Trending : ಡ್ರೈವರ್ ಜೊತೆ ಧಾಬಾದಲ್ಲಿ ಸೈರಸ್ ಮಿಸ್ತ್ರಿ; ಹಳೆಯ ಫೋಟೋ ವೈರಲ್

Cyrus Mistry : ಇತ್ತೀಚೆಗೆ ಕಾರು ಅಪಘಾತದಲ್ಲಿ ನಿಧನರಾದ ಉದ್ಯಮಿ ಸೈರಸ್​ ಮಿಸ್ತ್ರಿ ಅವರ ಹಳೆಯ, ಫೋಟೋ ಇಲ್ಲಿದೆ. ಈ ಡಿಜಿಟಲ್​ ಯುಗ ಯಾವ ನೆನಪನ್ನೂ ಹೀಗೆ ಉಕ್ಕಿಸುತ್ತಲೇ ಇರುತ್ತದೆ.

Trending : ಡ್ರೈವರ್ ಜೊತೆ ಧಾಬಾದಲ್ಲಿ ಸೈರಸ್ ಮಿಸ್ತ್ರಿ; ಹಳೆಯ ಫೋಟೋ ವೈರಲ್
ತನ್ನ ಡ್ರೈವರ್​ ಜೊತೆ ಧಾಬಾ ಒಂದರಲ್ಲಿ ಊಟ ಮಾಡುತ್ತಿರುವ ಸೈರಸ್ ಮಿಸ್ತ್ರಿ
Follow us
TV9 Web
| Updated By: ಶ್ರೀದೇವಿ ಕಳಸದ

Updated on:Sep 08, 2022 | 5:11 PM

Trending : ಇತ್ತೀಚೆಗೆ ಕಾರು ಅಪಘಾತದಲ್ಲಿ ತೀರಿದ ಉದ್ಯಮಿ, ಟಾಟಾ ಸಮೂಹ ಸಂಸ್ಥೆಗಳ ಮಾಜಿ ಅಧ್ಯಕ್ಷ ಸೈರಸ್​ ಮಿಸ್ತ್ರಿಯವರ ಹಳೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸೈರಸ್​ ತಮ್ಮ ಡ್ರೈವರ್ ಜೊತೆ ಪ್ರಯಾಣದಲ್ಲಿದ್ದಾಗ ಧಾಬಾವೊಂದರಲ್ಲಿ ಒಟ್ಟಿಗೆ ಕುಳಿತು ಊಟ ಮಾಡುತ್ತಿರುವ ಫೋಟೋ ಇದಾಗಿದೆ. ‘ಸಾವಿರ ಶಬ್ದಗಳನ್ನು ಈ ಒಂದು ಫೋಟೋ ಹೇಳುತ್ತದೆ. ಸೈರಸ್ ಮಿಸ್ತ್ರಿಯವರ ಈ ಸರಳತನವನ್ನು ನೋಡಿ. ರಸ್ತೆ ಬದಿಯ ಧಾಬಾದಲ್ಲಿ ತಮ್ಮ ಡ್ರೈವರ್​ನೊಂದಿಗೆ ಊಟವನ್ನು ಆಸ್ವಾದಿಸುತ್ತಿದ್ಧಾರೆ. ಹೌದು, ಅವರು ವಿಮಾನ ಪ್ರಯಾಣಕ್ಕಿಂತ ರೋಡ್​ಟ್ರಿಪ್​ ಮತ್ತು ರಸ್ತೆಬದಿ ಆಹಾರವನ್ನು ಹೆಚ್ಚು ಇಷ್ಟಪಡುತ್ತಿದ್ದರು’ ಎಂಬ ಒಕ್ಕಣೆಯೊಂದಿಗೆ Parsi Zoroastrians Worldwide – The Hyderabadi Page ಈ ಫೋಟೋ ಹಂಚಿಕೊಂಡಿದೆ.

ಇದನ್ನೂ ಓದಿ
Image
Viral Video: ಭಾರತಕ್ಕೆ ಶುಭಕೋರಿದ ಪಾಕಿಸ್ತಾನದ ರಬಾಬ್ ಕಲಾವಿದ
Image
Viral Post: ವಿಶಿಷ್ಟ ಚೇತನ ಕೃಷ್ಣಪ್ಪ ರಾಥೋಡ್​ಗೆ ಸಹಾಯ ಹಸ್ತ ಚಾಚಿರುವ ಲಿಂಕ್​ಡಿನ್ನಿಗರು
Image
Viral Post : ಪಿಝಾ ಹಿಟ್ಟಿನ ಮೇಲೆ ನೇತಾಡುತ್ತಿರುವ ಶೌಚಾಲಯದ ಬ್ರಷ್!
Image
Viral Video: ನಾನೇ ನಾಳಿನ ನಂಬರ್ ಒನ್ ಮಿಸ್ಟರ್ ಶೆಫ್ ಮಿಯಾಂವ್!

ಈ ಫೋಟೋದಲ್ಲಿ ಮಿಸ್ತ್ರಿಯವರ ಉಡುಪನ್ನು ಗಮನಿಸಿ, ಸರಳವಾಗಿದೆ. ಈ ಫೋಟೋ ತೆಗೆದವರ ಬಗ್ಗೆ ಖಚಿತವಾದ ಮಾಹಿತಿ ಇಲ್ಲ. ಆದರೂ ಕೆಲವರು, 2016ರಲ್ಲಿ ಛಾಯಾಗ್ರಾಹಕ ಮೆಹ್ತೋ ಎನ್ನುವವರು ತೆಗೆದ ಫೋಟೋ ಎಂದು ಪ್ರತಿಕ್ರಿಯಿಸಿದ್ದಾರೆ.

ಈ ಪೋಸ್ಟ್​ ಅನ್ನು 1,02,000 ಜನರು ಇಷ್ಟಪಟ್ಟಿದ್ದಾರೆ. 160 ಜನ ಪ್ರತಿಕ್ರಿಯಿಸಿದ್ದಾರೆ. 74 ಜನರು ಮರುಹಂಚಿಕೊಂಡಿದ್ದಾರೆ.

ವ್ಯಕ್ತಿ ಕಣ್ಮುಂದೆ ಇರದಿದ್ದರೂ ವ್ಯಕ್ತಿಯ ಒಳ್ಳೆಯತನ, ಸರಳತನದಿಂದ ನೆನಪುಗಳು ಹೀಗೆ ಆಗಾಗ ತೇಲುತ್ತಿರುತ್ತವೆ. ಅದರಲ್ಲೂ ಇದು ಡಿಜಿಟಲ್​ ಯುಗ. ಎಲ್ಲವೂ ದಾಖಲಾಗುತ್ತಿರುತ್ತದೆ.

ಮತ್ತಷ್ಟು ಟ್ರೆಂಡಿಂಗ್​ ನ್ಯೂಸ್​ಗಾಗಿ ಕ್ಲಿಕ್ ಮಾಡಿ

Published On - 4:58 pm, Thu, 8 September 22