
ವೈದ್ಯರು (doctor) ಮಾಡುವ ಒಂದೊಂದು ಕೆಲಸವೂ ನಮ್ಮ ಹೃದಯವನ್ನು (heartfelt story) ಮುಟ್ಟುತ್ತದೆ. ವೈದ್ಯರು ಜೀವ ಹಾಗೂ ಜೀವನವನ್ನು ಕಾಪಾಡುವ ದೇವರು. ಒಬ್ಬ ವ್ಯಕ್ತಿಯ ಜೀವವನ್ನು ಕಾಪಾಡಲು ಏನೆಲ್ಲ ಕಷ್ಟಪಡುತ್ತಾರೆ. ಇಂತಹ ವೈದ್ಯರಿಗೆ ಹೇಗೆ ಧನ್ಯವಾದ ಹೇಳಿದ್ರು ಸಾಲುವುದಿಲ್ಲ. ವೈದ್ಯರು ಮಾಡಿದ ಸಹಾಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ವೈದ್ಯರು ಕೂಡ ಅಷ್ಟೇ ರೋಗಿಗಳ ಮೇಲೆ ಕಾಳಜಿ ಹಾಗೂ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ. ಇದೀಗ ಇಂತಹದೇ ಒಂದು ಘಟನೆ ನಡೆದಿದೆ. ಪುಟ್ಟ ಹುಡುಗಿ ತನ್ನ ಜೀವ ಕಾಪಾಡಿದ ವೈದ್ಯರಿಗೆ ತನ್ನ ಕೈಯಾರೆ ಮಾಡಿದ ಗಿಫ್ಟ್ ನೀಡಿದ್ದಾಳೆ. ಈ ಬಗ್ಗೆ ವೈದ್ಯರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದೀಗ ಈ ವಿಡಿಯೋ ಭಾರೀ ವೈರಲ್ ಆಗಿದೆ. ಛತ್ತೀಸ್‌ಗಢದ ಮಕ್ಕಳ ವೈದ್ಯರಾದ ಡಾ. ತನ್ಮಯ್ ಮೋತಿವಾಲಾ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದ ಪುಟ್ಟ ಹುಡುಗಿಯ ಅನಿರೀಕ್ಷಿತ ಮತ್ತು ಅತ್ಯಂತ ಹೃದಯಸ್ಪರ್ಶಿ ಉಡುಗೊರೆ ಪಡೆದು ಈ ಭಾವುಕ ಪೋಸ್ಟ್ನ್ನು ಎಕ್ಸ್ನಲ್ಲಿ ಹಂಚಿಕೊಂಡಿದ್ದಾರೆ.
ಡಾ. ತನ್ಮಯ್ ಮೋತಿವಾಲಾ ಅವರ ಮದುವೆಗೆ ಬರಲು ಸಾಧ್ಯವಾಗದ ಕಾರಣ ಈ ಪುಟ್ಟ ಹುಡುಗಿ ತಾನೇ ಕೈಯಿಂದ ಮಾಡಿದ ಉಡುಗೊರೆಯನ್ನು ನೀಡಿದ್ದಾಳೆ. ಈ ಬಗ್ಗೆ ಎಕ್ಸ್ನಲ್ಲಿ ವಿವರಿಸಿದ್ದಾರೆ. ‘ನನ್ನ ಹೃದಯ ತುಂಬಿ ಬಂದಿದೆ. ಇಂದು ಸಂತೋಷದ ಕಣ್ಣೀರು ಬಂತು. ನನಗೆ ತುಂಬಾ ಖುಷಿ ನೀಡಿದ ಉಡುಗೊರೆ ಒಂದು ನಮ್ಮ ಮನೆಗೆ ಬಂದಿತು. ನಾನು ಅವಳನ್ನು ನನ್ನ ಮದುವೆಗೆ ಆಹ್ವಾನಿಸಿದ್ದೆ ಆದರೆ ಅವಳಿಗೆ ಮದುವೆಗೆ ಬರಲು ಸಾಧ್ಯವಾಗಿಲ್ಲ. ಬದಲಾಗಿ, ಅವಳು ನನಗೆ ಸುಂದರವಾದ ತಾನೇ ಕೈಯಾರ ಮಾಡಿದ ಉಡುಗೊರೆಗಳನ್ನು ಕಳುಹಿಸಿದಳು. ಖುಷಿ ನನ್ನ ರೋಗಿ, ಆದರೆ ಅದಕ್ಕಿಂತ ಹೆಚ್ಚಾಗಿ, ಅವಳು ಆತ್ಮೀಯ ಸ್ನೇಹಿತೆ. ಧೈರ್ಯಶಾಲಿ ಕ್ಯಾನ್ಸರ್ ನಿಂದ ಬದುಕುಳಿದವಳು. ಜೀವನದ ಬಗ್ಗೆ ನನಗೆ ಎಂದಿಗಿಂತಲೂ ಹೆಚ್ಚು ಕಲಿಸಿದ ಮಗು’ ಎಂದು ಹೇಳಿದ್ದಾರೆ.
My heart is full. Had happy tears today ❤️
I received a package from Khushi. A surprise that touched me deeply.
I had invited her to my wedding, but she couldn’t make it. Instead, she sent me a set of beautiful handmade gifts.Yes, Khushi is my patient but more than that, she’s… pic.twitter.com/owSKdJboQn
— Dr. Tanmay Motiwala (@Least_ordinary) August 1, 2025
ಡಾ. ಮೋತಿವಾಲಾ ಉಡುಗೊರೆಗಳ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಅವಳ ಜತೆಗೆ ಕಳೆದ ದಿನಗಳನ್ನು ಕೂಡ ನೆನಪಿಸಿಕೊಂಡರು. ಅವಳ ಜತೆಗಿನ ಕಳೆದು ನಗು, ಜತೆಗೆ ಆಟವಾಡಿದ ಕ್ಷಣ ಎಲ್ಲವೂ ನನ್ನ ಮುಂದೆ ಬಂತು. DONKEY = TANMAY ಎಂಬ ಕಥೆಗಳು, ನಂತರ ಅದು ನಮ್ಮ ಅಡ್ಡಹೆಸರಾಗಿ ಬದಲಾಗಿದೆ ಎಂದು ಹೇಳಿಕೊಂಡಿದ್ದಾರೆ. 2022ರಲ್ಲಿ ಆಕೆ ನಮ್ಮ ಆಸ್ಪತ್ರೆಗೆ ಕ್ಯಾನ್ಸರ್ ರೋಗಿಯಾಗಿ ಬಂದಿದ್ದಳು. ಎದೆಯಲ್ಲಿ ಗೆಡ್ಡೆಯಾಗಿ, ಭಾರದ ಹೃದಯದಿಂದ ಆಸ್ಪತ್ರೆಗೆ ಬಂದಿದ್ದಳು ಈ ಐದು ವರ್ಷದ ಖುಷಿ. ನಾನು ಅವಳೊಂದಿಗೆ ಮಾತನಾಡಲು, ತಮಾಷೆ ಮಾಡಲು, ನನ್ನ ಫೋನ್‌ನಲ್ಲಿ ಕಾರ್ಟೂನ್‌ಗಳನ್ನು ತೋರಿಸಲು, ಅವಳಿಗೆ ಕಚಗುಳಿ ಇಡಲು ಒಂದು ಗಂಟೆ ಅಲ್ಲಿ ಕುಳಿತಿದ್ದೆ. ಸಮಯ ಕಳೆದಂತೆ ಬಾಂಧವ್ಯ ಬೆಳೆಯಿತು. ಈ ಸಮಯದಲ್ಲಿ ಅವಳ ಕೀಮೋಥೆರಪಿ ಪ್ರಾರಂಭವಾಯಿತು.
ಇದನ್ನೂ ಓದಿ: ವಿಮಾನದಲ್ಲಿ ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ ಸಹ ಪ್ರಯಾಣಿಕ, ಹಲ್ಲೆಗೊಳಗಾದ ವ್ಯಕ್ತಿ ನಾಪತ್ತೆ
ಕಾಲಾನಂತರದಲ್ಲಿ ನಾನು ಸಂಜೆ ಆಸ್ಪತ್ರೆಗೆ ಬರುವಾಗ ನಮ್ಮ ಕೈಹಿಡಿದು ಮಾತನಾಡಿಸುತ್ತಾಳೆ. ನಾನು ಕೆಲಸ ಮಾಡುವಾಗ ಅವಳು ನನ್ನ ಇಯರ್‌ಫೋನ್‌ಗಳನ್ನು ಬಳಸಿ ಹಾಡುಗಳನ್ನು ಕೇಳುತ್ತಿದ್ದಳು ಎಂದು ವೈದ್ಯರು ನೆನಪಿಸಿಕೊಂಡಿದ್ದಾರೆ. ಇಷ್ಟು ದೊಡ್ಡ ಸಮಸ್ಯೆ ಇದ್ದರು ಆಕೆ ಎಲ್ಲವನ್ನು ಎದುರಿಸಿ ನಿಂತಳು, ಜೀವನದಲ್ಲಿ ಹೋರಾಡುವ ಕಲೆಯನ್ನು ಆಕೆ ನನಗೆ ಕಲಿಸಿದ್ದಳು. ಏನೇ ಆಗಲಿ ಆ ನಗುವನ್ನು ಎಂದಿಗೂ ಬಿಟ್ಟುಕೊಡಬಾರದು. ವೈದ್ಯರು-ರೋಗಿಗಳ ಬಾಂಧವ್ಯವು ಪರೀಕ್ಷೆಗಳು, ಶಸ್ತ್ರಚಿಕಿತ್ಸೆಗಳು ಮತ್ತು ಬಿಲ್‌ಗಳನ್ನು ಮೀರಿದ್ದು ಎಂದು ಆಕೆ ಕಲಿಸಿದ್ದಾಳೆ ಎಂದು ವೈದ್ಯರು ಹೇಳಿದ್ದಾರೆ. ಇನ್ನು ಈ ಪೋಸ್ಟ್ ಎಲ್ಲ ಕಡೆ ವೈರಲ್ ಆಗಿದ್ದು, ಅನೇಕರು ಕಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:24 pm, Sat, 2 August 25