ಅಬ್ಬಾ ಎಂಥ ಗುಡುಗು! ಅಪ್ಪನನ್ನು ತಬ್ಬಿಹಿಡಿವ ಎಳೆಗೂಸಿನ ವಿಡಿಯೋ ವೈರಲ್

Thunder : ಇಷ್ಟೆಲ್ಲಾ ಆದರೂ ಆ ಅಪ್ಪ ಮಗುವಿನ ಮುಖವನ್ನು ನೋಡದೆ ಮೊಬೈಲಿನಲ್ಲಿಯೇ ಹುದುಗಿದ್ದಾನಲ್ಲಾ ಎಂದು ಕೆಲವರು. ಮುಗ್ಧತೆಯೇ ಸೌಂದರ್ಯ, ಪರಿಶುದ್ಧ ಆತ್ಮವಿದು ಎಂದಿದ್ದಾರೆ ಹಲವರು. ನೀವೇನಂತೀರಿ?

ಅಬ್ಬಾ ಎಂಥ ಗುಡುಗು! ಅಪ್ಪನನ್ನು ತಬ್ಬಿಹಿಡಿವ ಎಳೆಗೂಸಿನ ವಿಡಿಯೋ ವೈರಲ್
ಗುಡುಗಿನ ಶಬ್ದಕ್ಕೆ ಭಯಪಟ್ಟ ಮಗು ಅಪ್ಪನನ್ನು ತಬ್ಬಿ ಹಿಡಿಯುವುದು
Edited By:

Updated on: May 02, 2023 | 4:16 PM

Rain : ಅಪ್ಪ ಅಮ್ಮನೆಂದರೆ ಮಕ್ಕಳಿಗೆ ಭದ್ರ ಭಾವ. ಅದರಲ್ಲೂ ಎಳೆಗೂಸುಗಳಿಗಂತೂ ಅರೆಕ್ಷಣವೂ ಅವರ ತೋಳಿನಿಂದ ಇಳಿಯಲಾರವು. ಹಾಗಾಗಿ ಇಂದಿನ ಅಪ್ಪ ಅಮ್ಮಂದಿರು ಕೆಲಸ ಮಾಡುತ್ತಲೇ ಮಕ್ಕಳನ್ನು ಸಂಭಾಳಿಸಬೇಕಾಗುವುದು ಅನಿವಾರ್ಯ. ಇದೀಗ ವೈರಲ್ ಆಗಿರುವ ಈ ವಿಡಿಯೋ ಗಮನಿಸಿ. ಈ ಕೂಸು ಅಪ್ಪನ ಕಂಕುಳನ್ನೇರಿ ಕುಳಿತಿದೆ. ಅಪ್ಪ ಮೊಬೈಲಿನಲ್ಲಿ ಮಗ್ನನಾಗಿದ್ದಾನೆ. ಹೊರಗೆ ಮಳೆ ಸುರಿಯುತ್ತಿದೆ. ಗುಡುಗಿನ ಶಬ್ದ ಕೇಳಿಬರುತ್ತಿದ್ದಂತೆ ಹೌಹಾರಿದ ಮಗು ಭಯದಿಂದ ಅಪ್ಪನ ಎದೆಯನ್ನು ಅವುಚಿ ಕೊರಳಸುತ್ತ ಕೈಹಾಕಿ ಹಿಡಿದುಕೊಳ್ಳುತ್ತದೆ.

 

ಈ ವಿಡಿಯೋ ನೋಡಿ

ಆ ಪುಟ್ಟ ಬಾಯಿ ಮತ್ತು ಕಣ್ಣುಗಳು ಭಯಕ್ಕೆ ಸ್ಪಂದಿಸುವುದನ್ನು ಗಮನಿಸಿದಿರಾ? ಈತನಕ ಸುಮಾರು 80,000 ಜನರು ಈ ವಿಡಿಯೋ ನೋಡಿದ್ದಾರೆ. 2,800 ಜನರು ಇಷ್ಟಪಟ್ಟಿದ್ದಾರೆ. ಸುಮಾರು 250ಕ್ಕಿಂತಲೂ ಹೆಚ್ಚು ಜನ ರೀಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ : ಪ್ರಜ್ಞೆ ತಪ್ಪಿದ ಚಾಲಕ; 66 ಜನರನ್ನು ಉಳಿಸಿದ 7ನೇ ತರಗತಿಯ ಬಾಲಕನ ವಿಡಿಯೋ ವೈರಲ್

ಸೌಂದರ್ಯ ಎನ್ನುವುದು ಮುಗ್ಧತೆಯಲ್ಲಿದೆ, ಪರಿಶುದ್ಧ ಆತ್ಮವಿದು ಎಂದಿದ್ದಾರೆ ಒಬ್ಬ ನೆಟ್ಟಿಗರು. ಅಪ್ಪನೆಂದರೆ ಆನೆಯ ಬಲ ಎಂದಿದ್ದಾರೆ ಮತ್ತೊಬ್ಬರು. ನಾನು ಇಂಥ ಅಪ್ಪುಗೆಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದಿದ್ದಾರೆ ಮತ್ತೂ ಒಬ್ಬರು. ಅಪ್ಪಿಕೊಳ್ಳುವ ಮೊದಲು ಅಪ್ಪನ ಮುಖವನ್ನು ಅದು ಎಷ್ಟು ಛಂದ ನೋಡುತ್ತದೆ ಗಮನಿಸಿದ್ದೀರಾ ಎಂದಿದ್ದಾರೆ ಮಗದೊಬ್ಬರು.

ಇದನ್ನೂ ಓದಿ : ನಾಯಿಗಳ ಈ ಪಂದ್ಯಕ್ಕೆ ಬೆಕ್ಕೇ ರೆಫರಿ; ನೆಟ್ಟಿಗರ ಗಮನ ಸೆಳೆದ ಈ ವಿಡಿಯೋ ನೋಡಿ

ಇಷ್ಟೆಲ್ಲಾ ಆದರೂ ಆ ಅಪ್ಪ ಮಗುವಿನ ಮುಖವನ್ನು ನೋಡದೆ ಮೊಬೈಲಿನಲ್ಲಿಯೇ ಹುದುಗಿದ್ದಾನಲ್ಲಾ! ಎಂದಿದ್ದಾರೆ ಇನ್ನೊಬ್ಬರು. ಇಂಥ ಎಳೆ ಮಕ್ಕಳಿಗಷ್ಟೇ ಯಾಕೆ ಅಪ್ಪನೆಂದರೆ ಸೂಪರ್ ಹೀರೋನೇ ಸರಿ ಎಂದಿದ್ದಾರೆ ಹಲವಾರು ಜನರು.

ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?

ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 4:14 pm, Tue, 2 May 23