ಅಡಕಗೊಳಿಸಲಾಗಿದೆ. ಮುಂದೇನಾಗುತ್ತದೆ ವಿಡಿಯೋ ನೋಡಿ.

 

ಇದನ್ನೂ ಓದಿ
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಇಡೀ ದೃಶ್ಯದಲ್ಲಿ ಈ ಜಾಗ ಯುದ್ಧಭೂಮಿಯಂತೆ ಕಾಣುತ್ತದೆ. ಎರಡು ಝೀಬ್ರಾಗಳನ್ನು ಹಿಡಿಯುವಲ್ಲಿ ಸಿಂಹಿಣಿ ಯಶಸ್ವಿಯಾಗುತ್ತದೆ.

‘ಈ ಸಿಂಹಗಳು ಬಹಳ ಅಪಾಯಕಾರಿ. ನಾನು ಸತ್ತ ಸಿಂಹವನ್ನು ನೋಡಲು ಕಾಯುತ್ತಿದ್ದೆ. ಆದರೆ ಅವುಗಳ ಹಸಿವು ಅವುಗಳನ್ನು ಎಷ್ಟೊಂದು ಆಕ್ರಮಣಕಾರಿಯನ್ನಾಗಿಸುತ್ತವೆಯಲ್ಲ’ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬರು, ‘ಅದ್ಭುತ! ಅಷ್ಟು ದೊಡ್ಡ ಹಿಂಡಿನ ಹಿಂದೆ ಓಡಿ ಬೇಟೆಯಾಡಿದವು ಸಿಂಹ-ಸಿಂಹಿಣಿಗಳು. ಸಿಂಹಿಣಿಯಂತೂ ಭರ್ಜರಿಯಾಗಿ ಬೇಟೆಯಾಡಿತು’ ಎಂದು ಅಚ್ಚರಿ ವ್ಯಕ್ತಪಡಿಸಿದ್ಧಾರೆ.

ಸುಮಾರು 60,000 ವೀಕ್ಷಣೆಗಳನ್ನು, ಸಾವಿರಾರು ಲೈಕ್ಸ್​ಗಳನ್ನು ಈ ವಿಡಿಯೋ ಪಡೆದಿದೆ.

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 11:57 am, Fri, 9 September 22