Viral Video : ಈ ಪುಟ್ಟಮಕ್ಕಳ ನೌಟಂಕಿ ಹೇಳಹೊರಟೆ ಒಂದೆರಡಲ್ಲ. ಅಪ್ಪನ ಬಳಿ ಒಂದು ರೀತಿ, ಅಮ್ಮನ ಬಳಿ ಒಂದು ರೀತಿ ವರ್ತಿಸಿ ಇಬ್ಬರ ನಡುವೆಯೂ ಜಗಳ ತಂದಿಡುವ ಮಹಾನ್ ತರಲೆಗಳು. ಅಷ್ಟೇ ಯಾಕೆ ಹೊರಗಿನವರೊಂದಿಗೆ ಇರುವ ರೀತಿಯಂತೂ ಹೇಳುವುದೇ ಬೇಡ. ಈ ಮಕ್ಕಳಷ್ಟೂ ನಯ ನಾಜೂಕಿನವರು ಈ ಜಗತ್ತಿನಲ್ಲಿಯೇ ಇಲ್ಲವೇನೋ ಎಂಬಂತೆ ವರ್ತಿಸಿಬಿಡುತ್ತವೆ. ಈ ಪುಟ್ಟಿಯ ವಿಡಿಯೋ ನೋಡಿ. ಇದೀಗ ಇದು ವೈರಲ್ ಆಗಿದೆ. ಅಮ್ಮ ಎದುರಿಗಿದ್ದಾಗ ಚಂಡಿ ಹಿಡಿಯುತ್ತಾಳೆ. ಅಪ್ಪ ಎದುರಿದ್ದರೆ ಮೆತ್ತನ್ನ ಮಳ್ಳಿಯಾಗುತ್ತಾಳೆ. 8 ಲಕ್ಷಕ್ಕಿಂತಲೂ ಹೆಚ್ಚಿನ ಜನ ಈ ವಿಡಿಯೋ ಇಷ್ಟಪಟ್ಟಿದ್ದಾರೆಂದರೆ ಅಂಥದ್ದೇನಿದೆ ಮಜಾ ಇದರಲ್ಲಿ?
ನೆಟ್ಟಿಗರು ಈ ವಿಡಿಯೋ ನೋಡಿ ವಿವಿಧ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ. ನಾನಂತೂ ಏಳುಬಾರಿ ಈ ವಿಡಿಯೋ ನೋಡಿದೆ ಎಂದಿದ್ದಾರೆ ಒಬ್ಬರು. ನನ್ನ ಮಗಳೂ ಹೀಗೇ! ಅಪ್ಪನೆದುರು ಹೀಗೇ ಇರುತ್ತಾಳೆ, ನನ್ನೆದುರು ಮಾತ್ರ ಹೀಗೆಯೇ ಆಡುತ್ತಾಳೆ ಎಂದಿದ್ದಾರೆ ಮತ್ತೊಬ್ಬರು. ಅಪ್ಪನನ್ನು ಮಾತ್ರ ಬಹಳ ಸರಿಯಾಗಿ ಟ್ರೀಟ್ ಮಾಡುತ್ತಾರೆ ಈ ಮಕ್ಕಳು ಎಂದಿದ್ಧಾರೆ ಮಗದೊಬ್ಬರು.
ಎಂಥ ಮುದ್ದು ವಿಡಿಯೋ ಅಲ್ವಾ?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ
Published On - 4:58 pm, Tue, 27 September 22