Video: ನನ್ನ ಅಪ್ಪ ಸುರಸುಂದರ, ಹೇಗಿದೆ ನನ್ನ ಅಪ್ಪನಿಗೆ ಮಾಡಿದ ಮೇಕಪ್​​​​

ಮಕ್ಕಳ ಮುಗ್ಧತೆ ಹಾಗೂ ಪ್ರಾಮಾಣಿಕತೆ ಎಲ್ಲರಿಗೂ ಇಷ್ಟ. ಈ ಪುಟಾಣಿಗಳ ತುಂಟಾಟಗಳನ್ನು ನೋಡಿದಾಗ ಅಪ್ಪಿ ಮುದ್ದಾಡುವ ಎಂದೆನಿಸುತ್ತದೆ. ಹೌದು, ಈ ಪುಟ್ಟ ಕಂದಮ್ಮಗಳ ಆಟ ತುಂಟಾಟದ ವಿಡಿಯೋಗಳು ನೆಟ್ಟಿಗರಿಗೆ ಸಹಜವಾಗಿಯೇ ಇಷ್ಟವಾಗುವುದಿದೆ. ಇದೀಗ ಇಂತಹದ್ದೇ ವಿಡಿಯೋ ವೈರಲ್ ಆಗಿದ್ದು, ಪುಟಾಣಿಯೊಂದು ತನ್ನ ತಂದೆಗೆ ಮೇಕಪ್ ಮಾಡಿ ಆ ಬಳಿಕ ಕುಣಿದು ಕುಪ್ಪಳಿಸಿದೆ. ಈ ಕುರಿತಾದ ಸ್ಟೋರಿ ಇಲ್ಲಿದೆ ನೋಡಿ.

Video: ನನ್ನ ಅಪ್ಪ ಸುರಸುಂದರ, ಹೇಗಿದೆ ನನ್ನ ಅಪ್ಪನಿಗೆ ಮಾಡಿದ ಮೇಕಪ್​​​​
ಅಪ್ಪನಿಗೆ ಮೇಕಪ್ ಮಾಡೋದ್ರಲ್ಲಿ ಬ್ಯುಸಿ ಈ ಪುಟಾಣಿ
Image Credit source: Instagram

Updated on: Jul 28, 2025 | 2:45 PM

ಹೆಣ್ಣು ಮಕ್ಕಳಿಗೆ ಅಪ್ಪನೆಂದರೆ (father) ಎಲ್ಲವೂ ಆಗಿರುತ್ತಾನೆ. ತಂದೆಗೂ ಮಗಳೆಂದರೆ ಪ್ರಪಂಚ. ಹೌದು ತಾಯಿಯು ಮಗುವನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟುಕೊಂಡರೆ, ತಂದೆ ಮಾತ್ರ ತನ್ನ ಹೆಗಲ ಮೇಲೆ ಕೂರಿಸಿಕೊಂಡು ಪ್ರಪಂಚ ತೋರಿಸುತ್ತಾನೆ. ಹೀಗಾಗಿ ಅಪ್ಪ ಅಂದ್ರೆ ಆಕಾಶ. ಇನ್ನು ಮಗಳು ಏನು ಕೇಳಿದರೂ ಬೇಡ ಎನ್ನದೇ ಅಪ್ಪ ಹೀರೋನೇ. ಈ ಅಪ್ಪ ಮಗಳ ಸುಂದರ ಬಾಂಧವ್ಯಕ್ಕೆ ಸಾಕ್ಷಿಯಾಗುವ ಹೃದಯಸ್ಪರ್ಶಿ ವಿಡಿಯೋಗಳು ಸೋಷಿಯಲ್‌ ಮಿಡಿಯಾದಲ್ಲಿ ಆಗಾಗ್ಗೆ ಹರಿದಾಡುತ್ತಿರುತ್ತವೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ತನ್ನ ಅಪ್ಪನಿಗೆ ಮೇಕಪ್ (makeup) ಮಾಡಿ ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಿದ್ದಾಳೆ ಪುಟಾಣಿ. ಹೌದು, ಮುದ್ದಿನ ಮಗಳು ತನ್ನ ತಂದೆಗೆ ಮೇಕಪ್ ಮಾಡುವ ಹೃದಯಸ್ಪರ್ಶಿ ವಿಡಿಯೋವೊಂದು ಸಖತ್ ವೈರಲ್ ಆಗುತ್ತಿದೆ.

tathoi234 ಹೆಸರಿನಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಪುಟಾಣಿಯೊಬ್ಬಳು ತನ್ನ ಅಪ್ಪನಿಗೆ ಮೇಕಪ್ ಮಾಡುವುದನ್ನು ನೋಡಬಹುದು. ತಂದೆ ಮಾತ್ರ ಮಗಳು ಏನು ಮಾಡುತ್ತಾಳೆ ನೋಡುವ ಎಂದುಕೊಂಡು ಸುಮ್ಮನೆ ಕುಳಿತುಕೊಂಡಿದ್ದಾನೆ. ಈ ಪುಟಾಣಿಯೂ ಅಪ್ಪನ ಮುಖಕ್ಕೆ ಪೌಡರ್ ಹಾಕಿ ಲೈಟ್ ಆಗಿ ಮೇಕಪ್ ಮಾಡುವುದನ್ನು ನೋಡಬಹುದು. ಆ ಬಳಿಕ ತನ್ನ ಪುಟ್ಟ ಕೈಗಳಿಂದ ಹಾರ, ಹಣೆಗೊಂದು ಬಿಂದಿ ಇಡುತ್ತಾಳೆ. ತನ್ನ ಮೇಕಪ್  ಮುಗಿಯುತ್ತಿದ್ದಂತೆ ಈ ಪುಟ್ಟ ಹುಡುಗಿ ಸಂತೋಷದಿಂದ ಕುಣಿಯುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ಇದನ್ನೂ ಓದಿ
ಇದು ಮಾಮೂಲಿ ಕಿಂಡರ್ ಗಾರ್ಡನ್ ಅಲ್ಲ, ಜೀವನ ಪಾಠ ಕಲಿಸುವ ಶಾಲೆ
ಪ್ರವಾಸಿ ತಾಣದಲ್ಲಿ ಬಿದ್ದ ಕಸ ಹೆಕ್ಕಿ ಸ್ವಚ್ಛತೆಯ ಅರಿವು ಮೂಡಿಸಿದ ವಿದೇಶಿಗ
ಏರ್​ಪೋರ್ಟ್ ಇಲ್ಲ, ಕರೆನ್ಸಿ ಇಲ್ಲ, ಆದರೂ ಶ್ರೀಮಂತ ದೇಶ
ಡೆಲಿವರಿ ಬಾಯ್ ಆಗಿ ದಿನನಿತ್ಯ ದಣಿದಿದ್ದೇನೆ, ಈ ಬದುಕಿನ ಆಯ್ಕೆಗೆ ನಾನೇ ಕಾರಣ

ವೈರಲ್ ವಿಡಿಯೋ ಇಲ್ಲಿದೆ ನೋಡಿ

ಇದನ್ನೂ ಓದಿ: Viral: ಮನೆಯವರ ಬೆಂಬಲವಿಲ್ಲ, ಮಕ್ಕಳನ್ನು ಬೆಳೆಸುವಾಗ ಕೈಯಲ್ಲಿ ಎಷ್ಟು ದುಡ್ಡಿದ್ರೂ ಸಾಲಲ್ಲ ಎಂದ ದಂಪತಿ

ಈ ವಿಡಿಯೋವೊಂದು 5.9 ಮಿಲಿಯನ್‌ಗೂ ಅಧಿಕ ವೀಕ್ಷಣೆ ಪಡೆದುಕೊಂಡಿದ್ದು ಬಳಕೆದಾರರೊಬ್ಬರು, ಅಪ್ಪ ಮಗಳ ಬಾಂಧವ್ಯ ನೋಡಲು ಎರಡು ಕಣ್ಣು ಸಾಲದು ಎಂದಿದ್ದಾನೆ. ಮತ್ತೊಬ್ಬರು, ನಿಮ್ಮ ಮಗಳು ದೊಡ್ಡವಳಾದ ಬಳಿಕ ಬ್ಯೂಟಿಷನ್ ಆಗುವಂತೆ ಕಾಣುತ್ತಿದೆ ಎಂದು ತಮಾಷೆ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, ಮಗಳು ಏನೇ ಮಾಡಿದ್ರು ಸಹಿಸಿಕೊಳ್ಳಲು ಅಪ್ಪನಿಗೆ ಮಾತ್ರ ಸಾಧ್ಯ. ನನ್ನ ಬಾಲ್ಯವನ್ನು ನೆನಪಿಸುವಂತಿದೆ ಈ ವಿಡಿಯೋ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ